ಪಟ್ಟಣದ ಶಿಕ್ಷಕರ ಭವನದಲ್ಲಿ ವಿಶೇಷಚೇತನರ ದಿನಾಚರಣೆ

ಕೆ.ಆರ್.ಪೇಟೆ. ಡಿ.04:- ವಿಕಲಚೇತನರು ಸಮಾಜದ ಮುಖ್ಯವಾಹಿನಿಗೆ ಬರಲು ಹಾಗೂ ಸರ್ಕಾರದ ವಿವಿಧ ಸೌಲಭ್ಯಗಳನ್ನು ಒದಗಿಸಲು ಎಲ್ಲರೂ ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್ ಎಂ.ಶಿವಮೂರ್ತಿ ತಿಳಿಸಿದರು.
ಅವರು ಪಟ್ಟಣದ ಶಿಕ್ಷಕರ ಭವನದಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಕರ ಸಬಲಿಕರಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ವಿಶೇಷಚೇತನರ ದಿನಾಚರಣೆಯನ್ನು ಉಧ್ಘಾಟಿಸಿ ಮಾತನಾಡಿದರು.
ಅಧಿಕ ಪ್ರಮಾಣದ ಅಂಗವಿಕಲತೆ ಇರುವವರಿಗೆ ಮಾಸಿಕ ಸಹಾಯಧನ ನೀಡಲಾಗುತ್ತಿದೆ. ವಿಕಲಚೇತನರಿಗೆ ವಿವಿಧ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದೆ. ವಿಕಲಚೇತನರನ್ನು ಸಾಮಾನ್ಯ ಜನರು ವಿವಾಹವಾದರೆ ಐವತ್ತು ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತದೆ. ಅಲ್ಲದೇ ಸರ್ಕಾರದ ವಿವಿಧ ಸ್ಥರದ ನೇಮಕಾತಿಗಳಲ್ಲಿ ಮೀಸಲಾತಿಯನ್ನು ನೀಡಲಾಗುತ್ತಿದೆ. ಅನೇಕ ಸ್ವಯಂ ಸೇವಾ ಸಂಸ್ಥೆಗಳು ವಿಕಲಚೇತನರಿಗೆ ಹಲವಾರು ರೀತಿಯ ಸೌಕರ್ಯಗಳನ್ನು ನೀಡಲು ಮುಂದೆ ಬರುತ್ತಿವೆ. ಸರ್ಕಾರ ಅಂಗವಿಕಲ ಮಕ್ಕಳಿಗೆ ಅಂಧರ ಮತ್ತು ಕುರುಡರ ಶಾಲೆಗಳನ್ನು ತೆರದು ಅವರುಗಳಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಅಲ್ಲದೇ ವೃತ್ತಿಪರ ಕೋರ್ಸುಗಳಲ್ಲಿ ಮೀಸಲಾತಿಯನ್ನೂ ನಿಗಧಿಪಡಿಸಲಾಗಿದೆ.
ವಿಕಲಚೇತನರು ಹಲವಾರು ಕ್ಷೇತ್ರಗಳಲಿ ಸಾಧನೆ ಮಾಡುತ್ತಿದ್ದಾರೆ. ಮಂಡ್ಯ ಜಿಲೆಯ ಜಿಲ್ಲಾಧಿಕಾರಿಗಳಾಗಿದ್ದ ಮಂಜುಶ್ರೀ ಬಾರತ ಆಡಳಿತ ಸೇವೆಯಂಥಹ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ಮಂಡ್ಯದಲ್ಲಿಯೇ ಜಿಲ್ಲಾಧಿಕಾರಿಗಳಾಗಿ ಉತ್ತಮ ಆಡಳಿತ ನೀಡಿದ್ದಾರೆ. ಇವರುಗಳು ನಮಗೆ ಮಾದರಿಯಾಗಿದ್ದಾರೆ ಆದ್ದರಿಂದ ವಿಕಲಚೇತನರು ಇವುಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಸವರಾಜ ತುಳಸಪ್ಪ ನಾಯಕ, ಸಿವಿಲ್ ನ್ಯಾಯಾಧೀಶೆ ಪೂಜಾಶೆಟ್ಟಿ, ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಆರ್.ಪ್ರಸನ್ನಕುಮಾರ್, ಉಪಾದ್ಯಕ್ಷ ಇಂದ್ರಕುಮಾರ್, ಕಾರ್ಯದರ್ಶಿ ಡಿ.ಆರ್.ಮೋಹನ್, ಬಿಐಇಆರ್ಟಿ ಗಲಾದ ಆರ್.ಬಿ.ಉದೇಶಗೌಡ, ಎಂ.ಡಿ.ಯೋಗೇಂದ್ರ, ರಾಜಶೇಖರ್, ಪುರಸಭೆಯ ಭಾರತಿ, ಅಂಗವಿಕಲ ಪುನರ್ವಸತಿ ಕಾರ್ಯಕರ್ತರಾದ ಮಾಕವಳ್ಳಿ ದೇವರಸೇಗೌಡ, ಹರ್ಷ, ಚೌಡೇನಹಳ್ಳಿ ರಘು, ಕುಂದೂರು ಪ್ರಕಾಶ್, ತ್ರಿವಣಿ, ಧನಲಕ್ಷ್ಮಿ, ಸೇರಿದಂತೆ ಹಲವರು ಹಾಜರಿದ್ದರು.