ಪಟ್ಟಣದ ಜೋಡು ಕೆರೆಗಳ ಅಭಿವೃದ್ಧಿ ಬಗ್ಗೆ ಸವದಿ ಚರ್ಚೆ

ಅಥಣಿ : ಆ.30:ಪಟ್ಟಣದ ಮಧ್ಯಭಾಗದಲ್ಲಿರುವ ಐತಿಹಾಸಿಕ ಜೋಡು ಕೆರೆಗಳನ್ನು ಅಭಿವೃದ್ಧಿಗೊಳಿಸಿ ವಾಕಿಂಗ್ ಟ್ರ್ಯಾಕ್, ಗಿಡ-ಮರಗಳು ಹಾಗೂ ಉದ್ಯಾನ ಒಳಗೊಂಡಂತೆ ಸಾರ್ವಜನಿಕ ಬಳಕೆಗೆ ಅನುಕೂಲವಾಗುವಂತೆ ಎರಡು ಕೆರೆಗಳನ್ನು ಸುಂದರವಾಗಿ ಅಭಿವೃದ್ಧಿಗೊಳಿಸುವ ಯೋಜನೆ ರೂಪಿಸುವ ಕುರಿತು ಯುವ ನಾಯಕ ಚಿದಾನಂದ ಸವದಿ ಅವರು ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಅವರೊಂದಿಗೆ ಚರ್ಚಿಸಿ ಅಥಣಿ ಪಟ್ಟಣದಲ್ಲಿರುವ ಈ ಎರಡು ಕೆರೆಗಳು ಐತಿಹಾಸಿಕ ಕೆರೆಗಳಿರುವುದರಿಂದ ಇವುಗಳನ್ನು ಜೀರ್ಣೋದ್ಧಾರಗೊಳಿಸುವ ಅಗತ್ಯವಿದೆ ಎಂದು ಯುವ ನಾಯಕ ಚಿದಾನಂದ ಸವದಿ ಹೇಳಿದರು,
ಅವರು ಮಂಗಳವಾರ ಪಟ್ಟಣದ ಮಧ್ಯಭಾಗದಲ್ಲಿರುವ ಐತಿಹಾಸಿಕ ಜೋಡಿ ಕೆರೆಗಳ ಸ್ಥಳಕ್ಕೆ ಇಂದು ಭೇಟಿ ನೀಡಿ ವೀಕ್ಷಿಸಿದರು.
ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಮಾತನಾಡಿ ಮೊದಲ ಹಂತದಲ್ಲಿ ಎರಡೂ ಕೆರೆಗಳನ್ನು ಸ್ವಚ್ಛಗೊಳಿಸಲಾಗುವುದು. ಬಳಿಕ ಕೆರೆಗಳ ಸುತ್ತ ಸೌಂದರ್ಯೀಕರಣಗೊಳಿಸುವ ಯೋಜನೆಯನ್ನು ಶೀಘ್ರದಲ್ಲಿಯೇ ಕೈಗೊಳ್ಳಲಾಗುವುದು ಕೆರೆಗಳ ಸುತ್ತಮುತ್ತ ಯಾರೂ ಕೂಡ ಗಲೀಜು ಮಾಡದೇ ಸ್ವಚ್ಛತೆ ಕಾಪಾಡಬೇಕು ಕೆರೆಗಳ ಅಭಿವೃದ್ಧಿಗೆ ಪಟ್ಟಣದ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಾರ್ಡ್ ನಂ. 3ರ ಪುರಸಭೆ ಸದಸ್ಯರ ಸಂತೋಷ ಸಾವಡಕರ್, ಮಹಾಂತೇಶ ಠಕ್ಕಣ್ಣವರ, ಸೇರಿದಂತೆ ಇತರರು ಉಪಸ್ಥಿತರಿದ್ದರು.