ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಅಧಿಕಾರಿಗಳು ಮುಂಜಾಗ್ರತೆ ವಹಿಸಿ : ಶಾಸಕ ಪಾಟೀಲ್

(ಸಂಜೆವಾಣಿ ವಾರ್ತೆ)
ಹುಮನಾಬಾದ :ಮಾ.26:ಪುರಸಭೆ ಆಡಳಿತ ಮಂಡಳಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು ಇಲ್ಲಿನ ಜನರ ನಿರೀಕ್ಷೆಗೆ ಅನುಗುಣವಾಗಿ ಕೆಲಸ ಮಾಡುತ್ತಿಲ್ಲ. ಪಟ್ಟಣದ ಜನರಿಗೆ ನೀಡಬೇಕಾದ ಮೂಲ ಸೌಕರ್ಯಗಳು ಕಲ್ಪಿಸುವ ಪ್ರಾಮಾಣಿಕ ಕೆಲಸ ಮಾಡುತ್ತಿಲ್ಲ ಎಂದು ಶಾಸಕ ರಾಜಶೇಖರ ಪಾಟೀಲ ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪುರಸಭೆಯಲ್ಲಿ ಶುಕ್ರವಾರ ನಡೆದ 2023-245 ಸಾಲಿನ ಆಯವ್ಯಯದ 81.62 ಲಕ್ಷದ ಉಳಿತಾಯ ಬಜೆಟ್ ಅನುಮೋದನೆ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದ ಜನರಿಗೆ ನಿಗದಿತ ಸಮಯಕ್ಕೆ ಕುಡಿಯುವ ನೀರು ಪುರಕ್ಕೆ ಮಾಡುವಲ್ಲಿ ಪುರಸಭೆ ಸಂಪೂರ್ಣ ವಿಫಲವಾಗಿದೆ. ಬಡಾವಣೆ ಜನರು ನನಗೂ ಸೇರಿ ಎಲ್ಲಾ ಪುರಸಭೆ ಸದಸ್ಯರಿಗೆ ಛೀಮಾರಿ ಹಾಕುತ್ತಿದ್ದಾರೆ.
ಎಲ್ಲಾ ಕೆಲಸಗಳನ್ನು ಶಾಸಕರು ಮಾಡಲು * ಸಾಧ್ಯವಿಲ್ಲ ಪಟ್ಟಣದ ಜನರಿಗೆ ಮೂಲ ಸೌಕರ್ಯ ನೀಡುವುದು ಪುರಸಭೆಯ ಮುಖ್ಯ ಕರ್ತವ್ಯವಾಗಿದೆ. ಅಧ್ಯಕ್ಷರು, ಉಪಾಧ್ಯಕ್ಷರು ಮುಖ್ಯಾಧಿಕಾರಿಗಳು ರ ಆಯಾ ಬಡಾವಣೆ ಸದಸ್ಯರನ್ನು ಕರೆದು ಈ ಸುತ್ತಾಡಬೇಕು. ಎಲ್ಲಿ ಸಮಸ್ಯೆ ಇದೆ 2 ಎಂದು ತಿಳಿದುಕೊಂಡು ಪರಿಹಾರಕ್ಕೆ – ಮುಂದಾಗಬೇಕು. ಅನೇಕ ಅನುದಾನ ಖರ್ಚು ಮಾಡಲಾಗುತ್ತಿದೆ. ಆದರೆ ಜನರ – ನಿರೀಕ್ಷೆಯಂತೆ ಕೆಲಸ ಮಾತ್ರ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಡಿಸಿದರು.
ಮುಖ್ಯಾಧಿಕಾರಿ ಶಿವಕುಮಾರ, ಅಧ್ಯಕ್ಷೆ * ನೀತು ಶರ್ಮಾ, ಉಪಾಧ್ಯಕ್ಷೆ ಸತ್ಯವತಿ ಮಠಪತಿ, ಅಪರ್‍ಮಿಯಾ, `ಅನಿಲ ಪಲ್ಲರಿ, ವೀರೇಶ ಸೀಗಿ, ವಿಜಯಕುಮಾರ ದುರ್ಗ, ವಿಜಯಕುಮಾರ ಸಾಯಣ್ಣ ಮಹೇಶ ಪಾಟೀಲ, ಧನಲಕ್ಷ್ಮಿ ಸವೀತಾ ಅಶೋಕ, ಅಮೃತರಾವ, ಮುಕರಮ್, ರಾಜರೆಡ್ಡಿ ಶಿವಲಿಂಗ ಸ್ವಾಮಿ, ಎಂಡಿ ಜಾವಿದ್ ಇದ್ದರು.