ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಪತ್ರಿಕಾಗೋಷ್ಠಿ

ತಿ.ನರಸೀಪುರ.ಜ.06 -ಸಾಮಾಜಿಕ ಹಾಗು ಆರ್ಥಿಕವಾಗಿ ಹಿಂದುಳಿದಿರುವ ಕ್ಷೌರಿಕ ಸಮಾಜದ ಯವಕನ ಮೇಲೆ ವಿನಾಕಾರಣ ಹಲ್ಲೆ ಮಾಡಿರುವ ಪೆÇೀಲೀಸರು ಹಾಗು ಗೃಹ ರಕ್ಷಕದಳದ ಸಿಬ್ಬಂದಿಯನ್ನು ಕೂಡಲೇ ಅಮಾನತ್ತುಗೊಳಿಸಿ ಶಿಕ್ಷೆಗೊಳ ಪಡಿಸುವಂತೆಪಡಿಸುವಂತೆಪಡಿಸುವಂತೆಪಡಿಸುವಂತೆ ಕ್ಷೌರಿಕ ಮೀಸಲಾತಿ ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ಬಿ.ಶಿವ ಕುಮಾರ್ ಒತ್ತಾಯಿಸಿದರು.
ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬೈಕ್ ನಲ್ಲಿ ತಮ್ಮ ಚಿಕ್ಕಮ್ಮರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಚೇತನ್ ಎಂಬ ಕ್ಷೌರಿಕ ಯವಕನ ಬೈಕ್ ನ ಬೀಗವನ್ನು ಕಸಿದುಕೊಂಡು ಪೆÇೀಲೀಸರು ಹಿಗ್ಗಾಮಗ್ಗ ಹಲ್ಲೆ ನಡೆಸಿರುವ ಪ್ರಕರಣ ಖಂಡನೀಯ ವಾಗಿದ್ದು ಪೆÇೀಲೀಸರು ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ್ದಾರೆ ಎಂದು ಪೆÇೀಲೀಸರ ವಿರುದ್ಧ ಕಿಡಿಕಾರಿದರು.
ಕ್ಷೌರಿಕ ಸಮಾಜದವರು ಅಲ್ಪ ಸಂಖ್ಯಾತರಾಗಿದ್ದು ಸಾರ್ವಜನಿಕ ಜೀವನದಲ್ಲಿ ನಮಗೆ ರಕ್ಷಣೆ ಇಲ್ಲದಂತಾಗಿದೆ.ಯಾವುದೋ ದೊಡ್ಡ ಅಪರಾಧ ಮಾಡಿದವರಿಗೂ ನೀಡದ ಶಿಕ್ಷೆಯನ್ನು ಸಮಾಜದ ಯುವಕನಿಗೆ ನೀಡಿದ್ದು ಸಾರ್ವಜನಿಕ ಸ್ಥಳದಲ್ಲಿ ಆತನಿಗೆ ಬೂಟ್ ಕಾಲಿನಲ್ಲಿ ಎಗರಿ ಎಗರಿ ಒದೆಯಲಾಗಿದೆ.ಇಷ್ಟಕ್ಕೂ ಪೆÇೀಲೀಸರಿಗೆ ಒದೆಯುವ ಹಕ್ಕು ನೀಡಿದವರು ಯಾರು ,ಯಾವ ಅಪರಾಧಕ್ಕಾಗಿ ಆತನಿಗೆ ಬೂಟ್ ಕಾಲಿನಲ್ಲಿ ಒದ್ದಿದ್ದೀರಾ ಎಂದು ಪ್ರಶ್ನಿಸಿದ ಶಿವಕುಮಾರ್ ಇದೇ ಘಟನೆ ದಲಿತ ಸಮಾಜದವರಿಗಾಗಿದ್ದರೆ ಇಷ್ಟರಲ್ಲಾಗಲೇ ಡಿವೈಎಸ್ಪಿ ಹಾಗು ಸಿಪಿಐ ಸಸ್ಪೆಂಡ್ ಆಗುತ್ತಿದ್ದರು.ಆದರೆ ನಮ್ಮದು ದನಿ ಇಲ್ಲದ ಸಮಾಜವಾದ್ದರಿಂದ ಪೆÇೀಲೀಸರ ದೌರ್ಜನ್ಯ ಪ್ರಶ್ನಿಸಲು ಆಗುತ್ತಿಲ್ಲ ಎಂದರು.
ಕಣ್ಣೊರೆಸಲು ಎಫ್ ಐ ಆರ್
ಘಟನೆ ನಡೆದು ನಾಲ್ಕು ದಿನಗಳ ನಂತರ ರೈತಸಂಘ ಹಾಗು ದಲಿತ ಸಂಘಟನೆಗಳು ಘಟನೆಯನ್ನು ಖಂಡಿಸಿದ ಹಿನ್ನೆಲೆಯಲ್ಲಿ ಪೆÇೀಲೀಸರು ಕಾಟಾಚಾರಕ್ಕೆ ಎಫ್ ಐಆರ್ ದಾಖಲು ಮಾಡಿದ್ದು ಸಮಾಜಕ್ಕೆ ನ್ಯಾಯ ದೊರಕಿಸಿಕೊಡುವ ಯಾವುದೇ ಅಂಶ ಅದರಲ್ಲಿಲ್ಲ.ಪೆÇೀಲೀಸರು ಕಣ್ಣೊರೆಸಲು ಅನುಕೂಲವಲ್ಲದ ಅಂಶಗಳನ್ನು ಎಫ್ ಐಆರ್ ಸೇರಿಸಿದ್ದಾರೆ ಎಂದು ದೂರಿದರು.
ಜಾತಿ ನಿಂದನೆಗೆ ಒಳಪಡಿಸಿ
ಸಮಾಜದ ಯುವಕ ಚೇತನ್ ಮೇಲೆ ಹಲ್ಲೆ ನಡೆಸುವ ವೇಳೆ ಪೆÇೀಲೀಸರು ಹಜಾಮ ಎಂಬ ಪದ ಬಳಕೆ ಮಾಡುವ ಮೂಲಕ ನಮ್ಮ ಕಾಯಕ ಹಾಗು ಸಮಾಜವನ್ನು ನಿಂದಿಸಿದ್ದಾರೆ.ಇದರಿಂದಾಗಿಯೇ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು ಸರ್ಕಾರ ಹಜಾಮ ಎಂಬ ಪದವನ್ನು ಜಾತಿ ನಿಂದನೆ ಕಾಯ್ದೆ ವ್ಯಾಪ್ತಿಗೆ ತರಬೇಕೆಂದು ಅವರು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಎನ್.ಆರ್.ನಾಗೇಶ್, ತಾಲೂಕು ಅಧ್ಯಕ್ಷ ನಾಗೇಂದ್ರ,ರೈತ ಸಂಘದ ಅಧ್ಯಕ್ಷ ಕೆ.ಕುಮಾರಸ್ವಾಮಿ,ಟೌನ್ ಅಧ್ಯಕ್ಷ ಈ.ರಾಜು,ಅತ್ತಹಳ್ಳಿ ಶಿವ ನಂಜು,ಕಾರ್ಯಾಧ್ಯಕ್ಷ ಕಳ್ಳೀಪುರ ನಾರಾಯಣ್, ತಾಲೂಕು ಉಪಾಧ್ಯಕ್ಷ ಗಣೇಶ್, ಸಂಚಾಲಕ ಸಿದ್ದರಾಜು, ಮುರಳಿ,ನಾಗರಾಜು,ಸಿದ್ದೇಶ,ಕೃಷ್ಣ, ಲೋಕೇಶ್ ನಾಗಪ್ಪ,ಎನ್.ನರಸಿಂಹ ಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.