ಪಟ್ಟಣದ ಅಭಿವೃದ್ಧಿಗೆ ಹೆಚ್ಚು ಒತ್ತು, ಮನವಿ

ವಿಜಯಪುರ.ಮಾ೧೫: ಅವಳಿ ಜವಳಿ ಪಟ್ಟಣಗಳೆಂದು ಹೆಸರು ವಾಸಿಯಾಗಿದ್ದ ದೇವನಹಳ್ಳಿ ಹಾಗೂ ವಿಜಯಪುರ ಪಟ್ಟಣಗಳಲ್ಲಿ ದೇವನಹಳ್ಳಿ ಸಾಕಷ್ಟು ಅಭಿವೃದ್ಧಿ ಸಾಧಿಸುತ್ತಿದ್ದು, ವಿಜಯಪುರ ಪಟ್ಟಣದ ಅಭಿವೃದ್ಧಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹೆಚ್ಚಿನ ಒತ್ತು ನೀಡಬೇಕೆಂದು, ವಿಜಯಪುರ ಪುರಸಭಾ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಎಂ ಸತೀಶ್ ಕುಮಾರ್ ಬಯಪ ನೂತನ ಅಧ್ಯಕ್ಷರಾದ ಶಾಂತಕುಮಾರ್‌ರವರಲ್ಲಿ ಮನವಿ ಮಾಡಿದರು.
ಅವರು ದೇವನಹಳ್ಳಿ ಬಯಪ (ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ) ಕಚೇರಿಯಲ್ಲಿ ಬಯಪ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶಾಂತಕುಮಾರ್ ಹಾಗೂ ಸದಸ್ಯರುಗಳಾದ ರಾಮಚಂದ್ರಪ್ಪ ಮತ್ತು ಪ್ರಸನ್ನ ರವರುಗಳನ್ನು ಅಭಿನಂದಿಸಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ವಿಜಯಪುರ ಪುರಸಭೆಯ ಮಾಜಿ ಸದಸ್ಯರುಗಳಾದ ಸಂಪತ್ ಕುಮಾರ್, ವೀರಣ್ಣ, ಹರೀಶ್, ಮುನಿಚಿನ್ನಪ್ಪ, ಮುನಿಕೃಷ್ಣ, ಮುನಿರಾಜು, ಬಾರ್ ಸಂಪತ್, ಆರ್ ಎಂ ಸಿಟಿ ಮಂಜುನಾಥ್, ಮರವೇ ಕೆಂಪಣ್ಣ, ಹರೀಶ್, ಸೈಫುಲ್ಲಾ, ನಂಜಣ್ಣ, ಬಿಜ್ಜವಾರ ನಾಗರಾಜ್, ಕರವೇ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.