ಪಟ್ಟಣದಾದ್ಯಂತ ಖಾಕಿ ಸರ್ಪಗಾವಲು

ಕಾಳಗಿ. ಏ.23 : ಪ್ರತಿನಿತ್ಯ ಮಹಾಮಾರಿ ಕೊರೋನಾ ಮಿತಿಮೀರಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಗುರುವಾರ ಬೆಳಿಗ್ಗೆಯಿಂದಲೇ ಇಲ್ಲಿಯ ಸಿಪಿಐ ವಿನಾಯಕ ಅವರ ನೇತೃತ್ವದ ಪಿಎಸ್ಐ ದಿವ್ಯ ಮಹಾದೇವ ಪೋಲೀಸ್ ತಂಡ ಮಿಂಚಿನ ಸಂಚಾರ ಮಾಡಿ, ದಿನಸಿ ಅಂಗಡಿ, ಹಾಲು, ಹೆಣ್ಣು ಸೇರಿ ಕೆಲವು ಅವಶ್ಯಕ ವಸ್ತುಗಳ ಹೊರತುಪಡಿಸಿ ಉಳಿದೆಲ್ಲಾ ವ್ಯಾಪಾರ ವಹಿವಾಟುಗಳನ್ನು ಸಂಪೂರ್ಣ ಬಂದ್ ಮಾಡಿಸಿದರು.
ಪ್ರತಿನಿತ್ಯ ದಂತೆ ಪ್ರಾರಂಭಗೊಂಡ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿರುವುದರಿಂದ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.
ಬಟ್ಟೆ ವ್ಯಾಪಾರಿಗಳು, ಹೊಟೆಲ್ ಮಾಲಿಕರು, ಮಧ್ಯೆ ಮಾರಾಟಗಾರರು, ಟೀ ಪಾಯಿಂಟ್ ಗಳು, ಸೇರಿದಂತೆ ಅನೇಕ ವ್ಯಾಪಾರಿಗಳು ಬಿಕೋ ಎನ್ನುಂತಾಯಿತು.
ಮತ್ತೆ ಲಾಕ್ ಡೌನ್ ಗುಮ್ಮ ಪ್ರಾರಂಭವಾಯಿತೆಂಬ ಭಯದಿಂದ ಜನತೆ ಮುಂದೇನು ಮಾಡುವುದೆಂದು ಚಿಂತಾಕ್ರಾಂತರಾಗಿ ಕುಳಿತುಕೊಳ್ಳುವಂತಾಗಿದೆ.
ಇನ್ನೂ ಕೆಲವು ನಿರುದ್ಯೋಗಿ ಯುವಕರು ಹಾಗೂ ಸಣ್ಣ ಪುಟ್ಟ ವ್ಯಾಪಾರಿಗಳು ಮೇ 4ರ ವರೆಗೆ ಊರಿನ ಸಾವಾಸವೇ ಬೇಡವೆಂದು ಶುಕ್ರವಾರದಿಂದ ತಮ್ಮ ತಮ್ಮ ಮನೆಗಳಿಂದ ಮೃಷ್ಟಾನ್ನ ಭೋಜನ ಮಾಡಿ ಕೊಂಡು ಇಸ್ಪಿಟ್ ಸೇಟ್ ಗಳು ತೆಗೆದುಕೊಂಡು ದೂರದ ಹೊಲಗದ್ದೆಗಳಿಗೆ ಮೋಜು ಮಸ್ತಿ ಮಾಡಲು ಸಂಚು ರೂಪಿಸುತ್ತಿದ್ದರೆ ಇನ್ನೂ ಬಡಜನತೆ ಕೆಲಸವಿಲ್ಲದೆ ಕುಳಿತು ಕಳೆದ ವರ್ಷ ಕೀಪ್ ಹೊಂದಿದಂತೆ ಈ ಬಾರಿ ಯಾವ ಪುಣ್ಯಾತ್ಮರು ಬಂದು ಕಾಳು ಕಡ್ಡಿಕೊಡಮಾಡಿಕೊಡುವರೋ ಎಂದು ಕಾದು ಕುಳಿತಿರುವ ಸಂಗತಿ ಕಾಣುತ್ತಿದೆ.
ಕೊವಿಡ-19 ಕೊರೋನಾ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು. ಒಂದು ವೇಳೆ ಅಧೀಕ ಪ್ರಸಂಗತನ ಮಾಡಿ ಕಾನೂನು ಕೈಗೆತ್ತಿಕೊಂಡು ಮನಬಂದಂತೆ ಮನೆಹೊರಗಡೆ ಬಂದರೆ ಮೂಳೆಸಡಿಲಾಗುವುದು ಗ್ಯಾರಂಟಿ ಎಂದು ಸಿಪಿಐ ವಿನಾಯಕ ಖಡಕ್ ವಾರ್ನಿಂಗ್ ಮಾಡಿದರು.
ಲಾಕ್ ಡೌನ್ ನೆಪದಲ್ಲಿ ದಿನಸಿ ಅಂಗಡಿಯವರು ದಿನಬಳಕೆ ಸಾಮಾನುಗಳು ಬೆಲೆ ಅಡ್ಡಾದಿಡ್ಡಿಯಾಗಿ ಮಾರಾಟ ಮಾಡುತ್ತಿದ್ದಾರೆಂಬ ದೂರುಗಳು ಬರುತ್ತಿವೆ ಕಾರಣ ಅಂಗಡಿ ಮಾಲೀಕರು ಸೇರಿ ಬೆರೆ ಬೆರೆ ವ್ಯಾಪಾರಿಗಳು ಎಚ್ಚರಿಕೆಯಿಂದ ಪ್ರಮಾಣಿಕ ದೂರದಲ್ಲಿ ಸಾಮಗ್ರಿಗಳು ನೀಡಬೆಕೆಂದು ಎಚ್ಚರಿಸಿದ ಸಿಪಿಐ ಅನಾವಶ್ಯಕ ವಾಗಿ ರೋಡಿನಲ್ಲಿ ಓಡಾಡುತ್ತಿರುವ ಪೂಂಡ ಪೋಕರಿಗಳಿಗೆ ಪ್ರಥಮ ಹಂತದ ಚೂರುಕು ಸಹ ಮುಟ್ಟಿಸಿದರು.
ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸ್ವತಃ ಎದುರುಗಡೆ ನಿಂತು ಮುಚ್ಚಿದ ಪೋಲೀಸ್ ಇಲಾಖೆ ಸಿಬ್ಬಂದಿಗಳು, ಗಲ್ಲಿ ಗಲ್ಲಿಗಳಲ್ಲಿ ಗಸ್ತು ಹೊಡೆದು ಪಟ್ಟಣದಲ್ಲಿ ಬಿಕೋ ಎನ್ನುವ ವಾತಾವರಣ ನಿರ್ಮಾಣಮಾಡಿದರು.
ಕಾಳಗಿ ಬಂದ್ ಮಾಡಲು ಹೊರಟ ಪೋಲೀಸ್ ಇಲಾಖೆಗೆ ಸ್ಥಳೀಯ ಪಟ್ಟಣ ಪಂಚಾಯಿತಿ ಆಡಳಿತ ಸಾಥ್ ನೀಡಿದರು.
ಕಾಳಗಿ ಸಿಪಿಐ ವಿನಾಯಕ, ಪಿಎಸ್ಐ ದಿವ್ಯಾಮಹಾದೇವ, ಪಟ್ಟಣ ಪಂಚಾಯಿತಿ ಕಿರಿಯ ಆರೋಗ್ಯ ನಿರಿಕ್ಷಕ ಆನಂದ ಕಾಶಿ, ದತ್ತಾತ್ರೇಯ ಕಲಾಲ, ಉದಯಕುಮಾರ, ವಿಶಾಲ ಮೋಟಗಿ, ಕಾಳೇಶ್ವರ ಮಡಿವಾಳ ಸೇರಿದಂತೆ ಅನೇಕರಿದ್ದರು.