ಪಟ್ಟಣದಲ್ಲಿ ವಿಜಯೇಂದ್ರ ಮತಯಾಚನೆ

ಸಂಜೆವಾಣಿ ವಾರ್ತೆ
ನಂಜನಗೂಡು: ಏ.22:- ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ನಂಜನಗೂಡು ತಾಲೂಕಿನಿಂದ ಪಟ್ಟಣದವರೆಗೂ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಬಾಲ್ ರಾಜ್ ಪರ ಮತಯಾಚನೆ ಮಾಡಿದರು.
ಮುಂದುವರೆದ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸುಳ್ಳಿನ ಪಕ್ಷ ಪರು ಐದು ಗ್ಯಾರಂಟಿ ನೆಪದಲ್ಲಿ ಅಧಿಕಾರಕ್ಕೆ ಬಂದು ಅದನ್ನು ಕೂಡ ಸರಿಯಾಗಿ ನಿಭಾಯಿಸದೆ ಯಾವ ಕ್ಷೇತ್ರದಲ್ಲಿ ಕೂಡ ಬರಗಾಲ ಉಂಟಾಗಿದೆ ಕುಡಿಯಲು ನೀರಿಲ್ಲ ಯಾವ ಒಂದು ಕ್ಷೇತ್ರದಲ್ಲೂ ಕೂಡ ಒಂದು ರೂಪಾಯಿ ಅಭಿವೃದ್ಧಿ ಕೆಲಸ ಆಗಿಲ್ಲ ಬರೀ ಸುಳ್ಳು ಹೇಳಿಕೊಂಡು ಅಧಿಕಾರ ನಡೆಸುತ್ತಿದ್ದಾರೆ ಆದ್ದರಿಂದ ಎಲ್ಲರೂ ಗ್ಯಾರಂಟಿಗಳನ್ನು ಕೈ ಬಿಟ್ಟು ದೇಶದ ಅಭಿವೃದ್ಧಿಗೆ ಮತ್ತೊಮ್ಮೆ ನರೇಂದ್ರ ಮೋದಿಜಿ ಪ್ರಧಾನಮಂತ್ರಿಯಾಗಲು ಪ್ರತಿಯೊಬ್ಬರು ತಮ್ಮ ಅಮೂಲ್ಯವಾದ ಮತವನ್ನು ಬಿಜೆಪಿ ಪಕ್ಷಕ್ಕೆ ನೀಡಬೇಕೆಂದು ಮನವಿ ಮಾಡಿದರು.
ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಪಟ್ಟಣ ಅಧ್ಯಕ್ಷ ಸಿದ್ದರಾಜು ನೇತೃತ್ವದಲ್ಲಿ ಸಾವಿರಾರು ಪಕ್ಷದ ಕಾರ್ಯಕರ್ತರು ಮುಖಂಡರು ಒಳಗೊಂಡು ತಮಟೆ ಡೋಲು ಮತ್ತು ಬಾರಿ ಗಾತ್ರದ ಹೂವಿನ ಹಾರ ಹಾಕಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಹರ್ಷವರ್ಧನ್ ಮತ್ತು ಕೊಳ್ಳೇಗಾಲ ಮಾಜಿ ಶಾಸಕ ಮಹೇಶ್ ಪಟ್ಟಣ ಅಧ್ಯಕ್ಷ ಸಿದ್ದರಾಜು ಅವಿನಾಶ್ ಗೌಡ ನಗರಸಭೆ ಸದಸ್ಯ ಮಾದೇವ ಪ್ರಸಾದ್ ಹಾಗೂ ಮಹೇಶ್ ಹತ್ತಿ ಕಾನೆ ಬಾಲಚಂದ್ರ ಪಟ್ಟಣ ಮಾಜಿ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ ಸೇರಿದಂತೆ ಇತರರು ಇದ್ದರು.