ಪಟ್ಟಣದಲ್ಲಿ ಬದಲಾವಣೆ ತರಲು ಶ್ರಮಿಸಿ-ಶಾಸಕ ನಿಂಬಣ್ಣವರ

ಅಳ್ನಾವರ,ನ 10- ನೂತನ ತಾಲ್ಲೂಕ ಕೇಂದ್ರದ ಮುಖ್ಯ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಚಿಂತನೆ ಮಾಡಬೇಕು. ಹೊಸತನ ತರುವ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಶ್ರಮಿಸಿ ಎಂದು ಶಾಸಕ ಸಿ.ಎಂ.ನಿಂಬಣ್ಣವರ ಹೇಳಿದರು.
ಪಟ್ಟಣ ಪಂಚಾಯ್ತಿ ನೂತನ ಅಧ್ಯಕ್ಷೆ ಮಂಗಳಾ ರವಳಪ್ಪನವರ , ಪ.ಪಂ.ಸದಸ್ಯೆ ನೇತ್ರಾವತಿ ಕಡಕೋಳ ಹಾಗೂ ಮೈಸೂರು ವಿಭಾಗದ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ನಾರಾಯಣ ಮೋರೆ ಅವರನ್ನು ಸತ್ಕರಿಸಿ ಮಾತನಾಡಿದ ಅವರು, ನೊಂದವರ ಕಣ್ಣೀರು ಒರೆಸಲು ಜನಪ್ರತಿನಿಧಿಗಳು ಮುಂದಾಗಬೇಕು ಎಂದರು.
ಪಟ್ಟಣ ಪಂಚಾಯ್ತಿ ಆಡಳಿತ ಬಿಜೆಪಿ ಇದೆ. ಶಾಸಕರು ಹಾಗೂ ರಾಜ್ಯದಲ್ಲಿ ಕೂಡಾ ಬಿಜೆಪಿ ಪಕ್ಷದ ಆಡಳಿತ ಇದೆ. ಕಾರಣ ಅಭಿವೃದ್ಧಿ ಕಾರ್ಯ ತೀವೃಗೊಳಿಸಬೇಕು ಮಾದರಿ ಪಟ್ಟಣ ಮಾಡಲು ಮುಂದಾಲೋಚನೆ ಇಟ್ಟುಕೊಳ್ಳಬೇಕು. ಪಟ್ಟಣದಲ್ಲಿ ಏನು ಕಾರ್ಯ ಆಗಬೇಕು ಎನ್ನುವುದರ ಬಗ್ಗೆ ಪಟ್ಟಿ ಮಾಡಿಕೊಂಡು ಆಧ್ಯತೆ ಮೇರೆಗೆ ಪ್ರಗತಿಗೆ ಕಾರ್ಯ ಸೂಚಿ ಹಾಕಿಕೊಳ್ಳಬೇಕು, ಸರ್ಕಾರದಿಂದ ಪಟ್ಟಣಕ್ಕೆ ಹೆಚ್ಚಿನ ಅನುಧಾನ ತರಲು ತಾವು ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಪಟ್ಟಣದಲ್ಲಿ ನಿರಾಶ್ರಿತರ ಸಂಖ್ಯೆ ಬಹಳಷ್ಟು ಇದೆ. ಹೊರ ವಲಯದಲ್ಲಿ 40 ಎಕರೆ ಭೂಮಿ ಖರಿದಿಸಿ, 1500 ನಿವೇಶನ ಹಂಚುವ ಗುರಿ ಇದೆ. ಕಲಘಟಗಿ ಪಟ್ಟಣದಲ್ಲಿ ಕೂಡಾ 1500 ನಿವೇಶನ ಹಂಚುವ ಗುರಿ ಇದೆ. ಕಲಘಟಗಿ ಕ್ಷೇತ್ರದ ವಿವಿಧ ಶಾಲೆಗಳ ಕಟ್ಟಡ ಹಾಗೂ ಅಂಗನವಾಡಿ ಕಟ್ಟಡ ಕಟ್ಟಲು ಹೆಚ್ಚಿನ ಅನುಧಾನ ತರಲಾಗಿದೆ. ಧಾರವಾಡ ಜಿಲ್ಲೆಯಲ್ಲಿಯೇ ನಮ್ಮ ಕ್ಷೇತ್ರಕ್ಕೆ ಶಾಲಾ ಕಟ್ಟಡ ಕಟ್ಟಲು ಅನುಧಾನ ಬಿಡುಗಡೆ ಆಗಿದೆ. ನೂತನ ತಾಲ್ಲೂಕ ಕೇಂದ್ರಕ್ಕೆ ವಿವಿಧ ಇಲಾಖೆಗಳು ತರಲು ಹೆಚ್ಚಿನ ಮುತವರ್ಜಿ ವಹಿಸಲಾಗುವದು. ಸಧ್ಯ ತಾತ್ಕಾಲಿಕವಾಗಿ ವಾರದಲ್ಲಿ ಎರಡು ದಿನ ನೊಂದಣಿ ಕಚೇರಿ ತರಲಾಗುವದು. ಹಂತ ಹಂತವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವದು ಎಂದರು.
ಮೈಸೂರ ವಿಭಾಗದ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ನಾರಾಯಣ ಮೋರೆ, ಪಟ್ಟಣ ಪಂಚಾಯ್ತಿ ಸದಸ್ಯೆ ನೇತ್ರಾವತಿ ಕಡಕೋಳ, ಅಶೋಕ ಬರಗುಂಡಿ,ಆನಂತ ರವಳಪ್ಪನವರ, ಸಂತೋಷ ಕಮ್ಮಾರ, ದತ್ತಾ ಪಟ್ಟಣ ಇದ್ದರು.