ಪಟ್ಟಣದಲ್ಲಿ ಗೌರಿ ಹುಣ್ಣಿಮೆ ಅಂಗವಾಗಿ ಅಕ್ಕರೆಯ ಸಕ್ಕರೆಯ ಗೊಂಬೆ ಮಾರಾಟ ಬಲು ಜೋರು

ಸಂಡೂರು :ಅ:31: ಒಂದು ಕಡೆ ಮಳೆಯಿಲ್ಲದೆ ಬರದ ಛಾಯೆ ಮತ್ತೊಂದು ಕಡೆ ಹಬ್ಬಗಳ ಮೇಲೆ ಹಬ್ಬಗಳ ಆಗಮನ ವಾಗಿದ್ದು ಮಹಿಳೆಯರ, ಅದರಲ್ಲೂ ಬಾಲಕೀಯರ ಅತಿ ಅನಂದದ ಹಬ್ಬವೆಂದರೆ ಗೌರಿ ಹುಣ್ಣಿಮೆಯ ಹಬ್ಬವಾಗಿದೆ.
ಗೌರಿ ಹುಣ್ಣಿಮೆಗೆಗೂ ಸಹ ಕರೋನಾ ಕಂಠಕ ಕಾಡುತ್ತಿದೆ, ಅದರ ಮದ್ಯದಲ್ಲಿಯೇ ಹಬ್ಬ ಆಚರನೆ ಸಡಗರದಿಂದ ನಡೆದಿದೆ. ಗೌರಿ ಹುಣ್ಣಿಮೆ ಸಂಪ್ರದಾಯದಂತೆ ಎರಡು ಹಂತಗಳಲ್ಲಿ ಬರುತ್ತದೆ, ಒಂದು ಸಣ್ಣ ಗೌರಿ ಹುಣ್ಣಿಮೆ ಮತ್ತು ದೊಡ್ಡ ಗೌರಿ ಹುಣ್ಣಿಮೆ ದಸರೆಯ ನಂತರದಲ್ಲಿ ಬಂದಿರುವ ಸಣ್ಣ ಗೌರಿ ಹುಣ್ಣಿಮೆಗೆ ದೇವಸ್ಥಾನದಲ್ಲಿ ಸಹಜವಾಗಿ ಈಶ್ವರ ದೇವಸ್ಥಾನದಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿ ನಿತ್ಯ ವಿವಿಧ ಹೂಗಳಿಂದ ಪೂಜಿಸುತ್ತಾ ಬರುವಂತಹ ಸಂಪ್ರದಾಯ, ಈ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಬಹು ವಿಶೇಷವಾಗಿರುತ್ತದೆ, ಬೆಳದಿಂಗಳ ಬೆಳಕಿನಲ್ಲಿ ಬಾಲಕೀಯರು ಸುಂದರ ಹುಡುಗೆ ತೊಟ್ಟು ಅರತಿ ತಟ್ಟೆಯಲ್ಲಿ ನಿತ್ಯ ಒಂದು ರೀತಿಯ ಹೂಗಳಿಂದ ಅಲಂಕಾರ ಮಾಡಿಕೊಂಡು ಬಂದು ಗೌರಿಗೆ ಅರತಿ ಎತ್ತಿ ಭಕ್ತ ಸಮರ್ಪಿಸಿದರೆ, ನಂತರ ಎಲ್ಲಾ ಬಾಲಕೀಯರು ಸೇರಿ ನಾನಾ ರೀತಿಯ ಆಟಗಳನ್ನು ಬೆಳದಿಂಗಳಿನಲ್ಲಿ ಹಾಡಿ ಸಾಕಾದಾಗ ಮನೆಗೆ ತೆರಳುತ್ತಾರೆ, ಮುಖ್ಯವಾಗಿ ಈ ಸಂದರ್ಭದಲ್ಲಿ ಎಲ್ಲರೂ ಸೇರಿ ಹಾಡು ಹೇಳುವುದು, ನೃತ್ಯಮಾಡುವುದು, ಚೇಷ್ಠೆಗಳ ಆಟಗಳಾದ ಲಡ್ಡು ಲಡ್ಡು ತಿಮ್ಮಯ್ಯ ಹೀಗೆ ಹಲವಾರು ಆಟ ಹಾಡಿ ನಮ್ಮ ಜನಪದ ಸಂಸ್ಕೃತಿಯನ್ನು ಉಳಿಸುವಂತಹ ಕ್ರಿಯೆ ಈ ಹಬ್ಬಗಳಲ್ಲಿ ನಡೆಯುತ್ತದೆ, ಅಲ್ಲದೆ ವಿಶೇಷವಾದ ಜನಪದ ಗೀತೆಗಳನ್ನು ಹಾಡಿ ಸೈ ಎನಿಸಿಕೊಳ್ಳುತ್ತಾರೆ.
ಹಬ್ಬ ರಾತ್ರಿ 8-9 ಗಂಟೆಯವರೆಗೆ ಸಾಗುತ್ತದೆ ಪ್ರತಿ ಮನೆಯಿಂದ ಅದರಲ್ಲಿ ಹೆಣ್ಣಿದ್ದ ತಾಯಂದಿರು ತಮ್ಮ ಪ್ರೀತಿಯನ್ನು ತುಂಬಿದ ಬಹು ಸುಂದರೆ ಸೀರೆಗಳನ್ನು ಹುಡಿಸಿ ಅಲಂಕಾರ ಮಾಡಿ ಕಣ್ಣತುಂಬಿಕೊಳ್ಳುತ್ತಾರೆ, ಅದರಲ್ಲಿಯೇ ಮಕ್ಕಳ ಅನಂದ, ಕುಟುಂಬದ ಅನಂದ ತುಂಬಿದೆ ಎನ್ನಬಹುದು.
ಹುಣ್ಣಿಮೆಯ ಈ ದಿನದಂದು ಸಕ್ಕರೆಯಿಂದ ತಯಾರಿಸಿದ ಬಹು ಆಕರ್ಷಕ ಸಕ್ಕರೆ ಬೊಂಬೆಗಳನ್ನು ತಂದು ಅರತಿ ಎತ್ತುತ್ತಾರೆ. ಈ ಬಾರಿ ಮಾರುಕಟ್ಟೆಯಲ್ಲಿ ತರಹ ತರಹದ ಸಕ್ಕರೆ ಗೊಂಬೆಗಳು ಬಂದಿದ್ದು ಅದರೆ ಕೊಂಡು ಕೊಳ್ಳುವವರು ಮಾತ್ರ ವಿರಳವಾಗಿದ್ದು ಕಂಡು ಬಂದಿತು, ಈ ಗೊಂಬೆಗಳು ಪ್ರತಿ ಕೆ.ಜಿ.ಗೆ 80 ರಿಂದ 100 ರೂಪಾಯಿಗಳ ಬೆಲೆ ನಿಗದಿಯಾಗಿತ್ತು, ಹಿಂದಿನ ಬಾರಿ 100-150 ರೂಪಾಯಿಗಳ ವರೆಗೂ ಮಾರಿದ್ದರೂ, ಅದರೆ ಈ ಬಾರಿ ಕೊಳ್ಳುವವರ ಸಂಖ್ಯೆ ಇಳಿದು ಬೆಲೆಯೂ ಸಹ ಕುಸಿದಿದೆ, ಜೊತೆಗೆ ಮಾರಾಟಗಾರರಿಗೆ ಸಕ್ಕರೆಯ ಬೆಲೆ ಏರಿ ಸ್ವಲ್ಪ ಲಾಭವೂ ಇಲ್ಲವಾಗಿದೆ ಎನ್ನುತ್ತಾರೆ ಧರ್ಮಾಪುರದ ಮಾರಾಟಗಾರರಾದ ಕುಮಾರಸ್ವಾಮಿ, ಇತರರು.
ಹಬ್ಬದ ಜೊತೆಯಲ್ಲಿಯೇ ಸಾಂಸ್ಕೃತಿ ಕಾರ್ಯಕ್ರಮಗಳ ರೀತಿಯಲ್ಲಿ ಗೌರಿ ಹಬ್ಬ ನಡೆಯುತ್ತದೆ, ಉತ್ತಮ ಜಾನಪದ ಹಾಡುಗಳು, ಜನಪದ ಆಟಗಳು, ಉಡುಗೆಗಳನ್ನು ತೊಟ್ಟು ಅನಂದಿಸುವುದೇ ಹಳ್ಳಿಗರಿಗೆ ನೋವು ಮರೆಯುವ ಹಬ್ಬವಾಗಿದೆ.