ಪಟ್ಟಣದಲ್ಲಿ ಕನಕಭವನ ನಿರ್ಮಾಣಕ್ಕೆ ಭೂಮಿ ಪೂಜೆ

ಕೆ.ಆರ್.ಪೇಟೆ: ನ.15:- ತಾಲೂಕಿನ ಮಾರ್ಗೋನಹಳ್ಳಿ ಶ್ರೀ ಮರಡಿಲಿಂಗೇಶ್ವರ ಕ್ಷೇತ್ರದಲ್ಲಿ ಸುಮಾರು 8 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಶ್ರೀ ಮರಡಿಲಿಂಗೇಶ್ವರ ದೇವಾಲಯದ ಪುನರ್ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಹಾಗೂ ಕೃಷ್ಣರಾಜಪೇಟೆ ಪಟ್ಟಣದಲ್ಲಿ ಕನಕಭವನ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮ ನಡೆಯಿತು.
ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀ ಶ್ರೀ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಅವರು ಕನಕ ಭವನ ಹಾಗೂ ದೇವಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಹಾಲುಮತ ಸಮಾಜವು ಒಗ್ಗಟ್ಟು ಪ್ರದರ್ಶನ ಮಾಡಬೇಕು. ಸಮಾಜವನ್ನು ಒಡೆಯುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಸಮುದಾಯವನ್ನು ಒಡೆದು ಆಳುವ ಶಕ್ತಿಯ ವಿರುದ್ಧ ಗಟ್ಟಿಯಾಗಿ ನಿಲ್ಲಬೇಕು. ಸಮುದಾಯದ ಏಳಿಗೆಗೆ ಯಾರು ಕೆಲಸ ಮಾಡುತ್ತಾರೊ ಅವರ ಬೆನ್ನಿಗೆ ನಿಲ್ಲಬೇಕು. ಇಂತಹ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಸಚಿವರಾದ ಡಾ ನಾರಾಯಣಗೌಡ ಅವರು ಸಮುದಾಯದ ಬಗ್ಗೆ ಉತ್ತಮ ಬಾಂದವ್ಯ ಹೊಂದಿದ್ದಾರೆ. ನಮ್ಮ ಸಮುದಾಯದ ಈ ಭಾಗದ ಆರಾಧ್ಯ ದೈವ ಶ್ರೀ ಮರಡಿಲಿಂಗೇಶ್ವರ ಕ್ಷೇತ್ರಕ್ಕೆ ಸುಮಾರು 8.5ಕೋಟಿ ವೆಚ್ಚದಲ್ಲಿ ದೇವಾಲಯ ಪುನರ್ ನಿರ್ಮಾಣಕ್ಕೆ ಸರ್ಕಾರದಿಂದ ಹಣವನ್ನು ಬಿಡುಗಡೆ ಮಾಡಿಸಿರುವುದು ಅವರು ನಮ್ಮ ಸಮುದಾಯದ ಬಗ್ಗೆ ಕಾಳಜಿ ಇಟ್ಟುಕೊಂಡಿರುವುದು ಇದರಲ್ಲಿ ಗೊತ್ತಾಗುತ್ತದೆ. ಹಾಗಾಗಿ ಹಾಲುಮತದ ಸಮುದಾಯದ ಪರವಾಗಿ ಯಾರು ಕೆಲಸ ಮಾಡುವರೊ ಅಂತವರ ಶಕ್ತಿಯಾಗಿ ಸಮುದಾಯದ ಬಂಧುಗಳು ಅವರಿಗೆ ಬೆಂಬಲವಾಗಿ ನಿಲ್ಲಬೇಕು. ಸಚಿವರಾದ ನಾರಾಯಣಗೌಡ ಅವರು ಶ್ರೀ ಮರಡಿಲಿಂಗೇಶ್ವರ ಕ್ಷೇತ್ರವನ್ನು ಅವರ ಮನೆದೇವರಾದ ದೊಡ್ಡಯ್ಯ ಚಿಕ್ಕಯ್ಯ ದೇವರೆಂದು ಭಾವಿಸಿ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ. ಎಂದು ತಿಳಿಸಿದರು.
ಶ್ರೀ ಮರಡಿಲಿಂಗೇಶ್ವರ ಕ್ಷೇತ್ರದಲ್ಲಿ ಅಗತ್ಯ ಸ್ಥಳಾವಕಾಶ ನೀಡಿದರೆ ಕಾಗಿನೆಲೆ ಕನಕ ಗುರುಪೀಠದ ಶಾಖಾ ಮಠವನ್ನು ಸ್ಥಾಪಿಸಲು ಅಗತ್ಯ ಕ್ರಮ ವಹಿಸುತ್ತೇನೆ. ಹಾಲುಮತ ಸಮುದಾಯದವರು ಉಪಕಾರ ಸ್ಮರಣೆಯನ್ನು ಹೊಂದಬೇಕು. ಹಾಲು ಕೆಟ್ಟರೆ ಕೆಟ್ಟೀತು. ಹಾಲುಮತ ಸಮಾಜ ಕೆಡುವುದಿಲ್ಲ. ಇದು ನಿಜವಾಗಬೇಕು. ಶ್ರೀಕ್ಷೇತ್ರವು ಮರಡಿ ಲಿಂಗೇಶ್ವರನ ಜೊತೆಗೆ ಚಿಕ್ಕಯ್ಯ-ದೊಡ್ಡಯ್ಯ ದೇವರೂ ಇದ್ದಾನೆ. ಇದು ಕುರುಬರಿಗೆ ಮಾತ್ರ ಮೀಸಲಾಗಿಲ್ಲ. ಎಲ್ಲರೂ ಕೂಡಾ ದೈವಾನುಗ್ರಹವನ್ನು ಪಡೆಯುತ್ತಾರೆ. ನಾನು ಅಭಿವೃದ್ದಿಯ ನಾಗಾಲೋಟವನ್ನು ಈ ಕ್ಷೇತ್ರದಲ್ಲಿ ಇಂದು ಕಂಡಿದ್ದೇನೆ. ನಿಮ್ಮ ಆಶೀರ್ವಾದ ನಾರಾಯಣಗೌಡರ ಮೇಲಿರಲಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಚಿವರಾದ ಡಾ ನಾರಾಯಣಗೌಡ ಅವರು ಮಾತನಾಡಿ ಶ್ರೀ ಮರಡಿಲಿಂಗೇಶ್ವರ ಕ್ಷೇತ್ರವು ಸಮಗ್ರ ಅಭಿವೃದ್ಧಿ ಆಗಬೇಕು. ಕನಕ ಭವನ ನಿರ್ಮಾಣ ಆಗಬೇಕು ಎಂಬುದು ಕುರುಬ ಸಮಾಜದ ಹಿರಿಯರಾದ ದಿವಂಗತ ಕೆ.ಎನ್.ಕೆಂಗೇಗೌಡ ಅವರ ಅವರ ಕನಸಾಗಿತ್ತು. ಅವರ ಕನಸನ್ನು ನನಸು ಮಾಡಲು ವಿಶೇಷ ಆಸಕ್ತಿವಹಿಸಿ ಕರ್ನಾಟಕ ಸರ್ಕಾರದಿಂದ ಸುಮಾರು 8.5ಕೋಟಿ ರೂಗಳ ವೆಚ್ಚದಲ್ಲಿ ಶ್ರೀ ಮರಡಿಲಿಂಗೇಶ್ವರ ದೇವಾಲಯ ಪುನರ್ ನಿರ್ಮಾಣ ಹಾಗೂ 2ಕೋಟಿ ರೂಗಳ ವೆಚ್ಚದ ಕನಕಭವನ ನಿರ್ಮಾಣಕ್ಕೆ ಅನುದಾನವನ್ನು ಬಿಡುಗಡೆ ಮಾಡಿಸಲಾಗಿದೆ. ಇನ್ನೂ 6ತಿಂಗಳೊಳಗೆ ಎರಡು ಕಾಮಗಾರಿಗಳು ಪೂರ್ಣಗೊಂಡು ಸಮುದಾಯದ ಜನರ ಸೇವೆಗೆ ಅರ್ಪಿಸಲಾಗುವುದು. ಕಳೆದ ಮೂರು ಚುನಾವಣೆಯಲ್ಲಿ ನನ್ನ ಗೆಲುವಿಗೆ ಕುರುಬ ಸಮುದಾಯವು ಕಾರಣಕರ್ತರಾಗಿದ್ದಾರೆ. ಇವರ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ನನಗೆ ಅಧಿಕಾರ ಇರಲಿ ಇಲ್ಲದಿರಲಿ ಕುರುಬ ಸಮುದಾಯ ಸೇರಿದಂತೆ ತಾಲೂಕಿನ ಎಲ್ಲಾ ಸಮುದಾಯಗಳಿಗೆ ಭವನಗಳನ್ನು ನಿರ್ಮಿಸಲು ನಿವೇಶನಗಳನ್ನು ಕೊಡಿಸುವ ಮೂಲಕ ಎಲ್ಲಾ ಸಮುದಾಯಗಳ ಏಳಿಗೆಗೆ ನನ್ನ ಶಕ್ತಿ ಮೀರಿ ದುಡಿಯುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮೂಡ ಅಧ್ಯಕ್ಷ ಕೆ ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಎಲ್. ದೇವರಾಜು, ಆರ್‍ಟಿಓ ಅಧಿಕಾರಿ ಮಲ್ಲಿಕಾರ್ಜುನ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಲಲಿತಾ ದೊಡ್ಡೇಗೌಡ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಯು.ಧನಂಜಯ, ತಾಲೂಕು ಪಂಚಾಯಿತಿ ಪದ್ಮಮ ಸಣ್ಣನಿಂಗೇಗೌಡ, ಪುರಸಭಾ ಸದಸ್ಯ ಶಕುಂತಲಾ ರವಿಕುಮಾರ್, ಎಪಿಎಂಸಿ ಮಾಜಿ ನಿರ್ದೇಶಕ ಸೋಮಣ್ಣ, ಜಿಲ್ಲಾ ಕುರುಬ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಜೆ.ಶಶಿಧರ್, ಕರ್ನಾಟಕ ಪ್ರದೇಶ ಕುರುಬ ಸಂಘದ ಕೆ.ಪುರುμÉೂೀತ್ತಮ್, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಚಂದ್ರು, ಶ್ರೀ ಮರೆಡಿಲಿಂಗೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಪುನೀತ್ ಕುಮಾರ್, ಹೆಗ್ಗಡಿ ಕೃμÉ್ಣಗೌಡ, ಹೆಗ್ಗಡಿ ಮಂಜೇಗೌಡ, ಶ್ರೀ ಕಾಳಿದಾಸ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಜವರೇಗೌಡ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಪ್ರಧಾನ ಕಾರ್ಯದರ್ಶಿ ಪಿ ಜೆ ಕುಮಾರ್, ಸೇರಿದಂತೆ ಉಪಸ್ಥಿತರಿದ್ದರು.