ಪಟ್ಟಣದಲ್ಲಿ ಅದ್ದೂರಿ ಕನಕ ಜಯಂತಿ ಆಚರಣೆ

ಕೆಂಭಾವಿ:ನ.12:ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದರು ಅವರ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಉತ್ತಮ ವ್ಯಕ್ತಿಯಾಗಲು ಸಾಧ್ಯ ಎಂದು ಕನಕದಾಸ ಸಂಘದ ಕೆಂಭಾವಿ ಘಟಕದ ಅಧ್ಯಕ್ಷರಾದ ರೇವಣಸಿದ್ದಪ್ಪ ಯಾಳಗಿ ಅಭಿಪ್ರಾಯ ಪಟ್ಟರು ಪಟ್ಟಣದ ಕನಕ ವೃತ್ತದಲ್ಲಿ ಹಮ್ಮಿಕೊಂಡಿದ್ದ 535ನೇ ಕನಕದಾಸರ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕನಕರು ಇಡೀ ಮನುಕುಲಕ್ಕಕೆ ಉತ್ತಮ ಸಂದೇಶಗಳನ್ನು ಸಾರಿ ಹೋಗಿದ್ದಾರೆ ಭಕ್ತಿಯಲ್ಲಿ ಭಗವಂತನನ್ನೇ ಒಲಿಸಿ ಕೊಂಡವರು ಎಂದು ಹೇಳಿದರು ಕಾರ್ಯಕ್ರಮದಲ್ಲಿ ಯುವ ಮುಖಂಡ ಶ್ರೀನಿವಾಸರೆಡ್ಡಿ ಪಾಟೀಲ ಯಾಳಗಿ,ಬಸವರಾಜ ಪೂಜಾರಿ,ಭೀರಪ್ಪ ಪೂಜಾರಿ,ತೋಟಪ್ಪ ಪೂಜಾರಿ.ಶರಣಪ್ಪ ಯಾಳಗಿ,ರವಿಶಂಕರ ಸೊನ್ನದ,ಮುದೆಪ್ಪ ಪರಸನಹಳ್ಳಿ,ಶಿವಪ್ಪ ಕಂಬಾರ
ರಮೇಶ ಕೊಡಗಾನೂರ, ಭೀಮನಗೌಡ ಬಿರಾದರ,
ಮಲ್ಲಣ್ಣ ಯಾಳಗಿ,ಹೈಯಾಳಪ್ಪ ಮೆಲಗಲಿ,ನಿಂಗಪ್ಪ ಹೀರೆಕುರಬರ,ಸಂಗಣ್ಣ ತುಂಬಗಿ, ಉಮೇಶರೆಡ್ಡಿ ಯಲ್ಹೇರಿ,ಮಾಳಪ್ಪ ಸುಂಕದ,ಮಹೇಶ ಕೂಡ್ಲಗಿ,ಕ.ಪ್ರ.ಕು.ಸಂ.ಯುವ ಕೆಂಭಾವಿ ಘಟಕದ ಅಧ್ಯಕ್ಷರಾದ ದೇವಿಂದ್ರ ಯಾಳಗಿ(ಸೆಹ್ವಾಗ್), ಯಾದಗಿರಿ ಜಿಲ್ಲಾ ಪ್ರದಾನ ಕಾರ್ಯದರ್ಶಿಯಾದ ಮಂಜು ತುಂಬಗಿ,ಸಿದ್ದು ಶಹಾಪೂರ ,ಪರಶುರಾಮ ಹುಣಶ್ಯಾಳ,ಯಲ್ಲಾಲಿಂಗ ತೋಟದ ಸೇರಿದಂತೆ ಅನೇಕರಿದ್ದರು, ಪಟ್ಟಣ ಪ್ರಮುಖ ಬೀದಿಗಳಲ್ಲಿ ಕನಕದಾಸರ ಭಾವಚಿತ್ರದ ಮೆರವಣಿಗೆ ಬಹಳ ಅದ್ದೂರಿಯಾಗಿ ನಡೆಯಿತು