ಪಟ್ಟಣಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಲು ಮೊದಲ ಆದ್ಯತೆ

ಮುದ್ದೇಬಿಹಾಳ:ಟಿ.14: ಮುದ್ದೇಬಿಹಾಳ ಪಟ್ಟಣದಲ್ಲಿ ನಾಗರಿಕರಿಗೆ ಶುದ್ದ ಕುಡಿಯುವ ನೀರು, ಓಡಾಡಲು ಉತ್ತಮ ರಸ್ತೆ, ಚರಂಡಿ ನಿರ್ಮಾಣ, ಶೌಚಾಲಯಗಳ ನಿರ್ಮಾಣ ಮತ್ತು ಗಾರ್ಡನ್ ನಿರ್ಮಾಣ ಸೇರಿದಂತೆ ಪಟ್ಟಣದ ಸರ್ವತೋಮುಖ ಬೆಳವಣಿಗೆ ದೃಷ್ಟಿಯಿಂದ ಪಟ್ಟಣಕ್ಕೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಮೋದಲ ಆದ್ಯತೆ ನೀಡಲಾಗುವದು ಎಂದು ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿಯವರು ಹೇಳಿದರು.
ಪಟ್ಟಣದ ವಾರ್ಡ ನಂ 21 ಮೆಹಬೂಬ ನಗರದಲ್ಲಿ ಅತಿವೃಷ್ಟಿಯಿಂದ ಹಾನಿಯಾಗಿದ್ದ ರಸ್ತೆ ಸುದಾರಣೆ ಸೇರಿದಂತೆ ಇನ್ನಿತರ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ವರ್ಷಕ್ಕಿಂತ ಈ ವರ್ಷ ವಾಡಿಕೆಗಿಂತ ಅಧಿಕ ಮಳೆಯಾಗಿರುವದರಿಂದ ರಸ್ತೆ, ಚರಂಡಿಗಳು ಹಾಳಾಗಿರುವದು ಕಂಡುಬಂದಿದೆ ಈ ಕೂಡಲೆ ನಾಗರಿಕರಿಗೆ ಯಾವುದೆ ಅನಾನೂಕುಲತೆಯಾಗದಂತೆ ರಸ್ತೆ, ಚರಂಡಿ ನಿರ್ಮಾಣ ಕಾರ್ಯಗಳನ್ನು ಕೈಗೋಳ್ಳಲಾಗುವದು ಎಂದು ಅವರು ಹೇಳಿದರು.
ಪಟ್ಟಣದಲ್ಲಿ ನಡೆಯುವ ಅಭಿವೃದ್ದಿ ಕಾಮಗಾರಿಗಳಿಗೆ ನಾಗರಿಕರು ಸಲಹೆ,ಸೂಚನೆ ನೀಡುವದರ ಜೋತೆಗೆ ಅಭಿವೃದ್ದಿಗೆ ಸಹಕಾರ ನೀಡುವ ಮನೋಭಾವನೆ ಇರಬೇಕು. ಮುದ್ದೇಬಿಹಾಳ ಪಟ್ಟಣವನ್ನು ಸ್ವಚ್ಚ ಪಟ್ಟಣವನ್ನಾಗಿ ನಿರ್ಮಿಸುವ ಗುರಿ ಹಾಕಿಕೋಳ್ಳಲಾಗಿದೆ. ಈ ಕುರಿತು ಅಧಿಕಾರಿಗಳೋಂದಿಗೆ ಚರ್ಚಿಸಿ ಸರ್ಕಾರದಿಂದ ಅಗತ್ಯ ಹಣಕಾಸು ನೇರವು ಪಡೆದು ಎಲ್ಲರ ಸಹಕಾರದೋಂದಿಗೆ ಪಟ್ಟಣವನ್ನು ಅಭಿವೃದ್ದಿಪಡಿಸಲಾಗುವದು ಎಂದು ಅವರು ಹೇಳಿದರು.
ಪಟ್ಟಣದ ಪ್ರತಿ ವಾರ್ಡನಲ್ಲಿ ಜಾತಿ, ಪಕ್ಷಬೇದ ಮರೆತು ಪಟ್ಟಣದ ನಾಗರಿಕರ ಶ್ರೇಯೋಭಿವೃದ್ದಿಗೆ ಶ್ರಮೀಸುತ್ತೆನೆ. ಪ್ರತಿ ವಾರ್ಡನಲ್ಲಿರುವ ಸಮಸ್ಯೆಗಳ ಕುರಿತು ಅಧಿಕಾರಿಗಳಿಂದ ಪಟ್ಟಿ ಮಾಡಿಸಿ ಹಂತ,ಹಂತವಾಗಿ ಅಭಿವೃದ್ದಿಪಡಿಸಲಾಗುವದು. ಯಾವುದೆ ಜಾತಿ,ಮತ,ಪಂಗಡ ಇಲ್ಲದೆ ಅಭಿವೃದ್ದಿ ಕಾರ್ಯಗಳನ್ನು ಕೈಗೋಳ್ಳಲಾಗುವದು ಸಾರ್ವಜನಿಕರು ಮುಕ್ತವಾಗಿ ತಮ್ಮ ವಾರ್ಡ ಸಮಸ್ಯೆಗಳನ್ನು ಪುರಸಭೆ ಗಮನಕ್ಕೆ ತರಬೇಕು ಎಂದು ಅವರು ಹೇಳಿದರು.
ವಾರ್ಡ ಸದಸ್ಯ ರಿಯಾಜ ಢವಳಗಿ ಮಾತನಾಡಿ ವಾರ್ಡ ನಂ 21 ರಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಪುರಸಭೆ ಅಧ್ಯಕ್ಷರು ಚಾಲನೆ ನೀಡಿದ್ದಾರೆ. ಹಂತ, ಹಂತವಾಗಿ ಪಟ್ಟಣದ ಅಭಿವೃದ್ದಿಗೆ ಪುರಸಭೆಯ ಎಲ್ಲ ಸದಸ್ಯರು ಅಧ್ಯಕ್ಷರ ಮಾರ್ಗದರ್ಶನದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಕೈಗೋಳ್ಳಲಾಗುವದು. ಸರ್ಕಾರದಿಂದ ಹೆಚ್ಚಿನ ಅನುದಾನ ನೀಡಿದಲ್ಲಿ ಅಭಿವೃದ್ದಿ ಕಾರ್ಯಗಳು ವೇಗ ಪಡೆದುಕೋಳ್ಳುತ್ತವೆ ಎಂದು ಅವರು ಹೇಳಿದರು.
ಈ ಸಮಯದಲ್ಲಿ ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ, ಅಶೋಕ ನಾಡಗೌಡ, ರುದ್ರಗೌಡ ಅಂಗಡಗೇರಿ, ಮುಸ್ತಾಕ ಮೊಮೀನ, ಎಸ್.ಕೆ.ಮೊಮೀನ, ಕಾಶೀಮಸಾಬ ಹಳ್ಳೂರ ಮತ್ತಿತರರು ಇದ್ದರು.