
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.05: ಇಲ್ಲಿನ ಪಟೇಲ್ ನಗರದ ಬಲಿಜ ಸಮುದಾಯದ ಮುಖಂಡರುಗಳಾದ ರಾಜೇಶ್ ಮತ್ತು ರಮೇಶ್ ಸಹೋದರರು ಇಂದು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ನೇತೃತ್ವದಲ್ಲಿ ಬಿಜೆಪಿ ಪಕ್ಷ ಸೇರಿದರು.
ಈ ಮೊದಲು ಕಾಂಗ್ರೆಸ್ ಪಕ್ಷದಲ್ಲಿದ್ದರು ಅವರು. ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಬಿಜೆಪಿ ಸೇರುತ್ತಿರುವುದಾಗಿ ಹೇಳಿದ್ದಾರೆ.
ಈ ಹಿಂದೆ ಬಿಜೆಪಿ, ಬಿಎಸ್ ಆರ್ ಪಕ್ಷದಲ್ಲಿದ್ದು ಶಾಸಕರನ್ನು ಬೆಂಬಲಿಸಿ ಕೆಲಸ ಮಾಡಿತ್ತು. ಆದರೆ ಕಳೆದ ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರು.
ಸಮಾಜಸೇವಾ ಕಾರ್ಯಗಳ ಮೂಲಕ ಈ ಪ್ರದೇಶದಲ್ಲಿ ಗುರುತಿಸಿಕೊಂಡಿರುವ ಇವರು ಸ್ಥಳೀಯ ಅನೇಕ ಯುವಕ ಯುವತಿಯರು ಸ್ವಯಂ ಉದ್ಯೋಗ ಕೈಗೊಳ್ಳಲು ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಕೈಗೊಂಡು ಜನರೊಂದಿಗೆ ಬೆರೆತವರಾಗಿದ್ದಾರೆ.
ರಾಜೇಶ್ ಮತ್ತು ರಮೇಶ್ ಸಹೋದರರು ಮತ್ತೆ ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದು ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆಂದರು.
ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ಎಸ್.ಮಾರುತಿ, ಪಾಲಿಕೆ ಸದಸ್ಯ ಶ್ರೀನಿವಾಸ ಮೋತ್ಕರ್, ಪಕ್ಷದ ಮುಖಂಡರುಗಳಾದ ಕೃಷ್ಣ(ಕಿಟ್ಟಿ), ವೀರಶೇಖರ ರೆಡ್ಡಿ ಮೊದಲಾದವರು ಇದ್ದರು.