ಪಟೇಲರು ಆರ್.ಎಸ್.ಎಸ್ ಬ್ಯಾನ್ ಮಾಡಿದ್ದರು: ಲಾಡ್


ಹುಬ್ಬಳ್ಳಿ, ಫೆ 24: ಸರ್ದಾರ ವಲ್ಲಭಬಾಯ್ ಪಟೇಲ್ ಅವರು ಈ ಹಿಂದೆಯೇ ಆರ್.ಎಸ್.ಎಸ್ ಬ್ಯಾನ್ ಮಾಡಿದ್ದರು ಎಂದು ಸಚಿವ ಸಂತೋಷ ಲಾಡ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಸರ್ದಾರ ವಲ್ಲಭಬಾಯ್ ಪಟೇಲರ ಪ್ರತಿಮೆಯನ್ನು ನಿಲ್ಲಿಸಿದ್ದಾರೆ. ಆದರೆ ಅವರೇ ಆರ್.ಎಸ್.ಎಸ್ ಅನ್ನು ಬ್ಯಾನ್ ಮಾಡಿದ್ದರು. ಇದು ಸುಳ್ಳಲ್ಲ. ಈ ಬಗ್ಗೆ ಬಿಜೆಪಿಯವರನ್ನು ಕೇಳಿ ಎಂದು ಪ್ರಶ್ನಿಸಿದರು.
ಬಿಜೆಪಿಯವರು ಚುನಾವಣೆ ಬಂದಾಗೊಮ್ಮೆ ಜಾತಿ ಧರ್ಮ ಮುಂದೆ ತಂದು ಅಧಿಕಾರಕ್ಕೆ ಬರತ್ತಾರೆ. ಅಭಿವೃದ್ಧಿ ಬಗ್ಗೆ ಚಕಾರ ಎತ್ತುವುದಿಲ್ಲ, ಇಂದು ಪಾಸ್ ಪೆÇೀರ್ಟ್ ಪವರ್‍ನಲ್ಲಿ ದೇಶ 85 ನೇ ಸ್ಥಾನಕ್ಕಿದೆ. ನಮ್ಮ ಪ್ರಧಾನಿ ದೇಶವನ್ನು ಏಕೆ ಒಂದನೇ ಸ್ಥಾನದಲ್ಲಿ ತರಲಿಲ್ಲ. ಇಂದು ದೇಶವನ್ನು ಅಭಿವೃದ್ಧಿ ವಿಷಯದಲ್ಲಿ ಯಾವ ದೇಶಕ್ಕೆ ಹೋಲಿಸಬೇಕು? ಎಂದು ಪ್ರಶ್ನಿಸಿದ ಅವರು, ಸುಖಾಸುಮ್ಮನೆ ಬಿಜೆಪಿಯವರು ಚುನಾವಣೆ ಹೊಸ್ತಿಲಲ್ಲಿ ಅಭಿವೃದ್ಧಿ ಬಗ್ಗೆ ಮಾತನಾಡದೇ ವಿವಾದಾತ್ಮಕ ಹೇಳಿಕೆ ನೀಡುತ್ತಾರೆ ಎಂದು ಅವರು ಹರಿಹಾಯ್ದರು.
`ಮೇಕ್ ಇನ್ ಇಂಡಿಯಾ’ ದಿಂದ ಎಷ್ಟು ಪ್ರಗತಿಯಾಗಿದೆ. ಇದರ ಪ್ರಚಾರಕ್ಕಾಗಿ ಕೇಂದ್ರ ಸರ್ಕಾರ 450 ಕೋಟಿ ರೂಪಾಯಿ ಖರ್ಚು ಮಾಡಿದೆ. ಈ ಬಗ್ಗೆ ಯಾಕೆ ಬಿಜೆಪಿಯವರು ಮಾತನಾಡುವುದಿಲ್ಲ ಎಂದು ಕಿಡಿಕಾರಿದರು.
ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವು ರಾಜ್ಯದಲ್ಲಿ ಅಭೂತಪೂರ್ವ ಯಶಸ್ಸು ಕಂಡಿದೆ. ಎಲ್ಲರ ಪಕ್ಷಾತೀತ ಸಹಕಾರದಿಂದ ಇಂದು ಬುಕ್ ಆಫ್ ರೆಕಾರ್ಡ್‍ಗೆ ಸೇರ್ಪಡೆ ಆಗುತ್ತಿದೆ. ಇದು ಖುಷಿಯ ವಿಚಾರ ಎಂದರು.