
ಕಲಬುರಗಿ,ಮೇ 17: ಸಿಯುಕೆಯಿಂದ ಪಟಾಲೆ ಪೂಜಾ ಅವರಿಗೆ
ನಿರ್ವಾಹಣ ಶಾಸ್ತ್ರದಲ್ಲಿ ಡಾಕ್ಟರ್ ಆಫ್ ಫಿಲಾಸಫಿಯನ್ನು ನೀಡಲಾಗಿದೆ
ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ)
ಪರೀಕ್ಷಾ ನಿಯಂತ್ರಕ ಕೋಟಾ ಸಾಯಿಕೃಷ್ಣತಿಳಿಸಿದ್ದಾರೆ. ಅವರ ಪಿಎಚ್‍ಡಿ ವಿಷಯದ ಶೀರ್ಷಿಕೆ ಆನ್ಲೈನ್ ರಿಟೇಲಿಂಗ್ನಲ್ಲಿ ರಿಟನ್ರ್ಸ್ ಮ್ಯಾನೇಜ್ಮೆಂಟ್ನಲ್ಲಿನ ಸಮಸ್ಯೆಗಳುಮತ್ತು ಸವಾಲುಗಳು: ಕಾರ್ಯತಂತ್ರದ ನಿರ್ವಹಣೆ
ದೃಷ್ಟಿಕೋನ. ಸಿಯುಕೆ ವ್ಯವಹಾರ ಅಧ್ಯಯನ ವಿಭಾಗದ ಡಾ.
ಮೊಹಮ್ಮದ ಜೊಹೇರ ಸಂಶೋಧನಾ ಮಾರ್ಗದರ್ಶಕರಾಗಿದ್ದಾರೆ.
ಸಂಶೋಧನೆಯ ಕುರಿತು ಮಾತನಾಡಿದ ಪೂಜಾ, ಗ್ರಾಹಕ
ನಿಷ್ಠೆಯನ್ನು ಹೆಚ್ಚಿಸುವುದು ಮತ್ತು ವಸ್ತುಗಳಮರಳಿಸುವಿಕೆಯ ಪ್ರಮಾಣವನ್ನು ಕಡಿಮೆ ಮಾಡುವುದುಆನ್‍ಲೈನ್ ಚಿಲ್ಲರೆ ವ್ಯಾಪಾರಿಗಳ ಕಾರ್ಯತಂತ್ರದ ರಿಟನ್ರ್ಸ್ ನಿರ್ವಹಣೆಯ ಪ್ರಮುಖ ಅಂಶವಾಗಿದೆ ಎಂದುಸಂಶೋಧನೆಗಳು ಸೂಚಿಸುತ್ತವೆ. ವಸ್ತುಗಳಮರಳಿಸುವಿಕೆಯ ನಿರ್ವಹಣೆಯಲ್ಲಿನ ಪ್ರಮುಖ
ಸವಾಲುಗಳೆಂದರೆ ಗ್ರಾಹಕ ಒತ್ತಡ, ಸಾಂಸ್ಥಿಕ ಒತ್ತಡ,ನಿಯಂತ್ರಕರ ಒತ್ತಡ, ಮಾರುಕಟ್ಟೆ ಒತ್ತಡ ಮತ್ತುಸಾಮಾಜಿಕ ಒತ್ತಡಗಳಾಗಿವೆ. ಲಿಂಗ ಮತ್ತು ವಯಸ್ಸಿನವ್ಯತ್ಯಾಸವು ಗ್ರಾಹಕರ ನಿರೀಕ್ಷೆಗಳು, ರಿಟನ್ರ್ಸ್ ಪ್ರಕ್ರಿಯೆಯ
ಜಗಳ, ಗ್ರಾಹಕ ಸೇವೆ ಮತ್ತು ರಿಟನ್ರ್ಸ್ ಮ್ಯಾನೇಜ್‍ಮೆಂಟ್
ಸಂದರ್ಭದಲ್ಲಿ ನಕಾರಾತ್ಮಕ ರಿಟನ್ರ್ಸ್ ಅನುಭವವನ್ನುಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಪುರುಷರಿಗೆ ಹೋಲಿಸಿದರೆಮಹಿಳೆಯರು ವಸ್ತುಗಳ ಮರಳಿಸುವಿಕೆಯ ನಿರ್ವಹಣೆಯಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆಂದು ತೋರುತ್ತದೆ ಎಂದು ಹೇಳಿದ್ದಾರೆ.