ಪಟಾಕಿ ಸಿಡಿಸಿ, ಸಿಹಿ ಹಂಚಿ ಬಿಜೆಪಿ ಮುಖಂಡರ ಸಂಭ್ರಮ

ಹುಮನಾಬಾದ್ :ಮಾ.3:
ತ್ರಿಪುರ ಹಾಗೂ ನಾಗಲ್ಯಾಂಡ್ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಬಂದ ಹಿನ್ನಲೆ ಗುರುವಾರ ಪಟ್ಟಣದ ಮಾಜಿ ಸಂಸದ ದಿ. ರಾಮಚಂದ್ರ ವೀರಪ್ಪ ವೃತ್ತದಲ್ಲಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳರ್ ನೇತೃದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.
ಮಾಜಿ ಸಂಸದ ದಿ. ರಾಮಚಂದ್ರ ವೀರಪ್ಪ ವೃತ್ತದಲ್ಲಿ ನೆರೆದ ನೂರಾರು ಬಿಜೆಪಿ ಕಾರ್ಯಕರ್ತರು ವೃತ್ತದ ಸುತ್ತಲು ಪಟಾಕಿ ಸಿಡಿಸಿದರು. ಅಲ್ಲಿದ್ದ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಜಯವಾಗಲಿ, ನರೇಂದ್ರ ಮೊದಿಗೆ, ಬಿ.ಎಸ್. ಯಡಿಯೂರಪ್ಪಗೆ, ಬಸವರಾಜ ಬೊಮ್ಮಾಯಿಗೆ ಜಯವಾಗಲಿ ಎಂದು ಜಯ ಘೋಷಗಳನ್ನು ಕೂಗಿದರು. ಬಳಿಕ ಮುಖಂಡರು, ಕಾರ್ಯಕರ್ತರು ಒಗ್ಗೂಡಿ ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡರು.
ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ್, ಪುರಸಭೆ ಸದಸ್ಯ ರಮೇಶ ಕಲ್ಲೂರ, ಪುರಸಭೆ ಸದಸ್ಯ ಗಿರೀಶ ಪಾಟೀಲ್, ಬಿಜೆಪಿ ರಾಜ್ಯ ಕಾರಕಾರಣಿ ಸದಸ್ಯ ಸೋಮನಾಥ ಪಾಟೀಲ್, ಮಂಡಲ್ ಅಧ್ಯಕ್ಷ ಪ್ರಭಾಕರ ನಾಗರಾಳೆ, ಮಂಡಲ ಪ್ರಧಾನ ಕಾರ್ಯದರ್ಶಿ ರಾಜು ಭಂಡಾರಿ, ಮಂಡಲ್ ಉಸ್ತುವಾರಿ ವಿಜಯಕುಮಾರ ಪಾಟೀಲ್ ಗಾದಗಿ, ಮಂಡಲ್ ಸಹ ಉಸ್ತುವಾರಿ ರವಿ ಬಿರಾದಾರ, ಮುಖಂಡರಾದ ಡಾ. ಸಿದ್ದು ಪಾಟೀಲ್, ವೀರೇಶ ಸಜ್ಜನ್, ಚಂದ್ರಕಾತ ಬಿರಾದಾರ, ಶ್ರೀನಾಥ ದೇವಣಿ, ಶಿವರಾಜ ರಾಜೋಳೆ, ರವಿ ಹೊಸಳ್ಳಿ, ಗುಲಾಮ ಮಹ್ಮದ್, ಸೂರ್ಯಕಾಂತ ಮಠಪತಿ ಸೇರಿ ಅನೇಕರಿದ್ದರು.