ಪಟಾಕಿ ಸಿಡಿತ 25ಕ್ಕೂ ಮಂದಿಗೆ ಗಾಯ

10 ಮಕ್ಕಳ ಕಣ್ಣಿಗೆ ಹಾನಿ
ಬೆಂಗಳೂರು,ನ.16-ದೀಪಾವಳಿ ಹಬ್ಬದ ಸಂಭ್ರಮದಲ್ಲಿ ನಿಷೇಧವಿದ್ದರೂ ನಗರದಲ್ಲಿ ಹಸಿರು‌ ಪಟಾಕಿ ಹಚ್ಚಲು ಹೋಗಿ ಇಲ್ಲಿಯವರೆಗೆ 25ಕ್ಕೂ ಮಂದಿ ಗಾಯಗೊಂಡಿದ್ದು 10 ಮಂದಿ ಮಕ್ಕಳ ಕಣ್ಣಿಗೆ ಹಾನಿಯಾಗಿದೆ
ಪಟಾಕಿ ಹಚ್ಚಲು ಹೋಗಿ ಮೂವರು ಮಕ್ಕಳ ಕಣ್ಣಿಗೆ ಗಾಯಗಳಾಗಿದ್ದು,ರಾತ್ರಿ ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಮೂವರು ಕೂಡ 10 ರಿಂದ 11 ವರ್ಷದ ಒಳಗಿನವರಾಗಿದ್ದಾರೆ.
ಸುಂಕದ ಕಟ್ಟೆ ಮೂಲದ 11 ವರ್ಷ ವಯಸ್ಸಿನ ಹುಡುಗ ಹೂವಿನ ಕೆಂಡ ಹಚ್ಚಲು ಹೋಗಿ ಕಣ್ಣಿಗೆ ಹಾನಿ ಮಾಡಿಕೊಂಡಿದ್ದಾನೆ. ಉಳಿದ ಇಬ್ಬರು ಪಟಾಕಿ ಹಚ್ಚಲು ಹೋಗಿ ಎಡಗಣ್ಣು ಮತ್ತು ಬಲಗಣ್ಣಿಗೆ ಹಾನಿ ಮಾಡಿಕೊಂಡಿದ್ದಾರೆ.
ಮಿಂಟೋ ಆಸ್ಪತ್ರೆಯಲ್ಲಿ ಮೂವರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ ಮಿಂಟೋ ಆಸ್ಪತ್ರೆಗೆ ಒಟ್ಟು 7 ಮಂದಿ ಮಕ್ಕಳು ಪಟಾಕಿ ಹಾನಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಾರಾಯಣ ಆಸ್ಪತ್ರೆಯಲ್ಲಿ 8 ಮಂದಿ, ನೇತ್ರಧಾಮದಲ್ಲಿ 7ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ನಾಲ್ವರಿಗೆ ತೀವ್ರ ಗಾಯಗಳಾಗಿವೆ
ಇನ್ನೂ ಪಟಾಕಿಯಿಂದ ಮೈಕೈ ಸುಟ್ಟುಕೊಂಡವರು ವಿಕ್ಟೊರಿಯಾ ಇನ್ನಿತರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.