ಪಟಾಕಿ ಸಿಡಿತ ಇಬ್ಬರು ಕಣ್ಣಿಗೆ ಹಾನಿ

Revelers watch a firework during Diwali celebrations in Delhi, India, on Wednesday, Nov. 11, 2015. Diwali, the Hindu Festival of lights, sees shops and homes festooned with decorations. Fireworks shake the skies above luxury homes and slums alike, while the shopping rush is so fierce that gold prices move. Photographer: Prashanth Vishwanathan/Bloomberg

ಬೆಂಗಳೂರು,ನ.4- ದೀಪಾವಳಿ ಹಬ್ಬದ ಸಂಭ್ರಮಾಚರಣೆ ವೇಳೆ ಸಿಡಿಸಿದ ಪಟಾಕಿ ಸಿಡಿದು ಇಬ್ಬರು ಬಾಲಕರ ಕಣ್ಣಿಗೆ ಹಾನಿ ಉಂಟಾಗಿದೆ.
9 ವರ್ಷದ ಬಾಲಕನ ಕಣ್ಣಿಗೆ ಪಟಾಕಿಯಿಂದ ಹಾನಿಯಾಗಿದ್ದು, ಮುಖದ ಚರ್ಮ ಸುಟ್ಟು ಹೋಗಿದೆ. ಸದ್ಯ ಬಾಲಕ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಸವನಗುಡಿ ನಿವಾಸಿಯಾಗಿರುವ ಈ ಬಾಲಕ ನಿನ್ನೆ ರಾತ್ರಿ ತನ್ನ ಮನೆಯಲ್ಲಿ ಫ್ಲವರ್ ಪಾಟ್ (ಹೂಕುಂಡ) ಪಟಾಕಿಯ‌ನ್ನು ಸಿಡಿಸಲು ಹೋದಾಗ ಈ ಘಟನೆ ನಡೆದಿದೆ.
ಅದೃಷ್ಟವಶಾತ್ ಬಾಲಕನ ಕಣ್ಣಿನ ದೃಷ್ಟಿಗೆ ಸಮಸ್ಯೆಯಾಗಿಲ್ಲ. ಕಣ್ಣಿನ ರೆಪ್ಪೆ ಹಾಗು ಮುಖದ ಚರ್ಮ ಸುಟ್ಟು ಹೋಗಿದ್ದು, ಕಣ್ಣಿನ ಸುತ್ತ ಗಾಯವಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಉಳಿದಂತೆ ನಗರದಲ್ಲಿ ಈ ವರ್ಷ ಪಟಾಕಿ ಅಬ್ಬರ ಕಡಿಮೆಯಾಗಿದ್ದು, ಯಾವುದೇ ಪ್ರಕರಣಗಳು ದಾಖಲಾಗಿಲ್ಲ.
ದೀಪಾವಳಿಯಲ್ಲಿ ಪಟಾಕಿ ಸಿಡಿಸುವುದು ಸಾಮಾನ್ಯವಾದರೂ, ಸುರಕ್ಷತೆಯ ಬಗ್ಗೆ ಗಮನ ಹರಿಸಬೇಕಿದೆ. ಮಕ್ಕಳು ಪಟಾಕಿ ಸಿಡಿಸುವಾಗ ಅವರ ಮೇಲೆ ಪೋಷಕರು ನಿಗಾ ವಹಿಸಬೇಕಿದೆ. ಇಲ್ಲದಿದ್ದರೆ ಬೆಳಕಿನ ಹಬ್ಬ ಬದುಕಿಗೆ ಕತ್ತಲು ಮೂಡುವಂತೆ ಮಾಡಲಿದೆ.