ಪಟಾಕಿ ಮಾರಾಟದ ಮೇಲೆ ಪೊಲೀಸ್ ಕಣ್ಗಾವಲು

ಬೆಂಗಳೂರು,ನ.೧೪-ಬೆಳಕಿನ ದೀಪಾವಳಿ ಹಬ್ಬದ ಸಂಭ್ರಮಾಚರಣೆ ವೇಳೆ ಹಸಿರು ಪಟಾಕಿ ಸಿಡಿಸುವ ಸರ್ಕಾರದ ನಿಯಮಗಳನ್ನು ಮೀರಿ ಪಟಾಕಿ ಮಾರಾಟ ಮಾಡುವ ಸ್ಟಾಲ್?ಗಳ ಮೇಲೆ ಪರಿಶೀಲನೆ ಮಾಡುವಂತೆ ನಗರ ಪೊಲೀಸ್ ಆಯುಕ್ತರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಸೂಚನೆ ಮೆರೆಗೆ ನಗರದ ಎಲ್ಲಾ ಡಿಸಿಪಿಗಳು ಆಯಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪರಿಶೀಲನೆ ಮಾಡಲಿದ್ದಾರೆ. ಕೇಂದ್ರ ಸರ್ಕಾರದ ನಿಯಮದಂತೆ ಎರಡು ಲೋಗೊ ಆಧಾರದ ಮೇಲೆ ಚೆಕ್ ಮಾಡಲಾಗುತ್ತದೆ.
ಹಸಿರು ಪಟಾಕಿ ಹೇಗೆ?: ನೀರಿ ಸಂಸ್ಥೆ ಅಧ್ಯಯನದಲ್ಲಿ ಅಭಿವೃದ್ಧಿ ಪಡಿಸಿರುವ ಪಟಾಕಿ ಹಸಿರು ಪಟಾಕಿಯಾಗಿದೆ ಇಂತಹ ಪಟಾಕಿಗಳ ಮೇಲೆ ಕೇಂದ್ರ ಸರ್ಕಾರದ ಸಿಎಸ್‌ಐಆರ್ ಮಾರ್ಕ್ ಇರಬೇಕು.
ಜೊತೆಗೆ ಪಟಾಕಿ ಸಂಸ್ಥೆಯ ಕ್ಯೂಆರ್ ಕೋಡ್ ಇರುತ್ತದೆ. ಇದು ಇದ್ದರೆ ಮಾತ್ರ ಪಟಾಕಿ ಮಾರಾಟ ಮಾಡಬಹುದು.
ಈ ಹಿನ್ನೆಲೆ ನಗರದ ಹಲವೆಡೆ ಇವತ್ತಿನಿಂದ ಪೊಲೀಸರು ಪಟಾಕಿ ದಾಳಿ ನಡೆಸಲಿದ್ದಾರೆ. ಪಟಾಕಿ ಕೊಳ್ಳುವ ಗ್ರಾಹಕರು ನಿಯಮದಂತೆ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.