ಪಟಾಕಿ ನಿಷೇಧಕ್ಕೆ ಆಯುಕ್ತರ ಒಲವು

ಬೆಂಗಳೂರು, ನ.೫-ವಾಯು ಮಾಲಿನ್ಯದಿಂದ ರಾಜಧಾನಿ ಬೆಂಗಳೂರನ್ನು ಕಾಪಾಡಲು ಪಟಾಕಿ ನಿಷೇಧಿಸಿದರೆ ಒಳ್ಳೆಯದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ದೀಪಾವಳಿ ಹಬ್ಬದಲ್ಲಿ ಪಟಾಕಿ ನಿಷೇಧ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಪಾಲಿಕೆ ನಿರ್ಧಾರದ ಪ್ರಕಾರ ಮಾಲಿನ್ಯ ನಿಯಂತ್ರಣ ಮಾಡುವುದು ದೊಡ್ಡ ಸವಾಲಾಗಿದೆ. ಒಂದು ಕಡೆ ಮಾಲಿನ್ಯ, ಮತ್ತೊಂದು ಕಡೆ ಕೋವಿಡ್ ಮುನ್ನೆಚ್ಚರಿಕೆ ವೇಳೆ ಕಾರ್ಯಾಚರಣೆ ದೊಡ್ಡ ಸವಾಲಾಗಿದೆ. ಹೀಗಾಗಿ ದೀಪಾವಳಿ ಹಬ್ಬಕ್ಕೆ ಪಟಾಕಿ ನಿಷೇಧ ಮಾಡುವ ವಿಚಾರ ಸರ್ಕಾರದ ನಿರ್ಧಾರಕ್ಕೆ ಬಿಟ್ಟಿದ್ದು ಎಂದರು.
ಉದ್ಯಾನನಗರಿಯಲ್ಲಿ ವಾಯು ಮಾಲಿನ್ಯ ಕಡಿಮೆ ಮಾಡುವುದರ ಜೊತೆಗೆ ನಗರವನ್ನು ಸುಂದರವಾಗಿ ಇಡಬೇಕಾಗಿರೋದು ಪಾಲಿಕೆಯ ಕೆಲಸ. ಆರೋಗ್ಯ ಇಲಾಖೆಯ ಅಭಿಪ್ರಾಯ ಕೇಳಿ ಸರ್ಕಾರ ನಿರ್ಧಾರ ಮಾಡುತ್ತದೆ. ಅದಾದ ಮೇಲೆ ಪಾಲಿಕೆಯು ಸರ್ಕಾರದ ಆದೇಶವನ್ನ ಪಾಲಿಸುತ್ತೇವೆ ಎಂದು ಅವರು ಹೇಳಿದರು.