ಪಟಾಕಿ ಗೋಡೌನ್‍ಗೆ ಬೆಂಕಿ: ಭಾರಿ ಹಾನಿ


ಹಾವೇರಿ, ಆ 29: ಪಟಾಕಿ ಗೋಡೌನ್‍ಗೆ ಬೆಂಕಿ ತಗುಲಿದ ಪರಿಣಾಮ ಅಪಾರ ಪ್ರಮಾಣದ ಪಟಾಕಿ ಸುಟ್ಟು ಭಸ್ಮವಾದ ಘಟನೆ ಇಂದು ಹಾವೇರಿ ಜಿಲ್ಲೆಯ ಆಲದಕಟ್ಟಿ ಗ್ರಾಮದಲ್ಲಿ ಸಂಭವಿಸಿದ ಬಗ್ಗೆ ವರದಿಯಾಗಿದೆ.
ಆಲದಕಟ್ಟಿ ಗ್ರಾಮದ ಎರೆಡು ಅಂತಸ್ತಿನ ಪಟಾಕಿ ಗೋಡೌನ್‍ಗೆ ಬೆಂಕಿ ತಗುಲಿದ್ದು, ಕೊಟ್ಯಾಂತರ ರೂ. ಮೌಲ್ಯದ ಪಟಾಕಿಗಳು ಸುಟ್ಟು ಭಸ್ಮವಾಗಿದೆ ಎನ್ನಲಾಗಿದೆ. ಪಟಾಕಿ ಗೋಡೌನ್‍ಗೆ ಬೆಂಕಿ ತಗುಲುತ್ತಿದ್ದಂತೆಯೇ ಸಮೀಪದ ಹಾವೇರಿ-ಹಾನಗಲ್ ರಾಷ್ಟ್ರೀಯ ಹೆದ್ದಾರಿಯನ್ನು ಬಹುಹೊತ್ತು ಬಂದ್ ಮಾಡಲಾಗಿತ್ತು.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು.