ಪಟಾಕಿ ಅಂಗಡಿಗಳಿಗೆ ತಹಶೀಲ್ದಾರ ಭೇಟಿ: ದಾಖಲೆಗಳ ಪರಿಶೀಲನೆ

ಶಿರಹಟ್ಟಿ,ಅ.15: ಕಳೆದ ದಿನಗಳ ಹಿಂದೆ ಹಾವೇರಿ ಮತ್ತು ಬೆಂಗಳೂರ ನಲ್ಲಿ ಜರುಗಿದ ಪಟಾಕಿ ಅಂಗಡಿಗಳಲ್ಲಿ ಬೆಂಕಿಯಿಂದ ಆದ ಅನಾಹುತದಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ತಪಾಸಣೆ ಮುಂದಾಗಿದ್ದಾರೆ. ತಾಲೂಕಿನಶಿರಹಟ್ಟಿ ಪಟ್ಟಣ ಮತ್ತು ಬೆಳ್ಳಟ್ಟಿ ಗ್ರಾಮದಲ್ಲಿನ ಪಟಾಕಿ ಅಂಗಳಿಗೆತಹಶೀಲ್ದಾರ ಅನೀಲ ಬಡಿಗೇರ ಹಾಗು ತಂಡು ಬೇಟಿ ನೀಡಿ ದಾಖಲೆಗಳನ್ನು ಪರಶೀಲನೆ ಕಾರ್ಯ ನಡೆಸಿದರು.
ಅವರು ಪಟ್ಟಣದ ಪಟಾಕಿ ಅಂಗಡಿ ಹಾಗೂ ಗೊದಾಮಿಗೆ ಬೇಟಿ ನೀಡಿ ಅಂಗಡಿಯ ದಾಖಲೆಗಳನ್ನು ಪರಿಶೀಲಿಸಿದರು.
ಈಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ ಅನೀಲ ಬಡಿಗೇರ, ಮುನ್ನೆಚ್ಚರಿಕೆಯ ಕ್ರಮವಾಗಿ ಬೆಳ್ಳಟ್ಟಿ ಮತ್ತು ಶಿರಹಟ್ಟಿ ಪಟ್ಟಣದಲ್ಲಿ ಪಟಾಕಿ ಅಂಗಡಿ ಮತ್ತು ಗೋದಾಮುಗಳಿಗೆ ಬೇಟಿ ನೀಡಿ ದಆಖೆಲಗಳನ್ನು ಪರಶೀಲನೆಯ ಕಾರ್ಯ ಜರಗುತ್ತಿದೆ. ಅಂಗಡಿ ಮಾಲಿಕರಿಗೆ ಸುಕರಕ್ಷತಾ ಕ್ರಮವನ್ನು ಅನುಸರಿಸುವಂತೆ ಸೂಚಿಸಲಾಯಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿಎಸ್‍ಐ ಈರಣ್ಣ ರಿತ್ತಿ, ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.