ಪಟಪಳ್ಳಿ ಗ್ರಾಮಸ್ಥರಿಗೆ ಮಾಸ್ಕ್, ಸ್ಯಾನಿಟೈಜರ್ ವಿತರಣೆ

ಚಿಂಚೋಳಿ,ಮೇ.16-ತಾಲೂಕಿನ ಪಟಪಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ತಾಲೂಕ ಘಟಕ ವತಿಯಿಂದ ಕೋವಿಡ್ -19 ಸಹಾಯ ಕೇಂದ್ರದಲ್ಲಿ ಗ್ರಾಮದ ಜನರಿಗೆ ಮಾಸ್ಕ್, ಸ್ಯಾನಿಟೈಜರ್ ವಿತರಣೆಯನ್ನು ಮಾಡಿದರು.
ಅಲ್ಲದೆ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿ ಕೊರೊನಾ ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಪಟಪಳ್ಳಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಆನಂದ ರೆಡ್ಡಿ, ಮಹಿಪಾಲ್ ರೆಡ್ಡಿ, ಶ್ರೀನಿವಾಸ್ ಕೋರಿ, ನಿಜಲಿಂಗಪ್ಪ, ವೀರಾರೆಡ್ಡಿ, ರಾಜಶೇಖರ್ ರೆಡ್ಡಿ, ಸಂದೀಪ್ ರೆಡ್ಡಿ, ರಾಜಾರೆಡ್ಡಿ, ಷರೀಫ್, ನಾಗಮ್ಮ ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.