ಪಕ್ಷ ಸಂಘಟನೆ;ಮಧು ಬಂಗಾರಪ್ಪ

ಬಾದಾಮಿ,ಜ13: ಹಿಂದುಳಿದ ವರ್ಗಗಳ ಮೂಲಕ ಕಾಂಗ್ರೇಸ್ ಪಕ್ಷವನ್ನು ಸಂಘಟನೆ ಮಾಡಲಾಗುತ್ತಿದ್ದು, ಈಗಾಗಲೇ ರಾಜ್ಯಾದ್ಯಂತ 25 ಜಿಲ್ಲೆಗಳಲ್ಲಿ ಪ್ರವಾಸ ಮಾಡಲಾಗಿದೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದರು.
ಅವರು ಪಟ್ಟಣದ ಬ್ಲಾಕ್ ಕಾಂಗ್ರೇಸ್ ಪಕ್ಷ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಾದ್ಯಂತ ಸಂಚರಿಸಿ ಒಬಿಸಿ ಸಂಘಟನೆ ಮಾಡಲಾಗುತ್ತಿದೆ. ಸುಮಾರು ಒಟ್ಟು ಜನಸಂಖ್ಯೆಯಲ್ಲಿ ಶೇ55 ರಿಂದ 60 ರಷ್ಟು ಹಿಂದುಳಿದ ವರ್ಗಗಳಿದ್ದು, ಜಿಲ್ಲಾವಾರು ಒಬಿಸಿ ಸಮಾವೇಶ ಮಾಡಿ ಜನರ ಬೇಡಿಕೆಗಳಿಗನುಗುಣವಾಗಿ ವಿಧಾನಸಭೆ ಚುನಾವಣೆಯ ಪ್ರಣಾಳಿಕೆ ತಯಾರಿಸುವುದಾಗಿ ಭರವಸೆ ನೀಡಿದ ಅವರು ಫೆ.25 ರಂದು ರಾಜ್ಯಮಟ್ಟದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಸಮಾವೇಶಕ್ಕೆ ಎಐಸಿಸಿ ಮುಖಂಡ ರಾಹುಲಗಾಂಧಿ ಆಗಮಿಸಲಿದ್ದು, ಸುಮಾರು 7 ರಿಂದ 8 ಲಕ್ಷ ಜನರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಒಬಿಸಿ ಅಧ್ಯಕ್ಷ ಕಾಶಿನಾಥ ಹುಡೇದ, ಬ್ಲಾಕ ಕಾಂಗ್ರೇಸ್ ಅಧ್ಯಕ್ಷ ಹನಮಂತ ಯಕ್ಕಪ್ಪನ್ನವರ, ಯುವಮುಖಂಡ ಭೀಮಸೇನ ಚಿಮ್ಮನಕಟ್ಟಿ, ಮಂಜು ಗುಬ್ಬಿ, ಶಶಿಕಾಂತ ಉದಗಟ್ಟಿ, ರೇವಣಸಿದ್ದಪ್ಪ ನೋಟಗಾರ, ರಂಗು ಗೌಡರ, ಹನಮಂತ ದೇವರಮನಿ, ಸಂಜಯ ಬರಗುಂಡಿ, ನಾಗಪ್ಪ ಅಡಪಟ್ಟಿ, ಮುತ್ತು ಬಾಗಲೆ, ಅನಿಲಕುಮಾರ ದಡ್ಡಿ, ಶಿವು ಮಣ್ಣೂರ, ಸಿದ್ದು ಗೌಡರ ಸೇರಿದಂತೆ ಇತರರು ಹಾಜರಿದ್ದರು.