ಕೋಲಾರ, ಮೇ ೩೦- ಬಂಗಾರಪೇಟೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬಂಗಾರಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಹುಜನ ಸಮಾಜ ಪಕ್ಷದ ಆತ್ಮಾವಲೋಕನ ಸಭೆಯನ್ನು ಕರೆಯಲಾಗಿತ್ತು.
ಸಭೆಯಲ್ಲಿ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಕೆಂಬೋಡಿ ಕೆ.ಎನ್.ನಾರಾಯಣಸ್ವಾಮಿ ಮಾತನಾಡಿ, ಮುಂದಿನ ಜಿಲ್ಲಾ ಮತ್ತು ತಾಲೂಕು ಪಂಚಾಯತಿ, ಲೋಕಸಭಾ ಚುನಾವಣೆಗಳಲ್ಲಿ ಪಕ್ಷವನ್ನು ಬಲಪಡಿಸಿ ಸಂಘಟಿತರಾಗಬೇಕು. ಕ್ಷೇತ್ರಾದ್ಯಂತ ಪ್ರತಿ ಬೂತ್ ಮಟ್ಟದಲ್ಲಿ ಕಮಿಟಿಗಳನ್ನು ರಚಿಸಿ ಜಿಲ್ಲಾ ಮತ್ತು ತಾಲೂಕು ಪಂಚಾಯತಿ, ಲೋಕಸಭಾ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕೆಂದು ಕರೆ ನೀಡಿದರು.
ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ದಿಂಬ ಆನಂದ್ ಮಾತನಾಡಿ, ಸರ್ಕಾರಿ ಸೌಲತ್ತುಗಳನ್ನು ಬಳಸಿಕೊಂಡು ಸಂಘಟಿತರಾಗಿ ಪಕ್ಷವನ್ನು ಬಲಪಡಿಸಬೇಕೆಂದು ಕರೆ ನೀಡಿದರು.
ಬಹುಜನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹೂಹಳ್ಳಿ ನಾಗರಾಜ್ ಮಾತನಾಡಿ, ಬಹುಜನ ಸಮಾಜ ಪಕ್ಷದ ಬಗ್ಗೆ, ಹುಟ್ಟು, ಆಳ, ಅಂತರ, ಬಲವರ್ಧನೆ ಭವಿಷ್ಯದಲ್ಲಿ ಪಕ್ಷವನ್ನು ಯಾವ ರೀತಿ ಅಧಿಕಾರಕ್ಕೆ ತರಬೇಕೆಂದು ಕಾರ್ಯಕರ್ತರಲ್ಲಿ ಜಾಗೃತಿ ಮೂಡಿಸಿದರು.
ಸಭೆಯಲ್ಲಿ ಸಂಯೋಜಕ ಚಿಕ್ಕಅಂಕಡಹಳ್ಳಿ ಮೋಹನ್, ಉಪಾಧ್ಯಕ್ಷ ರಮಣ್‌ಕುಮಾರ್, ಅರಿಮಾನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಜೋತಿಷಿ, ಹೆಚ್.ಜಿ.ಕೋಟೆ ಪಾರ್ವತಮ್ಮ, ಭಾಗ್ಯ, ಹುಣಸನಹಳ್ಳಿ ಗಂಗಾಧರ್, ಮಾಲೂರು ವಿಧಾನ ಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ವಡಗನಹಳ್ಳಿ ರಮೇಶ್ ಉಪಸ್ಥಿತರಿದ್ದರು.