ಪಕ್ಷ ಸಂಘಟನೆಗೆ ಆಮ್ ಆದ್ಮಿ  ಸಭೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.14: ಇಲ್ಲಿನ ಶಾಸ್ತ್ರಿ ನಗರದಲ್ಲಿನ  ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ. ಪಕ್ಷದ  ಜಿಲ್ಲಾಧ್ಯಕ್ಷ ಜೆ.ವಿ.ಮಂಜುನಾಥ ಇವರ ನೇತೃತ್ವದಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷ ಸಂಘಟನೆ,  ಪಕ್ಷದ ಸದಸ್ಯತ್ವದ ಅಭಿಯಾನ ಮತ್ತು ಬಳ್ಳಾರಿ ನಗರ ಮತ್ತು ಜಿಲ್ಲೆಯಾದ್ಯಂತ ಸಾರ್ವಜನಿಕರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳುವಲ್ಲಿ ಇರುವ ಸಮಸ್ಯೆಗಳ ಬಗ್ಗೆ ಅವಲೋಕಿಸಲಾಯಿತು.
ತಾಲೂಕು ಸಮಿತಿ ಮತ್ತು ವಿವಿಧ ಮುಂಚೂಣಿ ಘಟಕಗಳಿಗೆ  ಪದಾಧಿಕಾರಿಗಳ ನೇಮಿಸುವ ಕುರಿತು ಸಹ  ಚರ್ಚಿಸಲಾಯಿತು,
ಪಕ್ಷದ  ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರನ್ನು ಬಳ್ಳಾರಿಗೆ ಕರೆಸಿ ಅವರ ಸಮ್ಮುಖದಲ್ಲಿ  ಜಿಲ್ಲೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಮಾಡಬೇಕೆಂದು ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಸಯ್ಯದ್ ಅಮೀರ್ ಖಾದ್ರಿ, ಮಾಧ್ಯಮ ಉಸ್ತುವಾರಿ ಶೇಖರ್ ಯಾದವ್,  ಕಾರ್ಯಕರ್ತರುಗಳಾದ, ಸರ್ದಾರ್ , ಜಾನಕಿ ರಾಮ್, ನೂರಾಹಮದ್, ಮನ್ಸೂರ್, ನಾಗರಾಜ್ ಗೌಡ, ಶ್ರೀದೇವಿ, ಲಕ್ಷ್ಮಿ, ನಟರಾಜ್, ಅಯ್ಯನಗೌಡ, ರಘು ರೆಡ್ಡಿ ಮಲ್ಲಿಕಾರ್ಜುನ್ ರೆಡ್ಡಿ ಮುಂತಾದವರು ಇದ್ದರು.