ಪಕ್ಷ ಸಂಘಟನೆಗೆ ಆದ್ಯತೆ ನೀಡಲು ಸಲಹೆ

ಹರಪನಹಳ್ಳಿ.ಜ.೨೦: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಪಂಚಾಯತಿ ಸ್ಥಾಯಿ ಸಮಿತಿ ನಾಮರ್ದೇಶಿತ ಸದಸ್ಯ, ಬಿಜೆಪಿ ಹಿರಿಯ ಮುಖಂಡರಾದ ಕಣವಿಹಳ್ಳಿ ಮಂಜುನಾಥ ಅವರ ನೇತೃತ್ವದಲ್ಲಿ ಸಭೆ ನಡೆಸಿರುವ ಕ್ಷೇತ್ರದ ಮಾದಿಗ ಸಮಾಜದ ಬಿಜೆಪಿ ಮುಖಂಡರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಗೆಲ್ಲಿಸುವ ಹಿನ್ನಲೆಯಲ್ಲಿಯಾವುದೇ ಒಬ್ಬ ನಾಯಕರ ಜೊತೆ ಗುರುತಿಸಿಕೊಳ್ಳದೇ ಶಾಸಕರಾದ ಜಿ.ಕರುಣಾಕರೆರಡ್ಡಿ ಹಾಗೂ ಸ್ಥಳೀಯ ಬಿಜೆಪಿ ಮುಖಂಡರ ಮಾರ್ಗದರ್ಶನದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ತಾಲ್ಲೂಕು ಅಧ್ಯಕ್ಷ ಸತ್ತೂರು ಹಾಲೇಶ್ ಸಾರಥ್ಯದಲ್ಲಿ ಪಕ್ಷವನ್ನು ಸಂಘಟಿಸಲು ನಿರ್ಧಾರ ಕೈಗೊಂಡಿದ್ದಾರೆ.ಸಭೆಯ ನೇತೃತ್ವವಹಿಸಿದ್ದ ಕಣವಿಹಳ್ಳಿ ಮಂಜುನಾಥ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಜನಪರವಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಹೀಗಾಗಿ ಹರಪನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಗೆಲ್ಲುವ ಅವಕಾಶಗಳು ಹೆಚ್ಚಾಗಿವೆ. ಮಾದಿಗ ಸಮಾಜವೂ ಕೂಡ ಬಿಜೆಪಿ ಪಕ್ಷದ ಜೊತೆಗೆ ಗುರುತಿಸಿಕೊಂಡಿದೆ. ಕಾಂಗ್ರೆಸ್ ಪಕ್ಷದವರು ಸ್ಪೃಶ್ಯ ಜಾತಿಗಳನ್ನು ಸೇರಿಸಿ ಅಸ್ಪೃಶ್ಯ ಜಾತಿಗಳಿಗೆ ಅನ್ಯಾಯ ಮಾಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮಾದಿಗರು ಒಗ್ಗಟ್ಟು ಪ್ರದರ್ಶಿಸಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಪಣತೊಡಬೇಕೆಂದು ಕರೆ ನೀಡಿದರು.ದಲಿತ ಮುಖ್ಯಮಂತ್ರಿ ಮಾಡುವುದು ಬಿಜೆಪಿ ಪಕ್ಷದಿಂದ ಮಾತ್ರ ಸಾಧ್ಯ. ಒಳ ಮೀಸಲಾತಿ ಕೊಡುವ ಎಲ್ಲಾ ಲಕ್ಷಣಗಳು ಕೂಡ ಇದೆ. ಸದಾಶಿವ ಆಯೋಗವನ್ನು ಕೂಡ ಅನುಷ್ಠಾನಕ್ಕೆ ತರಲು ಬಿಜೆಪಿ ಸರ್ಕಾರ ಬದ್ದವಾಗಿದೆ. ಮುಂದಿನ ದಿನಗಳಲ್ಲಿ ಸ್ಥಳೀಯವಾಗಿ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರನ್ನು ಬೆಂಬಲಿಸೋಣ. ಈ ತಿಂಗಳ ಕೊನೆಯಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಸುವ ಕಾರ್ಯಕ್ರಮ ಆಯೋಜಿಸೋಣ ಎಂದರು.ಮುಖAಡ ತೆಲಿಗಿ ಹನುಮಂತಪ್ಪ ಮಾತನಾಡಿ, ಮಾದಿಗ ಸಮಾಜ ಒಗ್ಗಟ್ಟಾಗಿ ಬಿಜೆಪಿ ಬೆಂಬಲಿಸೋಣ, ಜಿಲ್ಲಾಧ್ಯಕ್ಷರು, ತಾಲ್ಲೂಕು ಅದ್ಯಕ್ಷರು, ಶಾಸಕರನ್ನು ಒಳಗೊಂಡು ಕಾರ್ಯಕ್ರಮ ರೂಪಿಸುವಂತೆ ಸಲಹೆ ನೀಡಿದರು.ಮುಖಂಡ ಹಲುವಾಗಲು ನೆರೆತಲೆ ರಮೇಶ್ ಮಾತನಾಡಿ, ಮಾದಿಗ ಸಮಾಜವೂ ಕೂಡ ಮೇಲ್ವರ್ಗದವರಂತೆ ಸಂಘಟಿತರಾಗಬೇಕು. ನಮ್ಮಲ್ಲಿ ಒಳಜಗಳ ಮರೆತು ಮಾದಿಗ ಜನಾಂಗ ಬಿಜೆಪಿ ಬೆಂಬಲಿಸುತ್ತದೆಎAಬುವುದನ್ನು ನಾವು ತೋರಿಸೋಣ. ಕ್ಷೇತ್ರದಲ್ಲಿ ನಮ್ಮ ಮತಗಳು ಹೆಚ್ಚಾಗಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಸಂಘಟಿಸೋಣ ಜೊತೆಗೆ ಕಾರ್ಯಕ್ರಮ ಆಯೋಜಿಸೋಣ ಎಂದರು.