ಪಕ್ಷ ಸಂಘಟನೆಗಾಗಿ ಜೆಡಿಎಸ್ ನಿಂದ ಪ್ರಚಾರ ಯಾತ್ರೆ


ಸಂಜೆ ವಾಣಿ ವಾರ್ತೆ
ಕೊಟ್ಟೂರು, ಮಾ.26: ಜೆಡಿಎಸ್ ಪಕ್ಷದ ಸಂಘಟನೆಗಾಗಿ  ಹಗರಿಬೊಮ್ಮನಹಳ್ಳಿ ಕ್ಷೇತ್ರದ ಜೆಡಿಎಸ್ ನ ಆಕಾಂಕ್ಷಿಯಾದ ನಿವೃತ್ತ ಆರ್‌ಟಿಓ ಪರಮೇಶ್ವರಪ್ಪ ನೇತೃತ್ವದಲ್ಲಿ ಪಕ್ಷ ಸಂಘಟನೆಯ ಪ್ರಚಾರ ಯಾತ್ರೆಯನ್ನು ಕೈಗೊಳ್ಳಲಾಯಿತು.
 ಈ ಪ್ರಚಾರ ಯಾತ್ರೆಯು  ಕೊಟ್ಟೂರೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡು ಗಾಂಧಿ ಸರ್ಕಲ್, ಉಜ್ಜಿನಿ ಸರ್ಕಲ್ ಮಾರ್ಗವಾಗಿ ಬಸ್ ಸ್ಟ್ಯಾಂಡ್, ಎಪಿಎಂಸಿ ಪ್ರಮುಖ ಬೀದಿಗಳಲ್ಲಿ ಜೆಡಿಎಸ್ ನ ಪ್ರಚಾರ ಯಾತ್ರೆಯನ್ನು ಸಕಲ ವಾದ್ಯಗಳೊಂದಿಗೆ ಅದ್ದೂರಿಯಾಗಿ ಕೈಗೊಳ್ಳಲಾಯಿತು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಪಕ್ಷದ ಹಗರಿಬೊಮ್ಮನಹಳ್ಳಿ ಕ್ಷೇತ್ರದ ತಾಲೂಕು ಅಧ್ಯಕ್ಷರಾದ ಮಲ್ಲಿಕಾರ್ಜುನ್ ಮಾತನಾಡಿ ನಮ್ಮ ಜೆಡಿಎಸ್ ಪಕ್ಷವು ಅಧಿಕಾರಕ್ಕೆ ಬಂದರೆ ಪಂಚ ರತ್ನ ಯೋಜನೆಯನ್ನು ಜಾರಿಗೊಳಿಸುತ್ತದೆ. ಪಂಚರತ್ನ ಯೋಜನೆಗಳಾದ ವಿಧವೆಯವರಿಗೆ 2500 ರೂ, ಹಿರಿಯರಿಗೆ 5000 ರೂ, ಎಲ್‌ಕೆಜಿಯಿಂದ ಪಿಯುಸಿಯವರಿಗೆ ಇಂಗ್ಲಿಷ್ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ವ್ಯವಸ್ಥೆ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಾಣ, ವಸತಿ ಸೌಲಭ್ಯಗಳು, ಸಂಪನ್ಮೂಲಗಳನ್ನು ಕ್ರೋಡೀಕರಿಸಿ ಯುವಕ, ಮಹಿಳೆಯರಿಗೆ  ಉದ್ಯೋಗದ ಸೃಷ್ಟಿ, ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ, ಮಹಿಳೆಯರ ಸ್ವ ಸಂಘದ ಸಾಲ ಮನ್ನಾ ಈ ಎಲ್ಲಾ ಯೋಜನೆಗಳನ್ನು  ನಮ್ಮ ಕುಮಾರಣ್ಣ  ಮುಖ್ಯಮಂತ್ರಿಯಾದ 24 ಗಂಟೆಯೊಳಗಾಗಿ  ಜಾರಿಗೊಳಿಸುತ್ತಾರೆ, ಹಾಗಾಗಿ ಪ್ರತಿಯೊಬ್ಬರೂ ಜೆಡಿಎಸ್ ಪಕ್ಷಕ್ಕೆ ಮತ ನೀಡಿ ಎಂದು ತಿಳಿಸಿದರು.
 ನಂತರ ಹಗರಿಬೊಮ್ಮನ ಕ್ಷೇತ್ರದ ಜೆಡಿಎಸ್  ಪಕ್ಷದ ಆಕಾಂಕ್ಷಿಯಾದ  ನಿವೃತ್ತ ಆರ್ ಟಿ ಓ ಪರಮೇಶ್ವರಪ್ಪ ಮಾತನಾಡಿ ನಾವು ಈಗಾಗಲೇ ಹಗರಿಬೊಮ್ಮನಹಳ್ಳಿ ಕ್ಷೇತ್ರ ವ್ಯಾಪ್ತಿಯ ಅನೇಕ ಭಾಗಗಳಿಗೆ ತೆರಳಿ ಜೆಡಿಎಸ್  ಪಕ್ಷ ಸಂಘಟನೆಯನ್ನು ಮಾಡಿದ್ದೇವೆ, ಪಕ್ಷದ ಕೆಲಸ ಕಾರ್ಯಗಳ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡುತ್ತಿದ್ದೇವೆ ನಮ್ಮ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ  ನಮ್ಮ ಪಕ್ಷಕ್ಕೆ 80ರಷ್ಟು ಜನರು  ಬೆಂಬಲವನ್ನು ನೀಡಿದ್ದಾರೆ, ನಾವು ಕೊಟ್ಟೂರು ಭಾಗದಲ್ಲಿ ಇದು ಮೂರನೇ ಬಾರಿ ಪ್ರಚಾರ ಮಾಡುತ್ತಿದ್ದೇವೆ ಎಂದು ತಿಳಿಸಿದರು.
 ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಕೃಷ್ಣಮೂರ್ತಿ, ಹಗರಿಬೊಮ್ಮನಹಳ್ಳಿಯ ಎಸ್ಸಿ ಘಟಕದ ಅಧ್ಯಕ್ಷರಾದ ಪರಮೇಶ್ವರ್, ಕೊಟ್ಟೂರು ತಾಲೂಕು ಅಧ್ಯಕ್ಷರಾದ ಸೋಮಶೇಖರ್, ಪ್ರಹ್ಲಾದ್, ಕೆ ವೈ ಶಿವಕುಮಾರ್, ರವಿ ಜಾಗಟಗೇರೆ, ಸಿದ್ದೇಶ್, ಶರಣಪ್ಪ, ಮಾಜು ಬೇನ್,  ನಜೀರ್ ಅಹ್ಮದ್,  ಕೆಂಚಪ್ಪ,  ಸೇರಿದಂತೆ ಅನೇಕರು ಜೆಡಿಎಸ್ ನ ಪ್ರಚಾರ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.