ಪಕ್ಷ ಭೇದ ಮರೆತು ಜಿಲ್ಲೆಯ ಅಭಿವೃದ್ಧಿಗೆ ಮುಂದಾಗಬೇಕು: ಎಸ್.ಮುನಿಸ್ವಾಮಿ

ಕೋಲಾರ, ಮಾ, ೨೮- ಜಿಲ್ಲೆಯ ಅಭಿವೃದ್ದಿ ವಿಚಾರದಲ್ಲಿ ಜನಪ್ರತಿನಿಧಿಗಳು ಯಾವುದೇ ಪಕ್ಷ, ಜಾತಿ, ಧರ್ಮ ಇಲ್ಲದೆ ಎಲ್ಲರೂ ಕೈಜೋಡಿಸುವ ಮೂಲಕ ಸರ್ಕಾರದ ಮೇಲೆ ಒತ್ತಡ ಸೇರಿ ಮಂಜೂರಾತಿ ಮಾಡಿಸಿದಾಗ ಮಾತ್ರ ಜಿಲ್ಲೆಯ ಅಭಿವೃದ್ದಿ ಸಾಧ್ಯ ಎಂದು ಸಂಸದ ಎಸ್.ಮುನಿಸ್ವಾಮಿ ಅಭಿಪ್ರಾಯ ಪಟ್ಟರು,
ನಗರದ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್, ಕಂದಾಯ ಇಲಾಖೆ,ಅರೋಗ್ಯ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ಇತರೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ನೂತನ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಹಾಗೂ ವಿವಿದ ಕಾಮಗಾರಿಗಳ ಶಂಖು ಸ್ಥಾಪನೆ ಮತ್ತು ಉದ್ಘಾಟನೆ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿ ಜಿಲ್ಲೆಯ ವಿವಿಧ ಇಲಾಖೆಗಳ ೨೫೩ ಕೋಟಿ ವೆಚ್ಚದಲ್ಲಿ ನಗರೋತ್ಥಾನ,ಅರೋಗ್ಯ ಇಲಾಖೆ,ಲೋಕೋಪಯೋಗಿ ಅಂಗನವಾಡಿ ಸೇರಿದಂತೆ ವಿವಿಧ ಕಾಮಗಾರಿಗಳ ಟೆಂಡರ್ ಕಾರ್ಯಗಳು ಚಾಲನೆ ದೊರೆತು ಕಾಮಗಾರಿಗಳನ್ನು ಅನುಷ್ಠನಕ್ಕೆ ತರಲಾಗುವುದು ಎಂದರು,
ಅಮೃತ ಸರೋವರ ಯೋಜನೆಯಲ್ಲಿ ಚಿನ್ನದ ಪದಕ-
ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯಾನಿರ್ವಾಹಣಾಧಿಕಾರಿಗಳು ಜೋಡೆತ್ತುಗಳಂತೆ ಜಿಲ್ಲೆಯ ಅಭಿವೃದ್ದಿಗಳಿಗೆ ಶ್ರಮಿಸುತ್ತಿರುವುದು ಅಭಿನಂದನೀಯ ಎಂದ ಅವರು ಕೆರೆಗಳ ಅಭಿವೃದ್ದಿಯನ್ನು ನರೇಗಾ ಮತ್ತು ಸಿ.ಎಸ್.ಆರ್.ನಲ್ಲಿ ನಿರ್ಮಾಲ ಸೀತರಾಮನ್ ಅವರು ನೀಡಿರುವ ಅಮೃತ ಸರೋವಾರ ಯೋಜನೆಯ ಕಾಮಗಾರಿಗೆ ಚಿನ್ನದ ಪದಕ ಜಿಲ್ಲೆಗೆ ಬಂದಿರುವುದು ಅಭಿನಂಧನಾರ್ಹ ಎಂದು ಹರ್ಷ ವ್ಯಕ್ತ ಪಡೆಸಿದರು,
ಕೋಲಾರ ಜಿಲ್ಲೆಯ ೬ ವಿಧಾನ ಸಭಾ ಕ್ಷೇತ್ರಗಳಿಗೆ ರೂ ೧೮೮೦ ಕೋಟಿ ವೆಚ್ಚದಲ್ಲಿ ಪ್ರತಿ ಗ್ರಾಮಗಳ ಮನೆ,ಮನೆಗೂ ಕುಡಿಯುವ ನೀರಿನ ಸಂರ್ಪಕ ನೀಡಲಾಗುವುದು. ಕೋಲಾರದಲ್ಲಿ ೨೫೯೦ ಫಲಾನುಭವಿಗಳಿಗೆ ಮನೆಗಳ ಹಕ್ಕು ಪತ್ರಗಳನ್ನು ವಿತರಣೆ ಮಾಡಲಾಗುತ್ತಿದೆ. ಇದೇ ರೀತಿ ಜಿಲ್ಲೆಯ ೬ ತಾಲ್ಲೂಕುಗಳಲ್ಲೂ ೫೦ ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗುತ್ತಿದೆ ಎಂದರು.
ಜಿಲ್ಲೆಯ ೬ ಕ್ಷೇತ್ರಗಳಲ್ಲಿ ರಸ್ತೆಗಳ ನಿರ್ಮಾಣ ಹಾಗೂ ದುರಸ್ಥಿಗಾಗಿ ೧೫೮ ಕೋಟಿ ರೂಗಳನ್ನು ಬಿಡುಗಡೆ ಮಾಡಿ ೧೪೦ ಕೋಟಿ ರೂಗಳ ಟೆಂಡರ್ ಕರೆಯಲಾಗಿದೆ. ಗ್ರಾಮ ಸಡಕ್ ಯೋಜನೆಯಲ್ಲಿ ಲೋಕಸಭಾ ಕ್ಷೇತ್ರದ ೮ ಜಿಲ್ಲೆಗಳಲ್ಲಿ ೧೨೭ ಕೋಟಿ ರೂಗಳನ್ನು ರಸ್ತೆಗಳ ಕಾಮಗಾರಿಯ ಅಭಿವೃದ್ದಿಗೆ ಮಂಜೂರು ಮಾಡಿದೆ ಎಂದು ಹೇಳಿದರು,
ಆಯುಷ್ಮನ್ ಭಾರತ್ ಕಾರ್ಡಗಳನ್ನು ಪಡೆದ ಪ್ರತಿಯೊರ್ವ ಫಲಾನುಭವಿಗಳು ೫ ಲಕ್ಷ ರೂ ವೆಚ್ಚದಲ್ಲಿ ಚಿಕಿತ್ಸೆ ಪಡೆಯ ಬಹುದಾಗಿದೆ ಎಂದ ಅವರು ನಗರ ಹೊರವಲಯದ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಕೋವಿಡ್ ಸಂದರ್ಭದಲ್ಲಿ ನೀಡಿದ ಚಿಕಿತ್ಸೆಗೆ ೩.೭೫ ಕೋಟಿ ರೂಗಳನ್ನು ನೀಡಲಾಗಿದೆ. ಭಾರತದ ೧೩೫ ಕೋಟಿ ಜನತೆಗೆ ಯಚಿತವಾಗಿ ವ್ಯಾಕ್ಸಿನ್ ನೀಡಲು ಸರ್ಕಾರವು ೮೦ ಕೋಟಿ ರೂ ವೆಚ್ಚ ಮಾಡಿದೆ ಎಂದು ತಿಳಿಸಿದರು,