ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ :ಮೇ.28 ಕ್ಷೇತ್ರದ ವ್ಯಾಪ್ತಿಯಲ್ಲಿ ಪಕ್ಷ ಬೇದ ಮರೆತು ಅಭಿವೃದ್ಧಿ ಮಾಡುವೆ ಎಂದು ನೂತನ ಶಾಸಕ ಕೆ.ನೇಮಿರಾಜ್ ನಾಯ್ಕ್ ತಿಳಿಸಿದರು.
ತಾಲ್ಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ಶ್ರೀ ಬಂಡೇ ರಂಗನಾಥೇಶ್ವರ ಸ್ವಾಮಿ ದೇವಸ್ಥಾನ ಸಮಿತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕ್ಷೇತ್ರದ ಪ್ರತಿ ಹಳ್ಳಿ ಪಟ್ಟಣ ಸೇರಿದಂತೆ ನಾನಾ ಗ್ರಾಮಗಳಲ್ಲಿ ನನಗೆ ಅಣ್ಣ ತಮ್ಮನಂತೆ ಗೌರವಿಸಿ ತಮ್ಮ ಮನೆಯ ಕುಟುಂಬದ ಸದಸ್ಯನಂತೆ ಕಂಡಿದ್ದಾರೆ. ನಾನು ನನ್ನ ಜೀವನ ಇರುವವರೆಗೂ ಅವರ ಸೇವೆ ಮಾಡುವೆ. ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಕೆಲಸ ಮಾಡಿ ಅವರ ವಿಶ್ವಾಸ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವೆ,
ಈ ಭಾಗದ ನಡೆದಾಡುವ ದೇವರೆಂದು ಪ್ರಸಿದ್ದಿ ಪಡೆದಿರುವ ಡಾ. ಮಹೇಶ್ವರ ಸ್ವಾಮೀಜಿ ಅವರ. ಮಾರ್ಗದರ್ಶನದಲ್ಲಿ ಕ್ಷೇತ್ರದ ಅಭಿವೃದ್ಧಿ ಕೈಗೊಳ್ಳಲಾಗುವುದು. ಈ ಹಿಂದೆ ಶಾಸಕನಾಗಿದ್ದ ಸಂದರ್ಭದಲ್ಲಿ ಕೂಡ ಸ್ವಾಮೀಜಿ ನೇತೃತ್ವದಲ್ಲಿ ಅನೇಕ ಅಭಿವೃದ್ದಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿತ್ತು. ಅದರಂತೆ ಶ್ರೀ ಬಂಡೇ ರಂಗನಾಥೇಶ್ವರ ಸ್ವಾಮಿ ಬೆಟ್ಟದಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳನ್ನು ಶ್ರೀಗಳ ಮಾರ್ಗದರ್ಶನ ಹಾಗೂ ಕಮಿಟಿಯವರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರ ಆಶಯದಂತೆ ಶ್ರೀ ರಂಗನಾಥೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಎಲ್ಲಾ ಮೂಲಭೂತ ಸೌಲಭ್ಯಗಳೊಂದಿಗೆ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ತಂಬ್ರಹಳ್ಳಿ ಗ್ರಾಮದಲ್ಲಿ ತಳವಾರ ಬಸವರಾಜ್ ಎಂಬ. ಲಾರಿ ಚಾಲಕ ನೇಮಿರಾಜ್ ನಾಯ್ಕ್ ಗೆಲುವಿಗಾಗಿ ಹರಕೆ ಹೊತ್ತಿದ್ದ ಪ್ರಯುಕ್ತ ಗ್ರಾಮದ ಕೊಟ್ಟೂರೇಶ್ವರ ದೇವಸ್ಥಾನದಿಂದ ಆಂಜನೇಯ ದೇವಸ್ಥಾನದವರೆಗೆ ದೀಡು ನಮಸ್ಕಾರ ಹಾಕಿ ಹರಕೆ ತೀರಿಸಿದರು. ಅವರಿಗೆ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಕೊಟ್ಟೂರೇಶ್ವರ ದೇವಸ್ಥಾನದಲ್ಲಿ 101 ತೆಂಗಿನಕಾಯಿ ಒಡೆದು ಹರಕೆ ತೋರಿಸಲಾಯಿತು.
ಈ ವೇಳೆ ನಂದಿಪುರದ ಡಾ. ಮಹೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು .ಶ್ರೀರಂಗನಾಥ ಸೇವಾ ಸಮಿತಿಯಿಂದ ನೂತನ ಶಾಸಕ ನೇಮರಾಜ್ ನಾಯ್ಕ್ ರನ್ನು ಸನ್ಮಾನಿಸಿ ಗೌರವಿಸಲಾಯಿತು
ಈ ಸಂದರ್ಭದಲ್ಲಿ ಬಣಕಾರ ತೋಟಪ್ಪ ಗೌರಜ್ಜನವರ ಬಸವರಾಜಪ್ಪ ಬಣಕಾರ್ ಕೊಟ್ರೇಶ್ ಕಡ್ಡಿ ಚನ್ನಪ್ಪ ಬಾಚಿಗೊಂಡನಹಳ್ಳಿ ಶೇಖರಪ್ಪ ಕೆ ರೋಹಿತ್ , ಬಾದಾಮಿ ಮೃತ್ಯುಂಜಯ, ಕನ್ನಿಹಳ್ಳಿ ಚಂದ್ರಶೇಖರ, ಜಿ ಎಂ ಜಗದೀಶ್ ಬಣಕಾರ್ ಅರುಣ್ ,ಸೊಬಟಿ ಹರೀಶ್, ಕಡ್ಡಿ ಕೊಟ್ರೇಶ್ ಸುಣಗಾರ ಪರಶುರಾಮ್ ಲಾರಿ ಚಾಲಕ ಮರಿಯಜ್ಜ ಅಳವಂಡಿ ಸಿದ್ದರೆಡ್ಡಿ , ಪೂಜಾರ್ ಚಂದ್ರಪ್ಪ, ಚಂದ್ರಶೇಖರ್ ಪಾಟೀಲ್ ಆನೇಕಲ್ ಶಾಂತಪ್ಪ ಅಕ್ಕಿ ಕೊಟ್ರಬಸಪ್ಪ ಮುತ್ಕೂರು ಮಂಜು ರೆಡ್ಡಿ ,ಮೂಲೆಮನಿ ರವಿಪ್ರಸಾದ್ ಸಮಿತಿಯ ಅಧ್ಯಕ್ಷ ಬಸರಗೋಡು ಲಕ್ಷ್ಮಣ ಹಾಗೂ ಪದಾಧಿಕಾರಿಗಳು ಇತರರಿದ್ದರು