ಪಕ್ಷ ದ್ರೋಹಿಗಳ ವಿರುದ್ಧ ವರಿಷ್ಟರಿಗೆ ದೂರು ಸಲ್ಲಿಸಿರುವೆ: ಈಶ್ವರಸಿಂಗ್

ಬೀದರ್:ಮೇ.14: ಪಕ್ಷದೊಳಗಿದ್ದುಕೊಂಡೆ ನನ್ನ ವಿರೂದ್ಧ ಚುನಾವಣೆಯಲ್ಲಿ ಕೆಲಸ ಮಾಡಿರುವವರ ವಿರೂದ್ಧ ಬಿಜೆಪಿ ವರಿಷ್ಟರಿಗೆ ದೂರು ನೀಡಿದ್ದೇನೆ ಎಂದು ಬಿಜೆಪಿ ಉತ್ತರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಈಶ್ವರಸಿಂಗ್ ಠಾಕೂರ್ ಹೇಳಿದರು.

ನಗರದ ಖಾಸಗಿ ಹೋಟಲನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿಯಲ್ಲಿದ್ದುಕೊಂಡೆ ಪಕ್ಷವನ್ನು ಚನ್ನಾಗಿ ಬಳಿಸಿಕೊಂಡು, ಕೊಟ್ಯಾವಧಿ ಹಣ ಗಳಿಸಿ ಪಕ್ಷ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಟಿಕೇಟ್ ನೀಡಿರುವಾಗ ನಮ್ಮ ಪಕ್ಷ ತಾಯಿ ಇದ್ದಂತೆ. ತಾಯಿಗೆ ಮೋಸ ಮಾಡಿರುವ ಪಕ್ಷದ ಮುಖಂಡ ಡಿ.ಕೆ ಸಿದ್ರಾಮ ಹಾಗೂ ಇತರೆ 15ಕ್ಕೂ ಅಧಿಕ ಪಕ್ಷದ್ರೋಹಿಗಳ ವಿರೂದ್ಧ ದೂರು ನೀಡಿರುವುದಾಗಿ ಠಾಕೂರ್ ಹೇಳಿದರು.

ಈ ಹಿಂದೆ ಸೂರ್ಯಕಾಂತ ನಾಗಮಾರಪಳ್ಳಿ ಹಾಗೂ ಅವರ ತಂದೆ ದಿ.ಡಾ.ಗುರುಪಾದಪ್ಪ ನಾಗಮಾರಪಳ್ಳಿ ಅವರಿಗೆ ಪಕ್ಷ ಟಿಕೇಟ್ ನೀಡಿದಾಗ ನಾನು ಹಾಗೂ ನನ್ನ ಅಪಾರ ಬೆಂಬಲಿಗರು ಅವರ ಪರವಾಗಿ ಹಗಲಿರುಳೆನ್ನದೇ ಕೆಲಸ ನಿಸ್ವಾರ್ಥದಿಂದ ಕೆಲಸ ಮಾಡಿದ್ದೇವೆ. ಪಕ್ಷ 2018ರಲ್ಲಿ ಮತ್ತೊಮ್ಮೆ ಟಿಕೇಟ್ ನೀಡಿದಾಗಲೂ ಸಹ ಪ್ರಾಮಾಣಿಕತೆಯಿಂದ ಮನೆ, ಮಡದಿ, ಮಕ್ಕಳೆನ್ನದೇ ಹಗಲಿರುಳು ಕೆಲಸ ಮಾಡಿದ್ದೇವೆ. ಪಕ್ಷದಲ್ಲಿ ಏನೇ ಫಲಾಪೆಕ್ಷೆ ಇಲ್ಲದೇ ನಿಸ್ವಾರ್ಥದಿಂದ ದುಡಿದ ನನ್ನಂತಹ ಸಾಮಾನ್ಯ ಕಾರ್ಯಕರ್ತನಿಗೆ ಟಿಕೇಟ್ ನೀಡಿದಾಗ ಕೂಡಲೇ ಪಕ್ಷ ಬಿಟ್ಟು ಜೆಡಿಎಸ್ ಸೇರಿ ನನ್ನ ವಿರೂದ್ಧವೇ ಚುನಾವಣೆಯಲ್ಲಿ ನಿಲ್ಲುವ ಮೂಲಕ ನನಗೆ ಹಾಗೂ ತಾಯಿಯಂತಿರುವ ನನ್ನ ಪಕ್ಷಕ್ಕೆ ದ್ರೋಹ ಬಗೆದವರಿಗೆ ದೇವರು ಯಾವತ್ತೂ ಕ್ಷಮಿದುವುದಿಲ್ಲ ಎಂದು ತಮ್ಮ ಆಕ್ರೋಶದ ಧ್ವನಿಯಲ್ಲಿ ವಿವರಿಸಿದರು.

ಹಾಲಿ ಶಾಸಕ ರಹಿಮ್ ಖಾನ್ ಗೆದ್ದಿರುವುದು ನನ್ನ ಹಾಗೂ ಸೂರ್ಯಕಾಂತ ಅವರ ಒಳ ಜಗಳದಿಂದಲ್ಲ ಬದಲಿಗೆ ಪಕ್ಷದ ಎಲ್ಲ ಸುಖ ಅನುಭವಿಸಿ ಪಕ್ಷಕ್ಕೆ ದೋಹ ಬಗೆದ ಕಾರಣ ಇದು ಭಗವಂತನ ಶಾಪವಷ್ಟೆ ಎಂದರು.

ನಾನು ಒಬ್ಬ ಕಟ್ಟಾ ಹಿಂದುತ್ವವಾದಿ, ಭಾರತೀಯತ್ವ ಹಾಗೂ ದೇಶಭಕ್ತನಲ್ಲದೇ ಭಾರತೀಯ ಜನತಾ ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿ ಮತದಾರ ಪ್ರಭುಗಳಲ್ಲಿ ಮತ ಯಾಚಿಸಿದ್ದೇನೆ. ದೇಶವನ್ನು ಪ್ರೀತಿಸಿ ಗೌರವಿಸುವ ಸುಮಾರು 18 ಸಾವಿರ ಕ್ಷೇತ್ರದ ಎಲ್ಲ ಸಮುದಾಯದ ಮತದಾರರು ನನಗೆ ಮತ ನೀಡಿ ಗೌರವಿಸಿದ್ದಾರೆ. ಅವರ ಗೌರವಕ್ಕೆ ನಾನು ಸದಾ ಋಣಿಯಾಗಿರುವೆ ಎಂದರು.

ಹಾಲಿ ಕೇಂದ್ರ ಮಂತ್ರಿ ಭಗವಂತ ಖೂಬಾ ಅವರು ಕೇವಲ ಒಂದು ದಿವಸ ಬಂದು ಮುಖ ತೋರಿಸಿ ಹೋಗಿದ್ದಾರೆ. ಅವರ ಚುನಾವಣೆಯಲ್ಲಿ ನಿರಂತರ ಶಕ್ತಿ ಮೀರಿ ನಿಷ್ಟೆಯಿಂದ ಸೇವೆ ಮಾಡಿದ್ದೇನೆ. ಅವರು ಸಹ ನನ್ನ ಪರವಾಗಿ ಹೆಚ್ಚೆಚ್ಚು ಕೆಲಸ ಮಾಡಬೇಕಿತ್ತು ಎಂದು ನಿರಾಶದ ಧ್ವನಿಯಲ್ಲಿ ಮಾತನಾಡಿರುವ ಠಾಕೂರ್ ಪಕ್ಷಕ್ಕಾಗಿ 35 ವರ್ಷ ನಿಷ್ಟೆಯಿಂದ ಕೆಲಸ ಮಾಡಿದ್ದೇನೆ. ಪಕ್ಷದ ಕೆಲಸಕ್ಕಾಗಿ ಹಾಗೂ ಹಿಂದುತ್ವದ ಹೋರಾಟದಲ್ಲಿ ಎದೆಯ ಮೇಲೆ ಪೋಲಿಸರ ಲಠಿ ಏಟು ತಿಂದಿದ್ದು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಾನು ಸಹ ಆಕಾಂಕ್ಷಿಯಾಗಿದ್ದೇನೆ ಎಂದರು. ಡಾ.ವಿಶ್ವನಾಥ ಉಪ್ಪೆ, ಮಹೇಶ್ವರ ಸ್ವಾಮಿ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.