ಪಕ್ಷ ಅಧಿಕಾರಕ್ಕೆ ಬರಬೇಕೆಂದರೆ ಸಂಘಟನೆ ಮುಖ್ಯ:ಸಂತೋಷ್ ಲಾಡ್

ಬಳ್ಳಾರಿ ನ 17 : ಯಾವುದೇ ಪಕ್ಷ ಅಧಿಕಾರಕ್ಕೆ ಬರಬೇಕೆಂದರೆ ಪಕ್ಷ ಸಂಘಟನೆ ಮುಖ್ಯ, ಪಕ್ಷದ ಕಾರ್ಯಕರ್ತರು ಮತದಾರರಿಗೆ ಪಕ್ಷದ ನಿಲುವು, ಅಬಿವೃದ್ದಿ, ಸಹಕಾರದ ಬಗ್ಗೆ ತಿಳಿಸಿದಾಗಲೇ ಮತದಾರ ಪಕ್ಷದ ಪರವಾಗಿ ಮತಚಲಾಯಿಸಬಲ್ಲ. ಅದಕ್ಕಾಗಿ ಸಂಘಟನೆ ಮುಖ್ಯವಾದುದು ಎಂದು ಮಾಜಿ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ನಿನ್ನೆ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಿ.ಎಸ್. ಮಹಮ್ಮದ್ ರಫೀಕ್ ಮತ್ತು ರೂಪನಗುಡಿಮತ್ತು ಮೋಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಸುಂಡಿ ನಾಗರಾಜ್ ಗೌಡ, ಸಮಿತಿಗೆ ನೂತನವಾಗಿ ನೇಮಕಗೊಂಡಿರುವ ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಮತ್ತು ಕಾರ್ಯಕಾರಿಣಿ ಸದಸ್ಯರುಗಳು ಸಂತೋಷ್ ಲಾಡ್ ಮತ್ತು ಸಂಡೂರಿನ ಶಾಸಕ ತುಕಾರಾಂ ಅವರನ್ನು ಭೇಟಿ ಮಾಡಿ
ಪಕ್ಷದ ಬೆಳವಣಿಗೆ ಮತ್ತು ಪಕ್ಷದ ಕಾರ್ಯ ವೈಖರಿಯ ಬಗ್ಗೆ ವಿವರಣೆಯನ್ನು ನೀಡಿ ಅವರಿಂದ ಸಲಹೆಗಳನ್ನು ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂತೋಷ್ ಲಾಡ್ ಬರುವ ದಿನಗಳಲ್ಲಿ ಪಕ್ಷವನ್ನು ಬಲಿಷ್ಠವಾಗಿ ಮಾಡುವುದು ಮತ್ತು ಎಲ್ಲಾ ಕಾಂಗ್ರೆಸ್ ಪಕ್ಷದ ಹಿರಿ ಮತ್ತು ಕಿರಿಯರ ಸಲಹೆ ್ತ ಸಹಕಾರಗಳನ್ನು ಪಡೆದು ಪಕ್ಷ ನಿಷ್ಠರಾಗಿ ಪಕ್ಷದ ಬೆಳವಣಿಗೆಯಲ್ಲಿ ತಮ್ಮ ತಮ್ಮ ಪಾತ್ರಗಳನ್ನು ಮಾಡಬೇಕೆಂದು ಸಲಹೆ ನೀಡಿದರು.