ಪಕ್ಷೇತರ ಅಭ್ಯರ್ಥಿ ಮುಜೀದ್ದೀನ್ ಮತಯಾಚನೆ

ರಾಯಚೂರು,ಏ.೨೮- ವಿಧಾನಸಭಾ ಚುನಾವಣೆ ಪ್ರಚಾರ ನಗರದಲ್ಲಿ ವಾರ್ಡ್ ನಂಬರ್ ೨೪,೨೫ರಲ್ಲಿ ಪಕ್ಷೇತರ ಅಭ್ಯರ್ಥಿ ಮುಜೀದ್ದೀನ್ ಅವರು ಮತಯಾಚನೆ ಮಾಡಿದರು.
ಇಂದು ನಗರದ ವಾರ್ಡ್ ೨೪ರ ಮಹಾಲಕ್ಷ್ಮಿ ದೇವಸ್ಥಾನಕ್ಕೆ ರವೀಂದ್ರ ರೆಡ್ಡಿ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ನಂತರ ಪ್ರಚಾರ ಆರಂಭಿಸಿದರು. ಡೊಳ್ಳಿನ ಮೆರವಣಿಗೆ ಮೂಲಕ ಮನೆ ಮನೆಗೆ ಭೇಟಿ ನೀಡಿದ ಮುಜೀಬುದ್ದಿನ್ ಅವರು, ಸಿಲೆಂಡರ್ ಗುರುತಿಗೆ ಮತ ನೀಡುವಂತೆ ಮನವಿ ಮಾಡಿದರು.
ನೂರಾರು ನಿವಾಸಿಗಳು ಮುಜೀಬುದ್ದಿನ್ ರ ಪಕ್ಷೇತರ ಚಿಹ್ನೆಗೆ ಬೆಂಬಲಿಸುವುದಾಗಿ ಘೋಷಣೆ ಮಾಡಿದರು. ನಂತರ ವಾರ್ಡ್ ೨೫ರಲ್ಲಿ ಪ್ರಚಾರ ಮಾಡುವ ಮುಂಚೆ ಸಿಟಿ ಟಾಕೀಸ್ ವೃತ್ತದಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ನೂರಾರು ಯುವಕರು ಪ್ರಚಾರದಲ್ಲಿ ಭಾಗವಹಿಸಿದ್ದರು.