ಪಕ್ಷೇತರ ಅಭ್ಯರ್ಥಿಯಾಗಿ ಮೌನಿಬಾಬಾ ನಾಮಪತ್ರ ಸಲ್ಲಿಕೆ

ಬಸವಕಲ್ಯಾಣ:ಮಾ.24: ಈ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಮೊದಲ ದಿನ ಮಂಗಳವಾರ ಒಂದು ನಾಮಪತ್ರ ಸಲ್ಲಿಕೆಯಾಗಿದೆ. ಬೆಂಗಳೂರಿನವರಾದ ಪರಿಸರವಾದಿ ಅಂಬ್ರೋಸ್ ಡಿ ಮೆಲ್ಲೋ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾಧಿಕಾರಿ ಭುವನೇಶ ಪಾಟೀಲ ಅವರಿಗೆ ನಾಮಪತ್ರ ಸಲ್ಲಿಸಿದರು.

ಅಂಬ್ರೋಸ್ ಡಿ ಮೆಲ್ಲೋ ಅವರ ಬಳಿ ಅಲ್ಪ ಪ್ರಮಾಣದ ನಗದು ಬಿಟ್ಟರೆ ಬೇರೆ ಆಸ್ತಿ ಇಲ್ಲ. ಮೌನವ್ರತ ಪಾಲಿಸುತ್ತಿದ್ದು, ತಮ್ಮ ವಿಚಾರಗಳನ್ನು ಸ್ಲೇಟಿನಲ್ಲಿ ಬರೆದು ತಿಳಿಸುತ್ತಾರೆ. ಆದ್ದರಿಂದ ಇವರನ್ನು ‘ಮೌನಿ ಬಾಬಾ’ ಎಂದೇ ಗುರುತಿಸಲಾಗುತ್ತದೆ.