ಪಕ್ಷೇತರರಾಗಿ ಚುನಾವಣಾ ಕಣಕ್ಕೆ

ಕೋಲಾರ,ಏ,೫- ಕೋಲಾರ ವಿಧಾನ ಸಭಾ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಪ್ರಗತಿಪರ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ದಲಿತ ಸಂಘಟನೆಗಳ ಬೆಂಬಲದೊಂದಿಗೆ ಅಭ್ಯರ್ಥಿಯನ್ನು ಚುನಾವಣ ಕಣಕ್ಕೆ ಇಳಿಸುವ ಬಗ್ಗೆ ಚಿಂತಿಸಲಾಗುತ್ತಿದ್ದು ಶೀಘ್ರದಲ್ಲಿ ಒಕ್ಕೂಟದ ನಿರ್ಧಾರವನ್ನು ಪ್ರಕಟಿಸಲಾಗುವುದು ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಜಿ.ವೆಂಕಟಚಲಪತಿ ತಿಳಿಸಿದರು,
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ನಮ್ಮ ಕೋಲಾರ ಕ್ಷೇತ್ರದಲ್ಲಿ ಸುಮಾರು ೨.೩೫,೬೨೫ ಮತದಾರರು ಇದ್ದಾರೆ. ಈ ಪೈಕಿ ಸುಮಾರು ೮೦ ಸಾವಿರಕ್ಕೂ ಅಧಿಕ ದಲಿತ ಸಮುದಾಯದ ಮತದಾರರಿದ್ದಾರೆ.ಅದರೆ ರಾಜಕೀಯ ಪಕ್ಷಗಳು ೭೦ ಸಾವಿರ ಮತದಾರರು ತಮ್ಮ ಕಡೆ ಇದ್ದಾರೆ ಎಂದು ಬಹಿರಂಗ ಸಭೆಗಳಲ್ಲಿ ಪ್ರಚಾರ ಮಾಡುತ್ತಿರುವುದು ಹಾಸ್ಯಸ್ಪದವಾಗಿದೆ ಎಂದರು.
ಕೋಲಾರ ಜಿಲ್ಲೆಯು ಹೋರಾಟಗಳ ತವರು ಎಂಬ ಖ್ಯಾತಿ ಪಡೆದಿದೆ. ಕೋಲಾರದಿಂದಲೇ ದಲಿತರ ಧ್ವನಿಯು ದೆಹಲಿವರೆಗೆ ಮುಟ್ಟಿದ ಪ್ರಕರಣಗಳು ನಡೆದಿದೆ ಈ ಜಿಲ್ಲೆಯಲ್ಲಿ ಅತಿ ಹೆಚ್ಚು ದಲಿತ ಸಂಘಟನೆಗಳನ್ನು ಹೊಂದಿದೆ. ಯಾರೋ ಕೆಲವು ಬೆರಳೆಕೆ ಮುಖಂಡರು ವಿವಿಧ ಪಕ್ಷಗಳಲ್ಲಿ ಗುರುತಿಸಿ ಕೊಂಡಿರ ಬಹುದು ಹೊರತಾಗಿ ದಲಿತ ಮತದಾರರು ಯಾವ ಪಕ್ಷಕ್ಕೆ ಅಗಲಿ, ಯಾವ ಮುಖಂಡರಿಗೆ ಅಗಲಿ ತಲೆ ಮಾರಿ ಕೊಂಡವರಲ್ಲ ಎಂದು ಕಿಡಿ ಕಾರಿದರು,
ರಾಜ್ಯದ ೨೨೪ ವಿಧಾನ ಸಭಾ ಕ್ಷೇತ್ರದಲ್ಲಿ ಒಕ್ಕೂಟವು ದಲಿತ ಸಂಘಟನೆಗಳ ಬೆಂಬಲದೊಂದಿಗೆ ಚುನಾವಣಾ ಕಣಕ್ಕೆ ಪಕ್ಷೇತರರಾಗಿ ಅಭ್ಯರ್ಥಿಗಳನ್ನು ಇಳಿಸಲು ಸಂಘಟನೆಯು ಸಿದ್ದವಾಗಿದೆ ಹೊರತಾಗಿ ಯಾವೂದೇ ಪಕ್ಷದೊಂದಿಗೆ ಕೈ ಜೋಡಿಸುವುದಿಲ್ಲ. ನಮ್ಮ ಬಳಿ ಹಣ ಇಲ್ಲ ಅದರೆ ಜನ ಇದ್ದಾರೆ ಎಂದ ಅವರು ಇದಕ್ಕೆ ಸಂಬಂದ ಪಟ್ಟಂತೆ ಮೂರು ದಿನಗಳಲ್ಲಿ ಎಲ್ಲಾ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಚರ್ಚಿಸಿ ಅಭ್ಯರ್ಥಿಯನ್ನು ಘೋಷಿಸುತ್ತೇವೆ ಎಂದರು.
ನಮ್ಮ ಧ್ಯೇಯ ರಾಜ್ಯದಲ್ಲಿ ದಲಿತ ಮುಖ್ಯ ಮಂತ್ರಿಯನ್ನು ಮಾಡುವುದಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷಗಳೇ ಕಳೆದರೂ ಸಹ ನಮ್ಮ ರಾಜ್ಯದಲ್ಲಿ ಈವರೆಗೆ ದಲಿತ ಮುಖ್ಯ ಮಂತ್ರಿ ಮಾಡದಿರುವುದು ರ್ದುದೈವ ಸಂಗತಿಯಾಗಿದೆ ಎಂದು ವಿಷಾಧಿಸಿದರು,
ಸುಮಾರು ವರ್ಷಗಳಿಂದ ರಾಜಕೀಯ ಪಕ್ಷಗಳಲ್ಲಿ ಮೀಸಲಾತಿಯಿಂದ ಚುನಾವಣೆಯಲ್ಲಿ ಗೆದ್ದಂತಹ ಎಸ್.ಸಿ. ೩೬ ಹಾಗೂ ೧೬ ಎಸ್.ಟಿ. ಶಾಸಕರುಗಳು ಇದ್ದು, ಆಯಾಯ ಪಕ್ಷಗಳ ಗುಲಾಮರಾಗಿ ವರ್ತಿಸುತ್ತಿದ್ದಾರೆ. ಶೋಷಿತ ಸಮಾಜದ ಅಭಿವೃದ್ದಿ ಬಗ್ಗೆ ಕಾಳಜಿ ಇಲ್ಲದೆ ಇರುವುದು ಸಹ ದಲಿತ ಸಂಘಟನೆಗಳ ವತಿಯಿಂದ ಅಭ್ಯರ್ಥಿಗಳನ್ನು ಇಳಿಸಲು ಇದೇ ಕಾರಣವಾಗಿದೆ. ಹಾಗೂ ಕೋಲಾರವನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿ ಕೊಂಡಿದೆ ಎಂದು ವಿವರಿಸಿದರು.