‘ಪಕ್ಷಿ ಸಂಕುಲನ ಉಳಿಸಿ’ ಸಂಕಲ್ಪ ಅಭಿಯಾನ ಪಕ್ಷಿಗಳಿಗೆ ಆಹಾರ-ನೀರು ಪೂರೈಕೆ ಮುಂದಾದ ಕಾಯ್‍ನಾಥ್ ಟ್ರಸ್ಟ್

ಹೊಸಪೇಟೆ, ಮಾ.28: ಬೇಸಿಗೆ ದಿನಗಳಲ್ಲಿ ಪಕ್ಷಿ ಸಂಕುಲಗಳಿಗೆ ಆಹಾರ-ನೀರಿನ ಬವಣೆ ತಪ್ಪಿಸುವ ಸಂಕಲ್ಪ ಗೈದಿರುವ ಸ್ಥಳೀಯ ಕಾಯ್‍ನಾಥ್ ಟ್ರಸ್ಟ್, ನಗರದ ನಾನಾ ಪ್ರದೇಶಗಳ ಮರ-ಗಿಡಗಳಲ್ಲಿ ಆಹಾರ-ನೀರಿನ ವ್ಯವಸ್ಥೆ ಮಾಡುವ ಮೂಲಕ ಪಕ್ಷಿಪ್ರೇಮ ಮೆರೆದು ಪಕ್ಷಿ ಸಂಕುಲನ ಉಳಿಸಿ ಅಭಿಯಾನವನ್ನು ಆರಂಭಿಸಿದೆ.
ನಗರದ ವಿವಿಧ ಸರ್ಕಾರಿ ಕಚೇರಿ, ಶಾಲಾ-ಕಾಲೇಜ್, ರುದ್ರಭೂಮಿ, ಉದ್ಯಾನವನಗಳ ಮರ-ಗಿಡಗಳಲ್ಲಿ ಕಾಣಸಿಗುವ ಪಕ್ಷಿಗಳಿಗೆ ನೀರು-ಆಹಾರ ಒದಗಿಸಲು ಮುಂದಾಗಿದೆ.
ಆಹಾರ-ನೀರು ಸಂಗ್ರಹಿಸಿದ ಚಿಕ್ಕದಾದ ತೊಟ್ಟಿಗಳನ್ನು ನಗರದ ವಿವಿಧ ಭಾಗದ ಗಿಡ-ಮರಗಳಲ್ಲಿ ನೇತಾಕುವ ಮೂಲಕ ಅವುಗಳ ಹಸಿವು-ಬಾಯಾರಿಕೆಯನ್ನು ನೀಗಿಸುವಂತ ಕಾಯಕ ಮಾಡುತ್ತಿದ್ದಾರೆ.
ಅಭಿಯಾನಕ್ಕೆ ಬಿಜೆಪಿ ಯುವ ಮುಖಂಡ ಸಂದೀಪ್ ಸಿಂಗ್ ಚಾಲನೆ ನೀಡಿದರು. ಬೇಸಿಲಿನ ತಾಪಕ್ಕೆ ಜನ-ಜಾನುವಾರುಗಳು ಪರದಾಡುವಂತಾಗಿದೆ. ಅದರಲ್ಲಿ ಪ್ರಾಣಿ-ಪಕ್ಷಿಗಳು ಆಹಾರ-ನೀರಿಗಾಗಿ ಪರಿತಪಿಸುತ್ತಿವೆ. ಸಾರ್ವಜನಿಕರು, ತಮ್ಮ ಮನೆ, ಮನೆಂಗಳ, ಗಿಡ-ಮರಗಳಲ್ಲಿ ಪಕ್ಷಿಗಳಿಗೆ ಕಾಳು-ನೀರನ್ನು ಒದಗಿಸುವ ಮೂಲಕ ಪ್ರಾಣಿ ಪ್ರೀತಿ ತೋರಬೇಕಿದೆ. ಪ್ರಾಣಿ-ಪಕ್ಷಿಗಳು ಪ್ರಕೃತಿಯ ಒಂದು ಭಾಗವಾಗಿದೆ. ಪ್ರತಿಯೊಬ್ಬರು, ಪ್ರಾಣಿ-ಪಕ್ಷಿ ಸಂಕುಲ ಉಳಿವಿಗಾಗಿ ಸಂಕಲ್ಪ ಮಾಡಬೇಕು. ಇತಂಹ ಸಮಾಜ ಮುಖಿ ಕಾರ್ಯಗಳಲ್ಲಿ ಕೈಜೋಡಿಸಬೇಕು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಡಾ.ಮೆಹಬೂಬ್ ಬೀ, ಮುಖಂಡರಾದ ಹೆಚ್.ಕೆ.ಮಂಜನಾಥ್, ವಿಜಯೇಂದ್ರ, ಪ್ರಕಾಶ್, ಎನ್.ವೆಂಕಟೇಶ್ ಹಾಗೂ ಕಾಯ್‍ನಾಥ್ ಟ್ರಸ್ಟ್‍ನ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.