ಪಕ್ಷಿ ಪ್ರಾಣಿಗಳಿಗ ಕುಡಿಯುವ ನೀರಿನ ವ್ಯವಸ್ಥೆ

ಗಂಗಾವತಿ ಮೇ 03 : ಕುಂಟೋಜಿ ಕಾದಿಟ್ಟ ಅರಣ್ಯ(ಡಗ್ಗಿ) ಪ್ರದೇಶದಲ್ಲಿರುವ ಪಕ್ಷಿ ಪ್ರಾಣಿಗಳ ಕುಡಿಯುವ ನೀರಿನ ದಾಹ ನೀಗಿಸಲು ಶ್ರೀರಾಮನಗರದ ಕ್ಲಿನಿಕ್ ಆ್ಯಂಡ್ ಗ್ರೀನ್ ಪೋರ್ಸ್ ನ ಸದಸ್ಯರು ಕೃತಕ ನೀರಿನ ತೊಟ್ಟಿಗಳನ್ನಿಟ್ಟು ,ಟ್ಯಾಂಕರ್ ಮೂಲಕ ನೀರು ತುಂಬಿಸಿ ವನ್ಯಜೀವಿಗಳಿಗೆ ನೆರವಾಗುತ್ತಿದ್ದಾರೆ. ಈ ಕಾರ್ಯಕ್ಕೆ ಪರಿಸರ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವೇಳೆ ಡಿ ವೈ ಆರ್ ಎಫ್ಒ ವೀರೇಶ, ಸುಮಂಗಲಾ, ರಫೀ ಸಿದ್ದಾಪುರ, ಬಸನಗೌಡ, ಗ್ರಾ.ಪಂ ಸದಸ್ಯರಾಸ ರಮೇಶ, ರಾಜಸಾಬ್ ಹಾಗೂ ಗಂಗಾಧರ ಇದ್ದರು.