ಪಕ್ಷಿಗಳ ಬಾಯಾರಿಕೆ ನೀಗಿಸಲು ಕರೆ

ಹುಬ್ಬಳ್ಳಿ,ಏ9: ಭಾರತೀಯ ಜನತಾ ಪಕ್ಷ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ “ಙouಣh ಈoಡಿ ಃiಡಿಜs” ವಿಶಿಷ್ಟ ಹಾಗೂ ವಿನೂತನ ಕಾರ್ಯಕ್ರಮವನ್ನು ಹು-ಧಾ ಪೂರ್ವ ಯುವ ಮೋರ್ಚಾ ಉಪಾಧ್ಯಕ್ಷ ಪ್ರವೀಣ ಕುಬಸದ ಇವರ ನೇತೃತ್ವ ಹಾಗೂ ಹು-ಧಾ ಪೂರ್ವ ಮಂಡಲದ ಅಧ್ಯಕ್ಷ ಪ್ರಭು ನವಲಗುಂದಮಠ ಅಧ್ಯಕ್ಷತೆದಲ್ಲಿ ಶ್ರೀ ಕರ್ಕಿ ಬಸವೇಶ್ವರ ನಗರದ ಮನೆ ಮನೆಗಳಿಗೆ ತೆರಳಿ ಪಕ್ಷಿಗಳಿಗೆ ಬೇಸಿಗೆ ಕಾಲದಲ್ಲಿ ನೀರು ಹಾಗೂ ಊಟ ಸಿಗುವುದು ಕಷ್ಟವಾಗಿರುವುದರಿಂದ ಪ್ಲಾಸ್ಟಿಕ್ ಟ್ರೆ ಹಾಗೂ ದವಸ ಧಾನ್ಯಗಳನ್ನು ವಿತರಿಸಲಾಯಿತು.
ಈ ವೇಳೆಯಲ್ಲಿ ರಾಜ್ಯ ಶಿಸ್ತು ಸಮೀತಿಯ ಅಧ್ಯಕ್ಷರು ಹಾಗೂ ವಿಭಾಗ ಪ್ರಭಾರಿಗಳಾದ ಲಿಂಗರಾಜ ಪಾಟೀಲ ರವರು ಮಾತನಾಡಿ ಬಿಸಿಲ ಧಗೆಗೆ ಕುಡಿಯಲು ನೀರು ಸಿಗದೆ ಪ್ರಾಣಿ ಪಕ್ಷಿಗಳು ಪರದಾಡುತ್ತಿವೆ. ಮಹಾನಗರಗಳಲ್ಲಿ ಬೇಸಿಗೆಯ ಬಿಸಿಲಿನ ತಾಪಕ್ಕೆ , ನೀರಿನ ದಾಹಕ್ಕೆ ಮೂಕ ಪ್ರಾಣಿ, ಪಕ್ಷಿಗಳು ಬಲಿಯಾಗುತ್ತಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ “ಙouಣh ಈoಡಿ ಃiಡಿಜs” ವಿಶಿಷ್ಟ ಹಾಗೂ ವಿನೂತನ ಕಾರ್ಯಕ್ರಮವನ್ನು ತಮ್ಮದೇ ರೀತಿಯಲ್ಲಿ ಮಾಡಲು ಮುಂದಾಗಿದ್ದಾರೆ. ಮನೆ ಮನೆಗಳಿಗೆ ತೆರಳಿ, ರಸ್ತೆ ಬದಿಗಳಲ್ಲಿ ನೀರು, ಆಹಾರವನ್ನು ಪೂರೈಕೆ ಮಾಡುತ್ತಿದ್ದಾರೆ. ಇದನ್ನು ಪ್ರತಿಯೊಬ್ಬರೂ ಅರಿತು ಬೇಸಿಗೆಯಲ್ಲಿ ಪಕ್ಷಿಗಳ ಬಾಯಾರಿಕೆಯನ್ನು ನೀಗಿಸಿ ನಮ್ಮಂತೆ ಪ್ರಾಣಿ, ಪಕ್ಷಿಗಳಿಗೂ ಬದುಕುವ ಹಕ್ಕಇದೆ. ಇದನ್ನರಿತು ನಾವು ಕೆಲಸ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಬಾಲವಿಕಸ ಅಕಡೆಮಿ ಅಧ್ಯಕ್ಷ ಈರಣ್ಣ ಜಡಿ, ಹು-ಧಾ ಮಹಾನಗರ ಜಿಲ್ಲಾ ಪ್ರಧಾನ ಕರ್ಯದರ್ಶಿ ತಿಪ್ಪಣ್ಣ ಮಜ್ಜಗಿ, ಹುಡಾ ಸದಸ್ಯ ಚಂದ್ರಶೇಖರ ಗೋಕಾಕ, ಹು-ಧಾ ಪೂರ್ವ ಮಂಡಲ ಪ್ರಧಾನ ಕರ್ಯದರ್ಶಿಗಳಾದ ಜಗದೀಶ ಬುಳ್ಳಾನವರ, ವಿನಯ ಸಜ್ಜನರ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕಿರಣ ಉಪ್ಪಾರ, ಪ್ರೀತಮ ಅರಕೇರಿ, ಅನೂಪ ಬೀಜವಾಡ, ಅಣ್ಣಪ್ಪ ಗೋಕಾಕ, ಮಂಜುನಾಥ ಬೀಜವಾಡ ,ಪ್ರತಿಭಾ ಪವಾರ, ನಾಗರತ್ನ ಬಳ್ಳಾರಿ, ಜಯಶ್ರೀ ಹಿರೇಮಠ, ಪ್ರೀತಿ ಲಕಾಜಿನವರ, ಬಸಪ್ಪ ಮಾದರ, ಗುರು ರೋಣದ, ಹರೀಶ ಹಳ್ಳಿಕೇರಿ, ಶಿವು ಕೋಟಬಾಳ, ಜಗದೀಶ ಕಂಬ್ಳಿ, ವಿಶ್ವನಾಥ ಚಬ್ಬಿ, ಹರೀಶ ಸರ್ವಳೆ, ವಿನಾಯಕ ಭುಜಂಗ, ಗೋಪಾಲ ಕಲ್ಲುರ, ಸಚಿನ ಮದರಿ ಹಾಗೂ ಪಧಾಧಿಕಾರಿಗಳು ಯುವಮಿತ್ರರು ಉಪಸ್ಥಿತರಿದ್ದರು.