ಪಕ್ಷಿಗಳ ಬಾಯಾರಿಕೆ ತೀರಿಸಲು ಎಪ್ರಿಲ್ ಪೂಲ್ ಬದಲಿಗೆ ಎಪ್ರಿಲ್ ಕೂಲ್ ಆಚರಣೆ

ರಾಯಚೂರು,ಮಾ.೦೧- ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಎಪ್ರಿಲ್ ಪೂಲ್ ಬದಲಿಗೆ ಏಪ್ರಿಲ್ ಕೂಲ್ ಆಚರಣೆ ಮೂಲಕ ಪಕ್ಷಿಗಳಿಗೆ ನೀರಿನ ಅರವಟ್ಟಿಗೆ ಉದ್ಘಾಟನೆ ಕಾರ್ಯಕ್ರಮವನ್ನು ಸಿಂಧನೂರಿನ ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆ ಡಿಎಲ್‌ಇಡಿ ಕಾಲೇಜು ಪಿಡಬ್ಲ್ಯೂಡಿ ಕ್ಯಾಂಪ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವನಸಿರಿ ಫೌಂಡೇಶನ್ ರಾಜ್ಯ ಕಾರ್ಯದರ್ಶಿ ಶರಣೇಗೌಡ ಹೆಡಗಿನಾಳ ಅವರು ವನಸಿರಿ ಕಾರ್ಯಾಲಯದಲ್ಲಿ ತಿಳಿಸಿದರು.
ಬೆಳಿಗ್ಗೆ ೦೯-೩೦ ಕ್ಕೆ ಸಿಂಧನೂರಿನ ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆ ಡಿಎಲ್‌ಇಡಿ ಕಾಲೇಜಿನ ಆವರಣದಲ್ಲಿ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರ ನೇತೃತ್ವದಲ್ಲಿ ನಡೆಯಲಿದೆ.ಮತ್ತು ಬೆಳಗ್ಗೆ೧೦:೩೦ ಕ್ಕೆ ನಡೆದಾಡುವ ದೇವರು ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ೧೧೬ ಜಯಂತಿ ಹಾಗೂ ಅನ್ನ ದಾಸೋಹ ಕಾರ್ಯಕ್ರಮವನ್ನು ಮರು ಜೀವ ಪಡೆದ ಆಲದ ಮರದ ಹತ್ತಿರ ವಿಶೇಷ ಪೂಜೆ ಕಾರ್ಯಕ್ರಮ ಹಾಗೂ ಅನ್ನ ದಾಸೋಹವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಜಿಲ್ಲೆಯ ವಿವಿಧ ಪರಮ ಪೂಜ್ಯರು,ಹಾಗೂ ಜಿಲ್ಲೆಯ ವಿವಿಧ ಗಣ್ಣರು ಹಾಗೂ ಜಿಲ್ಲೆಯ ಪರಿಸರ ಪ್ರೇಮಿಗಳು ಆಗಮಿಸಲಿದ್ದಾರೆ. ತಾಲೂಕಿನ ಪರಿಸರ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿ ಗೊಳಿಸಬೇಕೆಂದು ವನಸಿರಿ ಫೌಂಡೇಶನ್ ರಾಜ್ಯ ಕಾರ್ಯದರ್ಶಿ ಶರಣೇಗೌಡ ಹೆಡಗಿನಾಳ ಮನವಿ ಮಾಡಿದರು.