ಪಕ್ಷಿಗಳ ದಾಹ ನೀಗಿಸುವ ಕಾರ್ಯ ಶ್ಲಾಘನೀಯ

ಹುಬ್ಬಳ್ಳಿ, ಏ27: ಬೇಸಿಗೆ ಬಂದರೆ ನೀರಿಗಾಗಿ ಹಾಹಾಕಾರ ಅನುಭವಿಸುತ್ತಿರುವ ಪ್ರಾಣಿ ಪಕ್ಷಿಗಳಿಗೆ ತಮ್ಮ ಎಲ್ಲ ಕೆಲಸ ತೊರೆದು ನೀರು ಒದಗಿಸುವ ರಚನಾತ್ಮಕ ಕೆಲಸ ಮಾಡುತ್ತಿರುವ ಹುಬ್ಬಳ್ಳಿಯ ದಕ್ಷಿಣ ರೋಟರಿ ಕ್ಲಬ್ ಕಾರ್ಯ ಶ್ಲಾಘನೀಯವಾಗಿದೆ ಎಂದು ಜನಾಂದೋಲನ ಟ್ರಸ್ಟ್ ಅಧ್ಯಕ್ಷ ಲೋಚನೇಶ ಹೂಗಾರ ಹೇಳಿದರು.
ಅವರು ನಗರದ ಶಿಂಧೆ ಕಾಂಪ್ಲೆಕ್ಸ್‍ನಲ್ಲಿ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೌತ್ ಹಾಗೂ ಜನಾಂದೋಲನ ಟ್ರಸ್ಟ್ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷಿಗಳಿಗೆ ನೀರಿಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ಲಬ್‍ನ ಅಧ್ಯಕ್ಷ ಮಂಜುನಾಥ ಹೊಂಬಳ ಮಾತನಾಡಿ, ಪಕ್ಷಿಗಳಿಗೆ ಆಹಾರ ಮತ್ತು ನೀರು ಒದಗಿಸುವ ಕಾರ್ಯವನ್ನು ತಮ್ಮ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದು, ಎಲ್ಲರೂ ಮನೆ, ಕಂಪೌಡ್, ಗಿಡ ಮರ ಮತ್ತು ಉದ್ಯಾನಗಳಲ್ಲಿ ಟ್ರೇಗಳನ್ನಿಟ್ಟು ನೀರು ಹಾಕಿ ಪಕ್ಷಿಗಳ ದಾಹ ನೀಗಿಸುವ ಕೆಲಸ ಮಾಡಬೇಕೆಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ಗಣಪತಿ ಗಂಗೊಳ್ಳಿ, ರೋಟರಿ ಕ್ಲಬ್ ಪದಾಧಿಕಾರಿಗಳಾದ ಅಶೋಕ ದಾನಿ, ಶಂಕರ ಮೋಹಿತೆ, ರಮೇಶ ಓಸ್ತವಾಲ್ , ನಾಗರಾಜ ಹಾವನೂರ, ರಘುನಾಥ ಪೈ, ಮನೋಜ ಗೂಗ್ಲಿಯಾ, ಜ್ಯೋತಿ ನಾಯ್ಕ್, ತನಿಷ್ಕ ಹೊಂಬಳ, ಪತ್ರಕರ್ತ ಪ್ರಸನ್ನಕುಮಾರ ಹಿರೇಮಠ ಅನೇಕರಿದ್ದರು.