ಪಕ್ಷಿಗಳ ದಾಹ ನೀಗಿಸಲು ಮುಂದಾದ ಯುವಕರ ತಂಡ

ರಾಯಚೂರು:ಮೇ.೩೦-ಕೊರೋನಾ ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚುವುದರ ಮಧ್ಯೆಯ ಇಲ್ಲೊಂದು ಹಳ್ಳಿಯ ಹುಡುಗರ ತಂಡ ಪಕ್ಷಗಳ ಹಾರೈಕೆಗೆ ಮುಂದಾಗಿದ್ದಾರೆ.
ತಾಲೂಕಿನ ಮರ್ಚಟಹಾಳ್ ಗ್ರಾಮದ ಭೀಮರಾಯ, ಹನುಮೇಶ್, ಈರೆಡ್ಡಿ, ಬಸವರಾಜ್, ಯಲ್ಲಾಲಿಂಗ, ಉದಯ್, ವೀರೇಶ, ಖಾಸಿಂ, ವೀರೇಂದ್ರ ಎಂಬ ಯುವಕರು ಸುಮಾರು ಮೂವತ್ತಕ್ಕೂ ಹೆಚ್ಚು ಗಿಡಗಳಿಗೆ ನೀರಿನ ಬಾಟಗಳನ್ನು ಕಟ್ಟಿ ಅದರೊಳಗೆ ನೀರು ಹಾಕುವ ಮೂಲಕ ಪಕ್ಷಿಗಳ ದಾಹ ನೀಗಿಸಲು ಮುಂದಾಗಿದ್ದು,
ಅಷ್ಟೇ ಅಲ್ಲದೇ ಹಳ್ಳಗಳ ದಡ ಹಾಗೂ ಜಾಸ್ತಿ ಕಾಡು ತರ ಇರುವ ಸ್ಥಳಗಳಲ್ಲಿ ಅಕ್ಕಿ ಜೋಳ ಇಡುವ ಮೂಲಕ ಚಿಕ್ಕ ಚಿಕ್ಕ ಪ್ರಾಣಿ ಪಕ್ಷಿಗಳ ಆಹಾರ ಒದಗಿಸುತ್ತಿದ್ದಾರೆ…
ಗ್ರಾಮದ ಯುವಕ ಭೀಮರಾಯ ಮಾತನಾಡಿ, ಗ್ರಾಮದ ಬಹಳಷ್ಟು ಗಿಡಗಳಿಗೆ ನೀರಿನ ಬಾಟಲ್ ಕಟ್ಟಿ, ಎರಡು ಮೂರು ದಿನಕ್ಕೊಮ್ಮೆ ನೀರು ಹಾಕಲಾಗುತ್ತದೆ. ಪ್ರತಿಯೊಬ್ಬರು ಪ್ರಾಣಿ ಪಕ್ಷಿಗಳ ರಕ್ಷಣೆಗೆ ಮುಂದಾಗುವಂತೆ ತಿಳಿಸಿದರು.
ಯುವಕ ಹನುಮೇಶ್ ಮಾತನಾಡಿ ಹತ್ತು ಜನರ ಒಳಗೊಂಡ ಯುವಕರ ತಂಡ ಕಟ್ಟಿಕೊಂಡು ಇಂದು ಬೆಳಿಗ್ಗೆಯಿಂದ ಹಳ್ಳದ ದಡಗಳಲ್ಲಿ ಹಾಗೂ ಮರಗಳಿಗೆ ನೀರಿನ ಬಾಟಲ್ ಮತ್ತು ಒಂದು ಕೆಜಿ ಅಕ್ಕಿ ಹಾಗೂ ಜೋಳವನ್ನು ಹಾಕಿದ್ದೇವೆ ಎಂದರು.
ಯುವಕರು ಈ ಕಾರ್ಯಕ್ಕೆ ಊರಿನಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.