ಪಕ್ಷಿಗಳಿಗೆ ನೀರಿನ ಅರವಟ್ಟಿಗೆ

ಕಲಬುರಗಿ,ಮಾ.14-ರಾಹುಲ್ ಕಟ್ಟಿ ನೇತೃತ್ವದ “ನಮ್ಮ ಬಳಗ”ವು ಪ್ರತಿ ವರ್ಷದಂತೆ ಈ ವರ್ಷವು ಸಹ ಪಕ್ಷಿಗಳಿಗೆ ನೀರಿನ ಅರವಟ್ಟಿಗೆಯ ನಿರ್ಮಿಸಿ ಬೆಸಿಗೆ ಪೂರ್ತಿ ನೀರುಣಿಸುವ ಕಾರ್ಯಕ್ರಮವನ್ನು ಈಗಾಗಲೇ ಪ್ರಾರಂಭಿಸಿದೆ.
ಕಳೆದ ಐದು ವರ್ಷಗಳಿಂದ ಬೇಸಿಗೆ ಕಾಲದಲ್ಲಿ ಪಕ್ಷಿಗಳಿಗೆ ನೀರಿನ ಅರವಟ್ಟಿಗೆ ನಿರ್ಮಿಸಿ ಬೇಸಿಗೆ ಪೂರ್ತಿ ನೀರುಣಿಸುತ್ತಿರುವ ನಮ್ಮ ಬಳಗ ಈ ಬಾರಿ ಬಳಸಿ ಎಸೆದ ನೀರಿನ ಬಾಟಲಿಗಳ ಬಳಕೆಯನ್ನು ಕೈಬಿಟ್ಟು, ಮಣ್ಣಿನ ಪಾತ್ರೆ ಮುಚ್ಚಳಿಕೆಗಳನ್ನು ಕಟ್ಟುತ್ತಿದೆ. ಈಗಾಗಲೆ ನೂರೈವತ್ತು ಮುಚ್ಚಳಿಕೆಗಳನ್ನು ಕಟ್ಟಿದ್ದು. ನಗರದ ಹಲವಾರು ಕಡೆ ಪಾರ್ಕ, ರಸ್ತೆಯ ಪಕ್ಕದ ಮರಗಳಿಗೆ ಹೀಗೆ ಹತ್ತು ಹಲವಾರು ಕಡೆ ಕಟ್ಟುವುದರ ಮೂಲ ಪಕ್ಷಿಸಂಕುಲದ ಉಳಿವಿಗೆ ಶ್ರಮಿಸುತ್ತಿದೆ. ಈಗಿನ ಯಾಂತ್ರಿಕ ಜೀವನದಲ್ಲಿ 4ಜಿ 5ಜಿ ಅಂತಹ ಯುಗದಲ್ಲಿ ಪಕ್ಷಿಗಳ ಸಂಕೆ ದಿನದಿಂದ ದಿನಕ್ಕೆ ಇಳಿಯುತ್ತಿದೆ, ಅದರಲ್ಲಿಯೂ ಇಂತಹ ರಣರಣ ಬೇಸಿಗೆಯಲ್ಲಿ ಬಿಸಿಲಿನ ತಾಪಮಾನದಿಂದ ಪಕ್ಷಿಗಳು ಸಾವನ್ನಪ್ಪುವ ಸಂಭವ ಹೆಚ್ಚು. ಆದ ಕಾರಣ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಪಕ್ಷಿಗಳಿಗಾಗಿ ನೀರನ್ನು ಇಡುವ ಮೂಲಕ ಪಕ್ಷಿ ಸಂಕುಲದ ಉಳಿವಿಗೆ, ಪಕ್ಷಿಗಳನ್ನು ರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ರಾಹುಲ್ ಕಟ್ಟಿ ಮನವಿ ಮಾಡಿದ್ದಾರೆ.