ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿ, ಜೀವ ಉಳಿಸಿ

ಬೀದರ್:ಮಾ.28: ಬೇಸಿಗೆಯ ಬಿಸಿಲು ಹೆಚ್ಚಾಗುತ್ತಿದ್ದು, ತಾಪಮಾನದಲ್ಲಿ ಏರಿಕೆಯಾಗಿ, ಕುಡಿಯಲು ನೀರಿಲ್ಲದೇ ಪಕ್ಷಿಗಳು ಸಾವ ನ್ನಪ್ಪುತ್ತಿವೆ. ಅವುಗಳಿಗೆ ಕಾಳು-ಕಡ್ಡಿ ಕುಡಿಯುವ ನೀರಿನ ವ್ಯವಸ್ಥೆ ಮಾಡ ಬೇಕು ಎಂದು ಪಶುವೈದ್ಯ ಕೀಯ ವಿಶ್ವ ವಿದ್ಯಾಲಯ ದಲ್ಲಿ ನಿವೃತ್ತ ಉಪ ಹಣ ಕಾಸು ಅಧಿಕಾರಿಯಾದ ವೀರಭದ್ರಪ್ಪ ಉಪ್ಪಿನ್ ರವರು ಜನತೆಗೆ ಕರೆ ನೀಡಿದರು.
ಅವರು ಇಂದು ಬೀದರ್ ನ ಬರೀದಶಾಹಿ ಉದ್ಯಾನದಲ್ಲಿ ಪಕ್ಷಿಗಳಿಗಾಗಿ ಕುಡಿಯುವ ನೀರಿಗಾಗಿ ವ್ಯವಸ್ಥೆ ಮಾಡಿ ರುವ ಬಾಟಲ್ ಗಳಲ್ಲಿ ನೀರು ತುಂಬಿಸಿ ಮಾತ ನಾಡುತ್ತಿದ್ದರು.ಖಾಲಿಯಾದ ಕುಡಿಯುವ ನೀರಿನ ಬಾಟಲ್, ಮನೆಯಲ್ಲಿ ಖಾಲಿಯಾಗಿ ಬಿಸಾಡ ಬಹುದಾದ ವಸ್ತುಗಳು ಹಾಗೂ ಒಡೆದುಹೋದ ಮಡಿಕೆ- ಕುಡಿಕೆಗಳನ್ನು ಸದುಪಯೋಗ ಪಡಿಸಿ ಕೊಂಡು ಗುಬ್ಬಿ, ಕಾಗೆ, ಹದ್ದು, ಪಾರಿವಾಳ, ಗಿಳಿ ಮುಂತಾದ ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಪ್ರತಿ ವರ್ಷವೂ ಮಾಡಿಕೊಂಡು ಬರಲಾಗುತ್ತಿದೆ. ಅದೇ ನಿಟ್ಟಿನಲ್ಲಿ ಬರೀದಶಾಹಿ ಉದ್ಯಾನದ ಸಾಧ್ಯವಿರುವ ಎಲ್ಲಾ ಕಡೆಗಳಲ್ಲಿ ಹಾಗೂ ನೀರಿನ ಅನುಕೂಲವಿರುವ ನಗರದ ವಿವಿಧ ಭಾಗಗಳಲ್ಲಿ ಈ ವ್ಯವಸ್ಥೆಯನ್ನು ಮಾಡ ಲಾಗುವುದು ಎಂದು ತಿಳಿಸಿ ದರು.
ಗ್ಲೋಬಲ್ ಸೈನಿಕ ಅಕ್ಯಾಡೆಮಿಯ ಮುಖ್ಯಸ್ಥ ನಿವೃತ್ತ ಕರ್ನಲ್ ಶರಣಪ್ಪ ಶಿಕ್ಯಾನಪುರ್ ರವರು ಚಾಲನೆ ನೀಡಿ, ಪಕ್ಷಿ ಸಂಕು ಲಕ್ಕೆ ಉಪಯೋಗ ವಾಗುವ ಈ ಚಟುವಟಿಕೆಯನ್ನು ಶ್ಲಾಘಿಸಿದರು. ಹಿರಿಯ ಯೋಗ ಶಿಕ್ಷಕ-ನಿವೃತ್ತ ಅಧಿಕಾರಿಗಳಾದ ಗಂಗಪ್ಪ ಸಾವಳೆ, ಧೋಂಡಿರಾಮ ಚಾಂದಿವಾಲೆ, ಧನರಾಜ ಸ್ವಾಮಿ, ಸಂಜೀವ ಕುಮಾರ ಶೀಲವಂತ, ಮಲ್ಲಿಕಾರ್ಜುನ ಪಾಟೀಲ, ವೀರಶೆಟ್ಟಿ,ಸಂಜು ಪಾಟೀಲ, ಮಹಾಲಿಂಗಪ್ಪ ಬೆಲ್ದಾಳೆ, ಮೀನಾ, ನಿಜ ಲಿಂಗಪ್ಪ ತಗಾರೆ, ಪುಷ್ಪಾ- ರಮೇಶ, ಅರುಣಾ, ವಿಜ ಯಲಕ್ಷ್ಮಿ ಹಾಗು ಗ್ಲೋಬಲ್ ಸೈನಿಕ ಅಕ್ಯಾಡೆಮಿಯ ಅಸಂಖ್ಯಾತ ಮಕ್ಕಳು ಹಾಜರಿದ್ದರು.