ಪಕ್ಷಿಗಳನ್ನು ಭೇಟಿಯಾಡುತ್ತಿದ್ದ ಇಬ್ಬರ ಬಂಧನ

ಸಂಜೆವಾಣಿ ವಾರ್ತೆ
ನಂಜನಗೂಡು: ಡಿ.21:- ತಾಲೂಕಿನ ಹದಿನಾರು ಗ್ರಾಮದ ಕೆರೆ ಹಾಗೂ ಕಾಲುವೆ ಬಳಿ ಪಕ್ಷಿಗಳನ್ನು ಭೇಟೆಯಾಡುತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಂಥೋನಿ ಸೇವಿಯರ್ ಹಾಗೂ ರೋಹಿತ್ ಬಂಧಿತ ಆರೋಪಿಗಳಾಗಿದ್ದಾರೆ. ಭೇಟೆಯಾಡಿದ ಗ್ರೇಟರ್ ಕಾಕಲ್, ರೆಡ್ ನೆಪಿಯರ್ ಐಬಿಸ್ ಹಾಗೂ ಇತರೆ ಒಟ್ಟು ಏಳು ಪಕ್ಷಿಗಳ ಕಳೇಬರ, ಒಂದು ಸ್ಕೂಟರ್, ಒಂದು ಏರ್ ಗನ್ ಅನ್ನು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ.
ಆರೋಪಿಗಳನ್ನು ನಂಜನಗೂಡು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಸ್ಥಳೀಯರು ನೀಡಿದ ಖಚಿತ ಮಾಹಿತಿ ಮೇರೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮೀಕಾಂತ್, ಡಾ.ಬಸವರಾಜು, ವಲಯ ಅರಣ್ಯಾಧಿಕಾರಿ ನಿತಿನ್ ಕುಮಾರ್, ಉಪ ವಲಯ ಅರಣ್ಯಾಧಿಕಾರಿ ಮದನ್ ಕುಮಾರ್, ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಶರತ್ ಕುಮಾರ್, ವೈಶಾಕ್, ಸುನಿಲ್, ಮಂಜುನಾಥ್, ನಾಗಣ್ಣ ಕಾರ್ಯಾಚರಣೆಯಲ್ಲಿ ಇದ್ದರು.