
ಕಲಬುರಗಿ,ಜು 11: ರಾಜಕೀಯ ರಂಗದಲ್ಲಿ ವಿಪ್ರರು ಪಕ್ಷಾತೀತವಾಗಿ ಭಾಗಿಯಾಗಬೇಕು.ಯುವಕರು ಆಯಾ ಪಕ್ಷದಲ್ಲಿ ಸೇವೆ ಸಲ್ಲಿಸಬೇಕು. ಬ್ರಾಹ್ಮಣ ರಾಜಕೀಯ ವೇದಿಕೆ ಅಸ್ತಿತ್ವಕ್ಕೆ ಬಂದಿದ್ದು ಶ್ಲಾಘನೀಯ, ಪಕ್ಷಾತೀತವಾದಂತಹ ರಾಜಕೀಯ ವೇದಿಕೆಗೆ ವಿಪ್ರ ಸಮಾಜ ಧ್ವನಿಯಾಗಬೇಕು, ಸದಸ್ಯರ ಸಂಖ್ಯೆ ಹೆಚ್ಚಾಗಿಸಿ ಯುವಕರಿಗೆ ಪ್ರಾಧಾನ್ಯತೆ ದೊರೆತು ಪ್ರತಿ ಸದಸ್ಯರು ಸಂಘಟಿತರಾಗಿ ಒಗ್ಗೂಡಿ ಒಂದೇ ಧ್ವನಿಯಲ್ಲಿ ಹೋರಾಟ ಮಾಡಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ರಾಜಕೀಯ ವೇದಿಕೆ ಜೇವರ್ಗಿ ಕಾಲೋನಿಯ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭೀಮಸೇನ್ರಾವ್ ಮಾಡ್ಯಾಳ್ಕರ್ ಮಾತನಾಡಿದರು.ಅತಿಥಿಯಾಗಿ ಭಾಗವಹಿಸಿದ ಕನಕಶ್ರೀ ಪ್ರಶಸ್ತಿ ಪುರಸ್ಕøತ ಹಿರಿಯ ಸಾಹಿತಿ ಡಾ.ಸ್ವಾಮಿರಾವ್ ಕುಲಕರ್ಣಿ ಮಾತನಾಡಿ ರಾಜಕೀಯದಲ್ಲಿ ಅಸಮಾನತೆಯಿಂದಾಗಿ ಸೌಲಭ್ಯದಿಂದ ವಂಚಿತರಾಗಿರುವ ಬ್ರಾಹ್ಮಣ ಸಮುದಾಯಕ್ಕೆ ನ್ಯಾಯ ಸಿಗಬೇಕಾದರೆ ರಾಜಕೀಯವಾಗಿ ಮುಂದುವರಿಯಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಬ್ರಾಹ್ಮಣ ಸಮುದಾಯವು ರಾಜಕೀಯ ಪ್ರವೇಶ ಪಡೆಯಬೇಕಾದ ಅವಶ್ಯಕತೆ ಇದೆ ಸಾಮಾಜಿಕ ಅಭಿವೃದ್ಧಿಯಿಂದ ಅಧಿಕಾರ ಬಲದಿಂದ ಸಾಧ್ಯವಾಗುತ್ತದೆ ಎಂದರು.ಹಿರಿಯ ಪತ್ರಕರ್ತರಾದ ಶ್ರೀನಿವಾಸ್ ಸಿರನೂಕರ್ ಮಾತನಾಡಿ ಐಕ್ಯತೆ, ಮಠ, ಮತ ಸಿದ್ಧಾಂತ ಮರೆತು ಒಂದಾಗಬೇಕು ಈ ಕುರಿತು ಸಾಮಾಜಿಕವಾಗಿ, ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸಬಾರದು ನಾವು ಬ್ರಾಹ್ಮಣರು ಎಂಬ ಹೆಮ್ಮೆ ಜಾಗೃತವಾಗಬೇಕು ಎಂದರು.
ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಜಿಲ್ಲಾಧ್ಯಕ್ಷರವಿ ಲಾತೂರಕರ್ ಮಾತನಾಡಿ ಹೊಸ ಸಂಘಟನೆಯಿಂದ ಎಲ್ಲರಿಗೂ ಕೆಲಸ ಮಾಡುವ ಅವಕಾಶ ಸಿಗುತ್ತದೆ ಎಲ್ಲರೂ ಸಹಕರಿಸೋಣ. ಯುವಕರು ಹಿರಿಯರನ್ನು ಗೌರವಿಸುವ ಪ್ರವೃತ್ತಿ ಬೆಳೆಸಿಕೊಳ್ಳಲಿ ಎಂದು ಕಿವಿ ಮಾತು ಹೇಳಿದರು.
ಪ್ರಕಾಶ್ ಹೆಚ್ ಕುಲಕರ್ಣಿ ಮಾತನಾಡಿ ವಿಪ್ರರು ತಮ್ಮ ಕೃಷಿ ಭೂಮಿಯನ್ನು ಮಾರಾಟ ಮಾಡದೆ ಮುಂದಿನ ಪೀಳಿಗೆಗೆ ಸಂರಕ್ಷಿಸಿಕೊಳ್ಳಬೇಕು, ಯುವಕರು ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು ಸಂಘಟಿತರಾಗಿ ಬೆಳೆಯಬೇಕು ಎಂದರು.
ಸಂಚಾಲಕ ವೀರೇಶ್ ಕುಲಕರ್ಣಿ ಪ್ರಸ್ತಾವಿಕವಾಗಿ ಮಾತನಾಡಿದರು, ರಾಜ್ಯ ಸಂಘಟನಾ ಕಾರ್ಯದರ್ಶಿ ವಿನುತ್ ಎಸ್ ಜೋಶಿ ಸ್ವಾಗತಿಸಿದರು ಡಾ. ಲಕ್ಷ್ಮಿಕಾಂತ್ ಮೊಹರಿರ ನಿರೂಪಿಸಿದರು, ಪಂ.ಸಂಜೀವಾಚಾರ್ಯ ವೇದಘೋಷ ಮಾಡಿದರು.ಭಾರ್ಗವಿ ಕುಲಕರ್ಣಿ ವಂದಿಸಿದರು.
ಸಭೆಯಲ್ಲಿ ಕರ್ನಾಟಕ ಸರ್ಕಾರದ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಅನುದಾನ ಒದಗಿಸುವಂತೆ ನಿರ್ಣಯ ಮಂಡಿಸಲಾಯಿತು ಉಪಸ್ಥಿತರಿದ್ದ ಸದಸ್ಯರು ನಿರ್ಣಯವನ್ನು ಅನುಮೋದಿಸಿದರು.
ಚಂದ್ರಕಾಂತ ನಾಗೂರ್, ರಾಘವೇಂದ್ರ ದೇಸಾಯಿ ವೆಂಕಟೇಶ್ ಕುಲಕರ್ಣಿ, ಡಾ. ದೀಪಕ್ ಯಳಸಂಗಿಕರ್, ಸಂಜೀವ್ ದೇಶಪಾಂಡೆ, ಪ್ರಲ್ಹಾದ ಮಟಮಾರಿ ರಾಜಕೀಯ ವೇದಿಕೆ ಕುರಿತು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಉದ್ದೇಶಿತ ಕಾರ್ಯಕಾರಿ ಸಮಿತಿಯನ್ನು ರಚಿಸಿ ಅನುಮೋದನೆಗೆ ರಾಜ್ಯ ಘಟಕಕ್ಕೆ ಕಳುಹಿಸಲಾಯಿತು.
ಪ್ರಮುಖರಾದ ಡಾ. ಭುರ್ಲೀ ಪ್ರಹ್ಲಾದ, ಪಂ.ನಾರಾಯಣಾಚಾರ್ಯ ಕಮಲಾಪುರ, ಪ್ರಶಾಂತ್ ಕೊರಳ್ಳಿ, ಶಾಮಾಚಾರ್ಯ ಜೋಶಿ ವನದುರ್ಗ, ಶೇಷಗಿರಿ ಹುಣಸಿಗಿ, ವಿನಾಯಕ್ ಕುಲಕರ್ಣಿ, ಕೆ ಅರ್ ಕುಲಕರ್ಣಿ, ಪವನ್ ಕೊರವಿ, ಶ್ರೀರಂಗ ಕರಲಗಿಕರ್, ಸುನಿಲ್ ಜಹಾಗೀರದಾರ್, ಮಾಥರ್ಂಡ ಹೇಮನೂರ್, ಪ್ರಮೋದ್ ಕಾಮನಟಗಿ, ದತ್ತಾತ್ರೇಯ ದೇಸಾಯಿ, ವಿಶ್ವಾಸ್ ಮೋಘೇಕರ್, ಮಧುಸೂದನ್ ಶಾಖಿ, ಸುಬ್ಬರಾವ್ ಸುಬೇದಾರ್, ನಿತಿನ್ ಡೊಂಗರೆ, ಪ್ರಮೋದ್ ಪಾಟೀಲ್, ಆನಂದ ಕುಲಕರ್ಣಿ, ಗೋಪಾಲಕೃಷ್ಣ, ಮಂಜುನಾಥ ಕುಲಕರ್ಣಿ, ಆನಂದ ಕುಲಕರ್ಣಿ, ನಾರಾಯಣರಾವ್ ಕುಲಕರ್ಣಿ ಗೋಪಾಲರಾವ್ ಕುಲಕರ್ಣಿ, ರಾಘವೇಂದ್ರ ಪಾಟೀಲ್ ನಾರಾಯಣ ದೇಸಾಯಿ ಸೇರಿದಂತೆ ಶ್ರೀಮಠದ ಸದಸ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.