ಪಕ್ಷನಿಷ್ಠೆ ಕಾಡಾ ಅಧ್ಯಕ್ಷರಾಗಿ ಕೊಲ್ಲಾ ಶೇಷಗಿರಿರಾವ್

ಸಿಂಧನೂರು.ಜು.೨೬- ಬಿಜೆಪಿ ಪಕ್ಷದ ಸಂಘಟನೆ ಹಾಗೂ ಪಕ್ಷ ನಿಷ್ಠೆ ಗುರುತಿಸಿ ಬಿಜೆಪಿ ಪಕ್ಷ ಕೊಲ್ಲಾ ಶೇಷಗಿರಿರಾವ್‌ಗೆ ಕಾಡಾ ಅಧ್ಯಕ್ಷಸ್ಥಾನ ನೀಡಿದ್ದು ಇದರಿಂದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಹರ್ಷವ್ಯಕ್ತಪಡಿಸಿ ಸನ್ಮಾನಿಸಿ ಸಂಭ್ರಮಿಸಿದರು.
ಸಿಂಧನೂರು ತಾಲೂಕಿನಲ್ಲಿ ಬಿಜೆಪಿ ಪಕ್ಷ ಅಸ್ತಿತ್ವದಲ್ಲಿಲ್ಲದಾಗ ಸಾಮಾನ್ಯ ಕಾರ್ಯಕರ್ತರಾಗಿ ಬಂದ ಕೊಲ್ಲಾ ಶೇಷಗಿರಿರಾವ್ ಯಾವುದೇ ಅಧಿಕಾರ ಅಂತಸ್ತು ಇಲ್ಲದೆ ನಿಷ್ಠೆಯಿಂದ ಪಕ್ಷ ಸಂಘಟನೆ ಮಾಡಿ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದ ಅವರನ್ನು ಗುರುತಿಸಿ ಬಿಜೆಪಿ ಪಕ್ಷ ಕಾಡಾ ಅಧ್ಯಕ್ಷ ಸ್ಥಾನ ನೀಡಿದ್ದು ಇದರಿಂದ ತಾಲೂಕಿನಲ್ಲಿ ಪಕ್ಷ ಸಂಘಟನೆ ಮಾಡಲು ಇನ್ನಷ್ಟು ಆನೆಬಲ ಬಂದಂತಾಗಿದೆ.
ಬಿಜೆಪಿ ಪಕ್ಷದ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾದ ಕೊಲ್ಲಾ ಶೇಷಗಿರಿರಾವ್ ಪಕ್ಷ ಸಂಘಟನೆ ಮಾಡುವ ಜೊತೆಗೆ ಕೇಂದ್ರ ಹಾಗೂ ರಾಜ್ಯಸರಕಾರದ ಜನಪರ ಯೋಜನೆಗಳನ್ನು ಕ್ಷೇತ್ರದ ಜನರ ಮನೆ ಬಾಗಿಲಿಗೆ ಮುಟ್ಟಿಸುವ ಪ್ರಾಮಾಣಿಕ ಕೆಲಸ ಮಾಡಿ ಪಕ್ಷದ ಮುಖಂಡರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸಿಂಧನೂರಿನಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪ್ರಬಲ ಪಕ್ಷಗಳ ಮುಖಂಡರ ಮಧ್ಯ ಕೊಲ್ಲಾ ಶೇಷಗಿರಿರಾವ್ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿ ಕ್ಷೇತ್ರದಲ್ಲಿ ಅಸ್ತಿತ್ವ ಇಲ್ಲದಂತ್ತಿದ್ದ ಪರಿಸ್ಥಿತಿಯಲ್ಲಿ ಕೆಲವೆ ಜನ ಪಕ್ಷದ ಕಾರ್ಯಕರ್ತರನ್ನು ಕಟ್ಟಿಕೊಂಡು ಎರಡು ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸಿಂಧನೂರಿನಲ್ಲಿ ಬಿಜೆಪಿ ಪಕ್ಷ ಇದೆ ಎನ್ನುವ ಮಟ್ಟಿಗೆ ಪಕ್ಷ ಸಂಘಟನೆ ಮಾಡಿದ್ದು ಹಿಂದೆ ಬಿಜೆಪಿ ಪಕ್ಷ ಕಂಡರೆ ಹಾಗೂ ಪಕ್ಷ ಸೇರುವಂತೆ ಯಾರಾದರು ಹೇಳಿದರೆ ಮೂಗು ಮುರಿದುಕೊಳ್ಳುತ್ತಿದ್ದ ಮುಖಂಡರುಗಳು ಕೊಲ್ಲಾ ಶೇಷಗಿರಿರಾವ್ ಕಟ್ಟಿದ ಪಕ್ಷದ ಹುತ್ತಿನಲ್ಲಿ ಹಾವುಗಳಾಗಿ ಸೇರಿಕೊಂಡು ಕೊಲ್ಲಾಗೆ ಬುಸುಗುಟ್ಟುತ್ತಿವೆ ಎಂಬುದು ನಿಷ್ಠಾವಂತ ಮೂಲ ಬಿಜೆಪಿ ಕಾರ್ಯಕರ್ತರ ಅಳಲಾಗಿದೆ.
ಅಧಿಕಾರ ಇರಲಿ ಹಾಗೂ ಇಲ್ಲದಿರಲಿ ಕೊಲ್ಲಾ ಶೇಷಗಿರಿರಾವ್ ಸಾಮಾನ್ಯ ಕಾರ್ಯಕರ್ತರಾಗಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ್ದು ಇವರಿಗೆ ಕಾಡಾ ಅಧ್ಯಕ್ಷ ಸ್ಥಾನ ನೀಡಿದ್ದು ಉಳಿದ ಕಾರ್ಯಕರ್ತರು ಇನ್ನು ಮುಂದೆ ಪಕ್ಷ ಸಂಘಟನೆ ಮಾಡಲು ಈ ಕಾಡಾ ಅಧ್ಯಕ್ಷ ಹುದ್ದೆ ವರದಾನವಾಗಿದೆ.