ಪಕ್ಷದ ಸಂಘಟನೆ ಬಲಪಡಿಸಬೇಕು : ಶಾಸಕ ಚರಂತಿಮಠ

ಬಾಗಲಕೋಟೆನ.8 : ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಮನದಟ್ಟು ಮಾಡುವ ಮೂಲಕ ಪಕ್ಷದ ಸಂಘಟನೆಯನ್ನು ಬಲಪಡಿಸಬೇಕು ಎಂದು ಶಾಸಕ ಬಿಟಿಡಿಎ ಅಧ್ಯಕ್ಷ ಡಾ.ವೀರಣ್ಣ ಚರಂತಿಮಠ ಸಲಹೆ ನೀಡಿದರು.
ನಗರದ ಎಪಿಎಂಸಿ ಅಥಣಿ ಕಲ್ಯಾಣಮಂಟಪದಲ್ಲಿ ಹಾಗೂ ಮುಚಖಂಡಿ ವೀರಭದ್ರೇಶ್ವರ ಸಭಾಭವನದಲ್ಲಿ ಭಾರತಿ ಜನತಾ ಪಕ್ಷದ ನಗರ ಹಾಗೂ ಗ್ರಾಮೀಣ ಭಾಗದ ಎರಡು ದಿನಗಳ ಪ್ರಶಿಕ್ಷಣ ವರ್ಗಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೂತಮಟ್ಟದಲ್ಲಿ ಪಕ್ಷದ ಸಂಘಟನೆಯನ್ನು ಕಾರ್ಯಕರ್ತರು ಕೆಲಸ ಮಾಡಿದ ಪರಿಣಾಮ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಇದರ ಜತೆಗೆ ಶಾಸಕರ ಸಂಖ್ಯೆ, ಸಂಸದರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ.
ನಗರಸಭೆ, ಬಿಟಿಡಿಎ, ಗ್ರಾಮ ಪಂಚಾಯ್ತಿ, ತಾಲ್ಲೂಕ ಪಂಚಾಯ್ತಿ, ಜಿಲ್ಲಾ ಪಂಚಾಯ್ತಿಗಳಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ ಹೆಚ್ಚಾಗಲು ಕಾರ್ಯಕರ್ತರ ಶ್ರಮ ಬಹಳ ಇದೆ. ಇನ್ನಷ್ಟು ಶಕ್ತಿಯುತವಾಗಿ ಬಿಜೆಪಿಯನ್ನು ಬಲಪಡಿಸಬೇಕಾದರೆ ಗ್ರಾಮೀಣ ಭಾಗದಲ್ಲಿ ಸರ್ಕಾರದ ಸಾಧನೆಯನ್ನು ಪ್ರತಿಯೊಂದು ಮನೆ ಮನೆಗೆ ತಿಳಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಕೇಂದ್ರ ಹಾಗೂ ರಾಜ್ಯದ ಸೂಚನೆಯಂತೆ ಎರಡು ದಿನಗಳ ಪ್ರಶಿಕ್ಷಣ ವರ್ಗಕ್ಕೆ ತಾವೆಲ್ಲರೂ ಭಾಗವಹಿಸಿ ಬದಲಾದ ರಾಜಕಾರಣದ ಮತ್ತು ನಮ್ಮ ಜವಾಬ್ದಾರಿ ಹಿಂದಿನ ಆರು ವರ್ಷಗಳಲ್ಲಿ ನಡೆದ ಅಂತ್ಯೋದಯ ಪ್ರಯತ್ನಗಳು, ರಕ್ಷಣಾ ಸಾಮರ್ಥ್ಯದ ಜೊತೆಗೆ ಆತ್ಮ ನಿರ್ಭರ ಭಾರತ ಸಂಕಲ್ಪ ನಮ್ಮ ವಿಚಾರದಾರೆ ಇಂದಿನ ಭಾರತದ ಮುಖ್ಯ ವಿಚಾರಧಾರೆ ,ನಮ್ಮ ಕಾರ್ಯಪದ್ಧತಿ ಮತ್ತು ಸಂಘಟನೆಯ ಸಂರಕ್ಷಣೆಯಲ್ಲಿ ನಮ್ಮ ಪಾತ್ರ ವ್ಯಕ್ತಿತ್ವ ವಿಕಸನ, ನಮ್ಮ ಪರಿವಾರ, ಬಿಜೆಪಿ ಇತಿಹಾಸ ಮತ್ತು ಕೇಂದ್ರ ಮತ್ತು ರಾಜ್ಯ ಭಾಜಪ ಸರ್ಕಾರದ ಸಾಧನೆಗಳನ್ನು ಅರಿತುಕೊಳ್ಳಬೇಕು ಎಂದರು. ವ್ಯಕ್ತಿಗಿಂತ ಪಕ್ಷ ಮೊದಲು, ಪಕ್ಷಕ್ಕಿಂತ ದೇಶ ಮೊದಲು ಹೀಗೆ ನಾವೆಲ್ಲರೂ ಪಕ್ಷ ಹಾಗೂ ದೇಶಕ್ಕಾಗಿ ಎಂದೆಂದೂ ಭಾರತೀಯ ಜನತಾ ಪಕ್ಷದ ಜೊತೆಯಲ್ಲಿ ಮುನ್ನಡೆಯೋಣ ಎಂದು ಕಾರ್ಯಕರ್ತರಿಗೆ ಹೇಳಿದರು.
ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಬಾಂಡಗೆ, ಜಿ.ಎನ್ ಪಾಟೀಲ, ಅಶೋಕ ಲಿಂಬಾವಳಿ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ವಿಭಾಗ ಸಹ ಪ್ರಭಾರಿ ಬಸವರಾಜ ಯಂಕಂಚಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಜಿಲ್ಲಾ ಉಪಾಧ್ಯಕ್ಷ ರಾಜು ರೇವನಕರ, ಕಾರ್ಯದರ್ಶಿ ರಾಜು ಮುದೇನೂರ, ನಗರ ಅಧ್ಯಕ್ಷ ಬಸವರಾಜ ಅವರಾದಿ, ಗ್ರಾಮೀಣ ಅಧ್ಯಕ್ಷ ಸುರೇಶ ಕೊನ್ನೂರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.