ಪಕ್ಷದ ಸಂಘಟನೆಗೆ ದುಡಿಯಲು ಕರೆ

ಚಿಂಚೋಳಿ ಮಾ.26 : ತಾಲೂಕಿನ ಬಿಜೆಪಿ ಪಕ್ಷದ ಯುವ ಮೋರ್ಚಾದ ಕಾರ್ಯಕಾರಣಿ ಸಭೆ ಜರುಗಿತು ಸಭೆ ಉದ್ದೇಶಿಸಿ ಬಿಜೆಪಿ ಪಕ್ಷದ ಯುವ ಮೋರ್ಚಾ ತಾಲೂಕ್ಕು ಅಧ್ಯಕ್ಷ ಸತೀಶರೆಡ್ಡಿ ತಾಜಲಾಪೂರ ಅವರು ಮಾತನಾಡಿ ಚಿಂಚೋಳಿ ತಾಲೂಕಿನಲ್ಲಿ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಮುಂಬರುವ ಜಿಲ್ಲಾ ಪಂಚಾಯತ ತಾಲೂಕ ಪಂಚಾಯತ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವಿಗಾಗಿ ಯುವಮೋರ್ಚಾದ ಕಾರ್ಯಕರ್ತರು ಹಗಲಿರುಳು ದುಡಿದು ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಪಡಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕಲ್ಬುರ್ಗಿ ಜಿಲ್ಲಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ವೀರು ಪಾಟೀಲ, ಬಿಜೆಪಿ ಪಕ್ಷದ ತಾಲೂಕ ಅಧ್ಯಕ್ಷರಾದ ಸಂತೋಷ್ ಗಡಂತಿ, ಪ್ರೀತಮ್ ಪಾಟೀಲ, ರೇವಣಸಿದ್ಧ ಬಡ, ಅನೀಲ ಕಂಟ್ಲಿ ಕಲ್ಲೂರ್, ಮತ್ತು ಬಿಜೆಪಿ ಯುವಮೋರ್ಚಾದ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.