ಪಕ್ಷದ ಬಲವರ್ಧನೆಗೆ ಜೆಡಿಎಸ್ ಕಚೇರಿಯಲ್ಲಿ
ಎಸ್ಸಿ ಘಟಕದ ಸಭೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಜ,14- ನಗರದ ಜಿಲ್ಲಾ ಜನತಾದಳ ಕಛೇರಿಯಲ್ಲಿ ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ  ಅಧ್ಯಕ್ಷ  ಡಾ|| ವಿ. ಅಮರ್ ನಾಥ್  ಅವರು ನೇತೃತ್ವದಲ್ಲಿ. ಜಿಲ್ಲಾ ಪರಿಶಿಷ್ಟ ಜಾತಿ ವಿಭಾಗದ ಪದಾಧಿಕಾರಿಗಳ ಸಭೆ ನಿನ್ನೆ ನಡೆಯಿತು.
ನಂತರ ಮಾತನಾಡಿದ  ಮಾಜಿ ಪ್ರಧಾನಿ  ದೇವೇಗೌಡರು ಮತ್ತು  ಮಾಜಿ   ಮುಖ್ಯ ಮಂತ್ರಿ ಕುಮಾರಸ್ವಾಮಿಯವರ ರಾಜ್ಯದಲ್ಲಿ  ಪರಿಶಿಷ್ಟ ಜಾತಿ ಸಮುದಾಯವನ್ನು ಮುಖ್ಯವಾಹಿನಿಗೆ ತರುವಲ್ಲಿ ತಮ್ಮದೇ ಕೊಡುಗೆ ನೀಡಿದ್ದಾರೆ.
ಆಶೋಕ್ ಕುಮಾರ್ ಅವರು ಮಾತನಾಡಿ ಜೆಡಿಎಸ್ ಪಕ್ಷವು ಮಹಿಳೆಯರಿಗೆ ಹೆಚ್ಚಿನ ಪ್ರಾಶ್ಯಸ್ತ ನೀಡಿದ್ದು ಮುಂದಿನ ದಿನಗಳಲ್ಲಿ ಈ ಪಕ್ಷಕ್ಕೆ ಬೆಂಬಲ ನೀಡಲು ಕೋರಿದರು.
ನಂತರ ಸಭೆಯಲ್ಲಿ ಬಳ್ಳಾರಿ ಜಿಲ್ಲಾ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಮುಕ್ಕಣ್ಣ ಮಾತನಾಡಿ ಮುಂದೆ ಬರುವ ಚುನಾವಣೆಯಲ್ಲಿ ಪಕ್ಷವನ್ನು ಬೆಂಬಲಿಸಲು ಮನವಿ‌ಮಾಡಿದರು.
ಬಳ್ಳಾರಿ ಜಿಲ್ಲಾ ಜಂಟಿ ಕಾರ್ಯದರ್ಶಿ ಪಂಪಾಪತಿಯವರು ಮಾತನಾಡಿ ಸಮಾಜದ ಏಳಿಗೆಗಾಗಿ ನಾವು ಕಂಕಣ ಬದ್ದರಾಗಿ ನಿಲ್ಲಬೇಕೆಂದರು.
ಜಿಲ್ಲಾ ಸಂಘಟನ ಕಾರ್ಯದರ್ಶಿ  ಕೋರಿ ಅಂಜಿನಿಮಾತನಾಡಿ,  2023ರ ಚುನಾವಣೆಯಲ್ಲಿ ಈ ಸಮಾಜದವರು ಪಕ್ಷಕ್ಕೆ ಮತ ನೀಡಿ ಆಧಿಕಾರಕ್ಕೆ ತರಬೇಕೆಂದರು
ಜಿಲ್ಲಾಧ್ಯಕ್ಷ ಪಿ. ಎಸ್. ಸೋಮಲಿಂಗನ ಗೌಡ ಅವರು  ಮಾತನಾಡಿ, ಪಕ್ಷದಲ್ಲಿ ಸಣ್ಣ ಪುಟ್ಟ ಬಿನ್ನಾಬಿಪ್ರಯಗಳನ್ನು ಮರೆತು ,ಪಕ್ಷವನ್ನು ಸಂಘಟಿಸಲು ಸಮಾಜದ ಮುಂಖಡರಿಗೆ, ಪದಾಧಿಕಾರಿಗಳಿಗೆ, ಕಾರ್ಯಕರ್ತರಿಗೆ ಮನವಿ ಮಾಡಿದರು. ಮುಂದೆ ಪರಿಶಿಷ್ಟ ಜಾತಿ ಸಮಾಜಕ್ಕೆ ಹೆಚ್ಚಿನ ಸೌಲಭ್ಯಗಳನ್ನು ನೀಡಲಾಗುತ್ತದೆಂದು ತಿಳಿಸಿದರು.
ದೇವೇಂದ್ರ ಗೌಡ ಅವರು  ಮಾತನಾಡಿ ಮುಂದಿನ ಚುನಾವಣೆಯಲ್ಲಿ ಕುಮಾರಣ್ಣನವರ ಕೈ ಬಲಪಡಿಸಲು ಮನವಿ ಮಾಡಿದರು.
ರಾಜ್ಯ ಉಪಾಧ್ಯಕ್ಷ ಆಶೋಕ್ ಕುಮಾರ್ ,ಮಹಾ ಪ್ರದಾನ ಕಾರ್ಯದರ್ಶಿ ಕಿರಣ್ ಕುಮಾರ್, ಪ್ರದಾನ ಕಾರ್ಯದರ್ಶಿ ರಾಜಶೇಖರ್, ಜಂಟಿ ಕಾರ್ಯದರ್ಶಿ ಕೃಷ್ಣಪ್ಪ ಭಾಗವಹಿಸಿದ್ದರು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಪಿ ಎಸ್ ಸೋಮಲಿಂಗನ ಗೌಡ ವಹಿಸಿದ್ದರು
ಸಭೆಯಲ್ಲಿ 5 ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರುಗಳು ಜಿಲ್ಲಾ ಪಧಾಧಿಕಾರಿಗಳು ಹಾಗು ಮಹಿಳಾ ಘಟಕದ ಪಧಾಧಿಕಾರಿಗಳು ಹಾಜರಿದ್ದರು ಆನೇಕ ಮಹಿಳೆಯರು, ಪುರುಷರು, ಯುವಕರು ಪಕ್ಷಕ್ಕೆ ಸೇರ್ಪಡೆಯಾದರು.
ಸಭೆ ವಂದನೆಗಳೂಂದಿಗೆ ಮುಕ್ತಾಯವಾಯಿತು.