ಪಕ್ಷದ ಘನತೆ ಉಳಿಸಿ: ಶಾಸಕ ಮಂಜುನಾಥ್

ಮುಳಬಾಗಿಲು.ಏ.೩೦-ಹಾಸನ ಸಂಸದ ಪ್ರಜ್ವಲ್ ಹಾಗೂ ಹಿರಿಯ ಶಾಸಕ ಹೆಚ್. ಡಿ. ರೇವಣ್ಣ ಮೇಲೆ ಕೇಳಿಬಂದಿರುವ ಮಹಿಳೆಯಾರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಬಗ್ಗೆ ಮುಳಬಾಗಿಲು ಜೆಡಿಎಸ್ ಶಾಸಕ ಸಮೃದ್ಧಿ ವಿ.ಮಂಜುನಾಥ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿ ರಾಜ್ಯದ ಜನತೆಯ ಮುಂದೆ ತಲೆತಗ್ಗಿಸುವಂತ ಕೆಲಸ ಮಾಡಿದವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಘನತೆಯನ್ನು ಉಳಿಸಬೇಕಿದೆ ಎಂಬ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಹಾಸನ ನಗರ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಸ್ವಪಕ್ಷೀಯ ಶಾಸಕರು ತಿರುಗಿ ಬಿದ್ದಿದ್ದು ಇದಕ್ಕೆ ಇಂಬು ನೀಡಿದೆ. ಇತ್ತೀಚಿನ ದಿನಗಳಲ್ಲಿ “ಹಾಸನದ ಲೀಲೆಗಳು ” ಮಾಧ್ಯಮಗಳಲ್ಲಿ ಪ್ರಜ್ವಲಿಸುತ್ತಿರುವುದು ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ ರಾಜ್ಯದ ಎಲ್ಲೆಡೆ ಮುಜುಗರಕ್ಕೆ ಒಳಗಾಗುತ್ತಿರುವುದಲ್ಲದೆ ಹೊರಗಡೆ ಪಕ್ಷದ ಹೆಸರು ಹೇಳಲು ಸಹ ಹೇಸಿಗೆ ಅನಿಸುವಂತ ಸ್ಥಿತಿಗೆ ತಲುಪಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಮಾಧ್ಯಮದವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದ ದಯನೀಯ ಪರಿಸ್ಥಿತಿ ಮೊದಲ ಬಾರಿಗೆ ಶಾಸಕನಾಗಿರುವ ನನಗೆ ಕಷ್ಟಕರ ಸನ್ನಿವೇಶಗಳು ಎದುರಾಗುತ್ತಿದ್ದರೆ, ಸಾಮಾನ್ಯ ಕಾರ್ಯಕರ್ತರ ಪರಿಸ್ಥಿತಿಯಾದರೇನು ಯೋಚಿಸಿ.ಮಾನ್ಯ ಜೆಡಿಎಸ್ ಪಕ್ಷದ ವರಿಷ್ಠರು, ರಾಷ್ಟ್ರೀಯ ಅಧ್ಯಕ್ಷರು ಶ್ರೀ ಹೆಚ್. ಡಿ. ದೇವೇಗೌಡ ಅಪ್ಪಾಜಿ ರವರು, ರಾಜ್ಯದ್ಯಕ್ಷರು ಶ್ರೀ ಹೆಚ್. ಡಿ. ಕುಮಾರಣ್ಣರವರು ಸುತ್ತ ತೀರ್ಮಾನ ತಿಳಿದುಕೊಳ್ಳಬೇಕಾದ ಸಮಯವಿದಾಗಿದೆ.
ನಿಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ೧೯ ಜನ ಶಾಸಕರ ಬಹುಷ್ಯ ಬೇಕೋ ತಮ್ಮ ಕುಟುಂಬದ ರೇವಣ್ಣ ರವರು, ಪ್ರಜ್ವಲ್ ರವರು ಮುಖ್ಯವೂ ತೀರ್ಮಾನಿಸಬೇಕಿದೆ.
೨೪ ಗಂಟೆಗಳಲ್ಲಿ ಆರೋಪ ಹೊಂದಿರುವ ರೇವಣ್ಣ ಮತ್ತು ಪ್ರಜ್ವಲ್ ರವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಸಿದ್ಧಾಂತಗಳನ್ನು ಉಳಿಸಿ ಕಾರ್ಯಕರ್ತರನ್ನು ನಮ್ಮನ್ನು ಮುಜುಗರದಿಂದ ಪಾರು ಮಾಡಲು ಕೋರುತ್ತೇನೆ.
ನಿಮ್ಮ ತೀರ್ಮಾನದ ಮೇಲೆ ಪಕ್ಷದ ಮುಂದಿನ ಭವಿಷ್ಯವಿದಿವೆಂಬುದು ಮತ್ತೊಮ್ಮೆ ತಿಳಿಸಲು ಬಯಸುತ್ತೇನೆ ಎಂದು ಶಾಸಕ ಸಮೃದ್ಧಿ ಮಂಜುನಾಥ್ ಜೆಡಿಎಸ್ ಪಕ್ಷದ ವರಿಷ್ಠರಲ್ಲಿ ನೋವು ಹಂಚಿಕೊಂಡಿದ್ದಾರೆ.